Advertisement

ಉನ್ನತೀಕರಿಸಿದ ಟೆಕ್ನಾಲಜಿ ಹಬ್‌ ಲೋಕಾರ್ಪಣೆ

06:23 PM Jun 21, 2022 | Team Udayavani |

ಚಾಮರಾಜನಗರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರದ ವಿನೂತನ ಉದ್ಯೋಗ ಯೋಜನೆಯಡಿ ಜಾಗತಿಕ ಕೈಗಾರಿಕೆ ಹಾಗೂ ಅಸೆಂಬ್ಲಿ ಲೈನುಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಯುವಜನತೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ತರಬೇತಿ ನೀಡುವ ಸಲುವಾಗಿ ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲಾಗಿರುವ ಟೆಕ್ನಾಲಜಿ ಹಬ್‌ಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬೇಸ್‌ ಕ್ಯಾಂಪ್‌ನಲ್ಲಿ ವರ್ಚುವಲ್‌ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು.

Advertisement

ನಗರ ಸಮೀಪ ಕಾಳನಹುಂಡಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ 33 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲಾಗಿರುವ
ಟೆಕ್ನಾಲಜಿ ಹಬ್‌ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ 83.29 ಲಕ್ಷ ರೂ.ಗಳ ವೆಚ್ಚದಲ್ಲಿ ಐಟಿಐ ವರ್ಕ್‌ಶಾಪ್‌ ಮತ್ತು 41.40 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಟಿಐ ಟೆಕ್‌ಲ್ಯಾಬ್‌ ಅನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಟಾಟಾ ಟೆಕ್ನಾಲಜೀಸ್‌ ಸಹಯೋಗದೊಂದಿಗೆ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಟೆಕ್ನಾಲಜಿ ಹಬ್‌ಗಳನ್ನಾಗಿ ಉನ್ನತೀಕರಿಸಲಾ ಗಿದ್ದು, ಜಿಲ್ಲೆಯ ಬೇಗೂರು, ಚಾಮರಾಜ ನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಈ ಯೋಜನೆಗೆ ಆಯ್ಕೆಗೊಂಡಿವೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಉನ್ನತೀಕರಿಸಲಾಗಿರುವ ಟೆಕ್ನಾಲಜಿ ಹಬ್‌ ಗಳ ಅನುಕೂಲ ಪಡೆಯುವಂತೆ ತಿಳಿಸಿ ಶುಭ ಹಾರೈಸಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಟಿ.ಎಂ. ರಂಗಸ್ವಾಮಿ ಮಾತನಾಡಿ, ಉನ್ನತೀಕರಿಸಲಾಗಿರುವ ಟೆಕ್ನಾಲಜಿ ಹಬ್‌ಗಳಿಗೆ ಅಡ್ವಾನ್ಸ್ ಡ್‌ ಸಿಎನ್‌ಸಿ ಮೆಷಿನಿಂಗ್‌ ಟೆಕ್ನಿಷಿಯನ್‌, ಆರಿrಸಿಯನ್‌ ಯೂಸಿಂಗ್‌ ಅಡ್ವಾನ್ಸ್‌ಡ್‌ ಟೂಲ್‌, ಬೇಸಿಕ್‌ ಡಿಸೈನರ್‌ ಆಂಡ್‌ ವರ್ಚುವೆಲ್‌ ವೆರಿಫೈಯರ್‌(ಮೆಕಾನಿಕಲ್‌), ಮೆಕಾನಿಕ್‌ ಎಲೆಕ್ಟ್ರಿಕಲ್‌ ವೆಹಿಕಲ್‌, ಮ್ಯಾನುಫ್ಯಾಕ್ಚರಿಂಗ್‌ ಪ್ರೋಸೇಸ್‌ ಕಂಟ್ರೋಲ್‌ ಆಂಡ್‌ ಆಟೋಮೇಷನ್‌ ಹಾಗೂ ಇಂಡಸ್ಟ್ರೀಯಲ್‌ ರೋಬೋಟಿಕ್ಸ್‌ ಆಂಡ್‌ ಟಿಜಿಟಲ್‌ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಿಷಿಯನ್‌ ಸೇರಿದಂತೆ ಒಟ್ಟಾರೆ 6 ಹೊಸ ಕೋರ್ಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದರು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಎಸ್‌. ಸುರೇಂದ್ರ, ಎಂಜಿನಿಯರ್‌ ಎನ್‌. ಭೀಮಸಾಗರ್‌, ಟಾಟಾ ಟೆಕ್ನಾಲಜಿ ಸೆಬ್ಜೆಕ್ಟ್ ಸ್ಪೆಷಲಿಸ್ಟ್‌ ಸಿ. ಕುಮಾರ್‌, ಶಿವಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಸಿ. ಮಹದೇವಮ್ಮ ಹಾಜರಿದ್ದರು. ಬಳಿಕ ಶಾಸಕ ಸಿ. ಪುಟ್ಟರಂಗಶೆಟ್ಟಿ , ಉನ್ನತೀಕರಿಸಲಾಗಿರುವ ಟೆಕ್ನಾಲಜಿ ಹಬ್‌ಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ವರ್ಚುವಲ್‌ ಮೂಲಕ ಲೋಕಾರ್ಪಣೆಗೊಳಿಸಿದ ಕಾರ್ಯಕ್ರಮವನ್ನು ವೀಕ್ಷಿಸಿದರು.

