ದೊಡ್ಡಬಳ್ಳಾಪುರ: ಇಲ್ಲಿನ ನವೋದಯ ಚಾರಿಟಬಲ್ ಟ್ರಸ್ಟ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆನ್ ಲೈನ್ ವೆಬಿನಾರ್ ಮೂಲಕ ಯುವಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಅರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, ತಂಬಾಕು ದುಷ್ಪರಿಣಾಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಜಾಗೃತಿ ಮೂಡಿಸಲಾಗುತ್ತಿದ್ದು, ತಂಬಾಕು ಮಾರಾಟ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಪಡೆ ರಚಿಸಲಾಗು ತ್ತಿದೆ ಎಂದರು.
ಜಿಲ್ಲಾ ಮನೋವೈದ್ಯ ಡಾ.ಗಿರೀಶ್, ಸಿಎಫ್‌ಟಿಎಫ್‌ಕೆ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿ ಎಸ್.ಜೆ. ಚಂದರ್ ಮತ್ತು ಪರಿಸರವಾದಿ ಬಿ.ಟಿ.ರಾಘವೇಂದ್ರ ಪ್ರಸಾದ್‌ರವರು ತಂಬಾಕಿನಿಂದಆಗುವ ದುಷ್ಪರಿ ಣಾಮಗಳ ಬಗ್ಗೆ ವಿಚಾರ ಮಂಡಿಸಿದರು.
ನವೋದಯ ಟ್ರಸ್ಟ್‌ನ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ, ತಂಬಾಕು ಮಹಾಮಾರಿಗೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಶೋಕಿಗಾಗಿ ಕಲಿತ ಹವ್ಯಾಸ ಮುಂದೆ ಚಟವಾಗಿ ಪರಿವರ್ತನೆ ಹೊಂದಿ ಮಾನಸಿಕವಾಗಿ ಖನ್ನತೆಗೆ ಒಳಗಾಗಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವನೆ ಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಅಧಿ ಕಾರಿ ಡಾ.ಶಾಂತಲ, ಸುರಾನಾ ಕಾಲೇಜಿನ ಪ್ರಾಂಶು ಪಾಲರಾದ ಶಕುಂತಲಾ ಸ್ಯಾಮ್ಯುಯೆಲ್ಸನ್, ಸುರಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅರ್ಚನಾ ಕೆ.ಭಟ, ಎನ್‌ಎಸ್‌ಎಸ್ ವಿಭಾಗದ ಕಾರ್ಯ ಕ್ರಮ ಅಧಿಕಾರಿ ಗಿರೀಶ್ ಸೇರಿದಂತೆ ನವೋದಯ ಟ್ರಸ್ಟ್ ನ ಪದಾಧಿಕಾರಿಗಳು, ಸುರಾನ ಕಾಲೇಜಿನ ಮನೋ ವಿಜ್ಞಾನ ವಿಭಾಗದ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.