ಅವರು ಮಂಗಳವಾರ ಮೂಡುಬೆಳ್ಳೆ ಗೀತಾಮಂದಿರದಲ್ಲಿ ಸುಧಾರಿತ ಪೊಲೀಸ್ ಬೀಟ್ ವ್ಯವಸ್ಥೆಯ ಬಗ್ಗೆ ಜರಗಿದ ಬೀಟ್ ಸದಸ್ಯರ ಸಭೆಯಲ್ಲಿ ಮಾತನಾಡಿದರು.
Advertisement
ಅಪರಾಧ, ಅಪಘಾತ ಮತ್ತಿತರ ಯಾವುದೇ ಘಟನೆ, ಸಮಸ್ಯೆಗಳ ಬಗ್ಗೆ ಬೀಟ್ ಅಧಿಕಾರಿಗಳು, ಎಎಸ್‌ಐ ಅಥವಾ ನನ್ನನ್ನು ಸಾರ್ವಜನಿಕರು ಯವುದೇ ಸಮಯದಲ್ಲಿ ಸಂಪರ್ಕಿಸಬಹುದು. ನಾವೇ ನೇರವಾಗಿ ನಿಮ್ಮ ಬಳಿ ಬಂದು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಬೀಟ್ ಸದಸ್ಯರು ಯಾವುದೇ ಮಾಹಿತಿ ಇದ್ದಲ್ಲಿ ಹಿಂಜರಿಕೆ ಇಲ್ಲದೆ ನಮಗೆ ತಿಳಿಸಬಹುದು ಎಂದರು.
ಮೂಡುಬೆಳ್ಳೆ ಪೇಟೆಯಲ್ಲಿ ನಿರಂತರ ಟ್ರಾಫಿಕ್ ಜಾಂ ಆಗುತ್ತಿರುವ ಬಗ್ಗೆ ಬೀಟ್ ಸದಸ್ಯ ಎ.ಕೆ. ಆಳ್ವಾ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ, ಅನಿವಾರ್ಯ ಸಂದರ್ಭ ಹೊರತುಪಡಿಸಿ ಪ್ರತಿನಿತ್ಯ ಟ್ರಾಫಿಕ್ ವ್ಯವಸ್ಥೆ ನೋಡಿಕೊಳ್ಳಲು ಓರ್ವ ಪೊಲೀಸರನ್ನು ನಿಯೋಜಿಸುತ್ತಿರುವುದಾಗಿ ತಿಳಿಸಿದರು. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬೆಳ್ಳೆ ಗ್ರಾಪಂ ಸಹಕಾರ ಅತ್ಯಗತ್ಯವಾಗಿದೆ ಎಂದರು. ಕುಕ್ಕುದಕಟ್ಟೆ ಸೋಲಾರ್ ಲೈಟ್ ಪ್ಯಾನಲ್, ಬ್ಯಾಟರಿ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿ.ಪಂ. ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಸಲಹೆ ನೀಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಹಲವಾರು ಸೋಲಾರ್ ದೀಪಗಳಿದ್ದು ಇವುಗಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಇನ್ನಿತರ ಅಪರಾಧ ತಡೆ ಉದ್ದೇಶದಿಂದ ಪೊಲೀಸ್ ಗಸ್ತು ಹೆಚ್ಚಿಸುವುದು ಅತ್ಯಗತ್ಯ ಎಂದರು.
Related Articles
ಗ್ರಾಪಂ ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕೆಮರಾ ಅಳವಡಿಸುವಂತೆ ಗ್ರಾಪಂ ಸದಸ್ಯ ಸುಧಾಕರ್ ಪೂಜಾರಿ ಸಲಹೆ ನೀಡಿದರು. ಟಿಪ್ಪರ್‌ಗಳ ಅತಿವೇಗ ನಿಯಂತ್ರಣಕ್ಕೆ ಕ್ರಮ ಅಗತ್ಯ ಎಂದು ತಾ.ಪಂ. ಸದಸ್ಯೆ ಸುಜಾತಾ ಸುವರ್ಣ ತಿಳಿಸಿದರು.
Advertisement
ಎಎಸ್‌ಐ ರಾಮಚಂದ್ರ ಸ್ವಾಗತಿಸಿ, ಬೀಟ್ ಅಧಿಕಾರಿ ಷಡಕ್ಷರಿ ವಂದಿಸಿದರು.