Advertisement

ಅಶ್ಲೀಲ ಚಿತ್ರ ನಿರ್ಮಾಣದಿಂದ ರಾಜ್‌ ಕುಂದ್ರಾಗೆ ದಿನಕ್ಕೆ 7 ಲಕ್ಷ ರೂ. ಆದಾಯ!

12:15 PM Jul 22, 2021 | Team Udayavani |

ಮುಂಬೈ: ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸುವ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿರುವ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ದಿನಕ್ಕೆ 7 ಲಕ್ಷ ರೂ. ಆದಾಯವಿತ್ತು ಎಂಬ ಹೊಸ ವಿಚಾರ ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:ವರಿಷ್ಠರ ತೀರ್ಮಾನವೇ ಅಂತಿಮ: ಸ್ವಾಮೀಜಿಗಳ ಭೇಟಿ ವೇಳೆ ಯಡಿಯೂರಪ್ಪ ಹೇಳಿಕೆ

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಂಬೈನ ಸಹಾಯಕ ಪೊಲೀಸ್‌ ಆಯುಕ್ತ ಮಿಲಿಂದ್‌ ಭ್ರರಾಂಬೆ, ಕುಂದ್ರಾ ಅವರು ಕೇವಲ 18 ತಿಂಗಳ ಹಿಂದಷ್ಟೇ ಅಶ್ಲೀಲಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ಇವರ ಈ ವ್ಯಾಪಾರ ಲಾಕ್‌ಡೌನ್‌ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿತ್ತು. ದಿನವೊಂದಕ್ಕೆ ಇವರ ಗಳಿಕೆ 7ರಿಂದ 8 ಲಕ್ಷ ರೂ. ಇತ್ತು ಎಂದು ತಿಳಿಸಿದ್ದಾರೆ.

ಇನ್ನು, ತನಿಖೆಯು ಪ್ರಗತಿಯಲ್ಲಿರುವಂತೆ, ಕುಂದ್ರಾ ಅಶ್ಲೀಲ ಸಿನಿಮಾಗಳನ್ನು, ಲಂಡನ್‌ನಲ್ಲಿರುವ ಕೆನ್ರಿನ್‌ ಎಂಬ ಕಂಪನಿಯೊಂದಕ್ಕಾಗಿ ಸೃಷ್ಟಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಕೆನ್ರಿನ್‌ ಕಂಪನಿಯ ಮಾಲಿಕ ಪ್ರದೀಪ್‌ ಭಕ್ಷಿ, ಕುಂದ್ರಾ ಅವರ ಭಾವ ಎನ್ನುವುದು ಇನ್ನೊಂದು ಆರೋಪ. ಈ ಸಂಸ್ಥೆ,ಕೆನ್ರಿನ್‌ ಹಾಟ್‌ಶಾಟ್ಸ್‌ ಎಂಬ ಆ್ಯಪ್‌ ಹೊಂದಿದೆ. ಕುಂದ್ರಾ ತಯಾರಿಸುತ್ತಿದ್ದ ಅಶ್ಲೀಲ ಚಿತ್ರಗಳು, ಕೆನ್ರಿನ್‌ ಆ್ಯಪ್‌ ಮತ್ತಿತರ ಆ್ಯಪ್‌ ಗಳ ಮೂಲಕ ಬಿತ್ತರಗೊಳ್ಳುತ್ತಿದ್ದವು ಎನ್ನಲಾಗಿದೆ.

ಈ ಕುರಿತು ಇಬ್ಬರ ನಡುವೆ ನಡೆದವಾಟ್ಸ್‌ಆ್ಯಪ್‌ ಸಂಭಾಷಣೆ, ಹಣಕಾಸು ರವಾನೆಗಳ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕುಂದ್ರಾಗೆ ಸಂಬಂಧಿಸಿದ ವಿವಿಧ ಬ್ಯಾಂಕ್‌ಗಳಲ್ಲಿದ್ದ ಸುಮಾರು 7.31 ಕೋಟಿ ರೂ. ಗಳನ್ನು ಜಪ್ತಿ ಮಾಡಿದ್ದಾರೆ.

Advertisement

ಪ್ಲ್ರಾನ್‌ ಬಿ ಕೂಡಾ ಇತ್ತು!: ರಾಜ್‌ ಕುಂದ್ರಾ ತಮ್ಮ ಬಂಧನವಾದರೆ ಇರಲಿ ಎಂದು ” ಪ್ಲ್ಯಾನ್ ಬಿ’ಯನ್ನು ಹೊಂದಿದ್ದರು. ಅಂದರೆ ಈ ಕೃತ್ಯದಲ್ಲಿ ಸಿಕ್ಕಿಬಿದ್ದರೆ, ತಮ್ಮ ನೀಲಿಚಿತ್ರಗಳು ಸರಾಗವಾಗಿ ಓಡಲಿ ಎಂದು ಬಾಲಿಫೇಮ್‌ ಎಂಬ ಹೆಸರಿನ ಇನ್ನೊಂದು ಆ್ಯಪ್‌ ಕುಂದ್ರಾ ಹೊಂದಿದ್ದರು ಎಂದು ಹೇಳಲಾಗಿದೆ.

ಇದೇ ವೇಳೆ ಈ ಅಶ್ಲೀಲ ಚಿತ್ರಗಳೊಂದಿಗೆ ಸಂಬಂಧ ಹೊಂದಿದ್ದಾರೆನ್ನಲಾಗಿರುವ ರೂಪದರ್ಶಿಗಹನಾವಶಿಷ್ಠ, “ಕುಂದ್ರಾ ನಿರ್ಮಿಸಿದ ಚಿತ್ರಗಳು ಅಶ್ಲೀಲವಲ್ಲ, ಇದರಲ್ಲಿ ನಟಿಸಿರುವವರಿಗೆ ಯಾವುದು ಸರಿ, ತಪ್ಪು ಎಂಬ ಅರಿವಿದೆ. ಈ ಚಿತ್ರಗಳು ಕೇವಲ ಬಿಚ್ಚುಮನವನ್ನು ಹೊಂದಿವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next