Advertisement

ಐಟಿಐ ತಾಂತ್ರಿಕ ಕೇಂದ್ರಕ್ಕೆ ಶಾಸಕ ಚಾಲನೆ
ಹನೂರು: ಐಟಿಐ ಕಾಲೇಜನ್ನು ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಣಗೊಳಿಸಿರುವುದು ಹಳ್ಳಿಭಾಗದ ವಿದ್ಯಾರ್ಥಿ ಗಳಿಗೆ ವರದಾನವಾಗಿದೆ ಎಂದು ಶಾಸಕ ಆರ್‌.ನರೇಂದ್ರ ಹೇಳಿದರು. ಪಟ್ಟಣದ ಹೊರವಲಯದ ಹುಲುಸುಗುಡ್ಡೆ ಸಮೀಪ 1.46 ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳಿಸಿರುವ ತಾಂತ್ರಿಕ ಕೇಂದ್ರವನ್ನು ಲೋಕಾರ್ಪ ಣೆಗೊಳಿಸಿ ಮಾತನಾಡಿ, ರಾಜ್ಯದಲ್ಲಿನ 100 ಐಟಿಐ ಕಾಲೇಜನ್ನು ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲಾಗುತ್ತಿದ್ದು ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸುತ್ತಿದ್ದಾರೆ ಎಂದರು.

ಈ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ತಾಂತ್ರಿಕ ಯುಗದಲ್ಲಿ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಪದವಿಗಿಂತ ಹೆಚ್ಚಿನ ಬೇಡಿಕೆ ತಾಂತ್ರಿಕ ಕೋರ್ಸು ಗಳಿಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಉನ್ನತ ಹುದ್ದೆಗಳಿಗೆ ತೆರಳಬೇಕು ಎಂದು ಸಲಹೆ ಹೇಳಿದರು. ಕಾಲೇಜು ಪ್ರಾಂಶುಪಾಲರು ಸುತ್ತುಗೋಡೆ ನಿರ್ಮಾಣ ಮಾಡಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಅಂದಾಜುಪಟ್ಟಿ ಸಲ್ಲಿಸಿಕೊಟ್ಟಲ್ಲಿ ಸಂಬಮಧಪಟ್ಟ ಸಚಿವರ ಜೊತೆ ಮಾರುನಾಡುವುದಾಗಿ ತಿಳಿಸಿ, ಅಂದಾಜುಪಟ್ಟಿ ತಯಾರಿಸಲು ಅಭಿಯಂತರ
ರಮೇಶ್‌ಗೆ ಸೂಚನೆ ನೀಡಿ ದರು. ಪಪಂ ಉಪಾಧ್ಯಕ್ಷ ಗಿರೀಶ್‌, ಸದಸ್ಯ ಹರೀಶ್‌ ಕುಮಾ ರ್‌, ಗ್ರಾ.ಪಂ ಅಧ್ಯಕ್ಷ ಕನಕರಾಜು, ಮುಖಂಡರಾದ ಮಂಗಲ ಪ್ರಕಾಶ್‌, ನಿರ್ಮಿತಿ ಕೇಂದ್ರದ ಅಭಿಯಂತರ ರಮೇಶ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next