Advertisement

ನವವೃಂದಾವನಗಡ್ಡಿಯಲ್ಲಿ ಶ್ರೀಜಯತೀರ್ಥರ ಆರಾಧನೆ; ಭಾನುವಾರವೂ ಧಾರ್ಮಿಕ ವಿಧಿಗಳು

09:43 PM Jul 09, 2023 | Team Udayavani |

ಗಂಗಾವತಿ:ತಾಲೂಕಿನ ಆನೆಗೊಂದಿ-ನವವೃಂದಾವನದಲ್ಲಿ ಉಚ್ಚನ್ಯಾಯಾಲಯದ ಆದೇಶದಂತೆ ಶ್ರೀ ಜಯತೀರ್ಥ ಶ್ರೀಪಾದಂಗಳ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ರವಿವಾರವೂ ಮಂತ್ರಾಲಯದ ಮಠದ ಪಂಡಿತರು,ಭಕ್ತರು ಹಾಗೂ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜರುಗಿದವು.

Advertisement

ಶ್ರೀ ಜಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಬೆಳಿಗ್ಗೆ ಬೃಂದಾವನಗಳಿಗೆ ನಿರ್ಮಾಲ್ಯ ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ವಸ್ತ್ರಲಂಕಾರ, ಪುಷ್ಪಲಂಕಾರ, ವಿದ್ವಾಂಸರಿಂದ ಪ್ರವಚನ, ಅಷ್ಟೋತ್ತರ ,ಮತ್ತಿತರ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಮಂತ್ರಾಲಯ ವಿದ್ಯಾಪೀಠದ ಪಂಡಿತರಾದ ಪ್ರಸನ್ನ ಚಾರ್,ದ್ವಾರಕನಾಥಾಚಾರ್ ಕೃಷ್ಣಾಚಾರ್, ಸುಳಾದಿ ಹನುಮೇಶ ಆಚಾರ್, ದಿಗ್ಗಾವಿ ಗುರುರಾಜ ಹೊಸಪೇಟೆ, ಟಿಕಾಚಾರ್ ಹೊಸಪೇಟೆ, ತಿರುಮಲೇಶಾಚಾರ್ ಹೊಸಪೇಟೆ, ಗಂಗಾವತಿಯ ಸುಶೀಲಿಂದ್ರ ಚಾರ್, ಸಂಜೀವ್ ದೇಸಾಯಿ ಸಿಂಧನೂರ್, ಪವನ್ ಗುಂಡುರ್ ಗಂಗಾವತಿ ವಿಜಯ ದೇಸಾಯಿ ಗೋತಗಿ ,ಮಂತ್ರಾಲಯ ವಿದ್ಯಾಪೀಠದ ವಿದ್ವಾಂಸರು, ವಿದ್ಯಾರ್ಥಿಗಳು, ಆನೆಗುಂದಿ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಅರ್ಚಕರಾದ ನರಸಿಂಹಾಚಾರ್, ವಿಜೇಂದ್ರ ಆಚಾರ್, ಶ್ರೀನಿವಾಸ್ ಆಚಾರ್, ಗುರುರಾಜ ಆಚಾರ್, ಬಳ್ಳಾರಿ, ಹೊಸಪೇಟೆ ,ಕೊಪ್ಪಳ ,ಸೇರಿದಂತೆ ಸುತ್ತಮುತ್ತಲಿನ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next