Advertisement

ದತ್ತು ಪ್ರಕ್ರಿಯೆ :ಹೆಚ್ಚುತ್ತಿದೆ ಹೆಣ್ಣು ಮಗುವಿಗೆ ಆದ್ಯತೆ 

11:13 PM Nov 18, 2021 | Team Udayavani |

ಒಂಬತ್ತು ತಿಂಗಳುಗಳ ಕಾಲ ತಾಯಿಯ ಹೊಟ್ಟೆಯಲ್ಲಿ ಸಂಪೂರ್ಣ ಸುರಕ್ಷಿತ ಅನುಭವ ಪಡೆಯುತ್ತಿದ್ದ ಮಗು ಜಗತ್ತಿಗೆ ಕಾಲಿಟ್ಟಾಗ ಎಲ್ಲವೂ ಬದಲಾಗುತ್ತದೆ. ಕೆಲವೊಮ್ಮೆ ರಸ್ತೆ ಬದಿ, ಮತ್ತೆ ಕೆಲವೊಮ್ಮೆ ಯಾವುದೋ ಕಾಡಿನ ಪಕ್ಕದಲ್ಲಿ ಬಿದ್ದು ಇನ್ನೇನು ಜಗತ್ತಿಗೆ ವಿದಾಯ ಹೇಳುತ್ತದೆ ಎನ್ನುವ ಸಂದರ್ಭದಲ್ಲಿ ಯಾವುದೋ ಎರಡು ಕೈಗಳು ಪ್ರೀತಿಯಿಂದ ಎತ್ತಿಕೊಳ್ಳುತ್ತವೆ. ಮುಂದೆ ಅದರ ಭವಿಷ್ಯವೇ ಸಂಪೂರ್ಣ ಬದಲಾಗುತ್ತದೆ. ಹೆತ್ತವಳಿಗೆ ಬೇಡವಾದ ಮಗು ಇನ್ನಾರದೋ ಮಡಿಲು ಸೇರಿ ಯಾರದೋ ಮನೆಯ ಮಗುವಾಗಿ ಬೆಳೆಯುತ್ತದೆ.

Advertisement

ಬದಲಾಗುತ್ತಿದೆ  ಪೋಷಕರ ಮನಃಸ್ಥಿತಿ:

ದತ್ತು ಪಡೆಯುವಾಗ ಗಂಡು ಮಕ್ಕಳೇ ಬೇಕೆಂದು ಹೇಳುತ್ತಿದ್ದ ಪೋಷಕರ ಮನಃಸ್ಥಿತಿ  ಇಂದು ಬದಲಾಗುತ್ತಿದೆ ಎನ್ನುವುದನ್ನು ಇತ್ತೀಚಿನ ಅಂಕಿಅಂಶಗಳು ದೃಢೀಕರಿಸಿವೆ. ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ಪ್ರಕಾರ 2020- 21ರಲ್ಲಿ ಒಟ್ಟು 3,142 ಮಕ್ಕಳನ್ನು ದತ್ತು ನೀಡಲಾಗಿದೆ. ಇದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 1,856 ಆಗಿದ್ದು, ಗಂಡು ಮಕ್ಕಳ ಸಂಖ್ಯೆ 1,286.

ದೇಶದಲ್ಲಿ ಒಟ್ಟು ಅನಾಥ ಮತ್ತು ಪರಿತ್ಯಕ್ತ ಮಕ್ಕಳ ಸಂಖ್ಯೆ ಸುಮಾರು 30 ಮಿಲಿಯನ್‌.  ಇವರಲ್ಲಿ ಬಹುತೇಕ ಮಕ್ಕಳು ಬಡತನದ ಕಾರಣದಿಂದ ತಂದೆ- ತಾಯಿಯಿಂದ ಪರಿತ್ಯಕ್ತರಾದವರು. ಈ ಮಕ್ಕಳು ಬಾಲ ಕಾರ್ಮಿಕತನ, ಕಳ್ಳ ಸಾಗಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ.

ವಿದೇಶಿಯರ ಮಡಿಲು  ಸೇರುವ ವಿಶೇಷ ಮಕ್ಕಳು :

Advertisement

ಭಾರತೀಯ ಮಕ್ಕಳನ್ನು ದತ್ತು ಪಡೆಯುವಲ್ಲಿ ವಿದೇಶಿಯರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಅದರಲ್ಲೂ ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ಇತ್ತೀಚಿನ ದಿನಗಳಲ್ಲಿ ವಿದೇಶಿಯರು ಹೆಚ್ಚಾಗಿ ದತ್ತು ಪಡೆಯುತ್ತಿದ್ದಾರೆ. 2018ರ ಎಪ್ರಿಲ್‌ 1ರಿಂದ 2021ರ ಮಾರ್ಚ್‌ 31ರ ವರೆಗೆ ಒಟ್ಟು 22 ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ದತ್ತು ಪಡೆಯಲಾಗಿದೆ.

ದತ್ತು ಪ್ರಮಾಣ ಯಾಕೆ ಕಡಿಮೆ?:

ದೇಶದಲ್ಲಿ ಅನಾಥ ಮಕ್ಕಳ ಸಂಖ್ಯೆ ಅಧಿಕವಾಗಿದ್ದರೂ ದತ್ತು ಸ್ವೀಕಾರ ಪ್ರಮಾಣ ತೀರಾ ಕಡಿಮೆ. ಇದಕ್ಕೆ ಮುಖ್ಯ ಕಾರಣ ದತ್ತು ಕಾನೂನಿನ ಬಗ್ಗೆ ಜನರಲ್ಲಿನ ಅರಿವಿನ ಕೊರತೆ. ಮಗು ಹೆಣ್ಣಾಗಿರಲಿ, ಗಂಡಾಗಿರಲಿ ಆದರೆ ಹೆಚ್ಚಿನ ಪೋಷಕರು ತಮಗೆ ಕಪ್ಪು ವರ್ಣದ ಮಗು ಬೇಡವೆನ್ನುತ್ತಾರೆ. ಆದರೆ ಇಲ್ಲಿ ನ್ಯಾಯಯುತ ಮಗುವಿಗೇ ಮೊದಲ ಆದ್ಯತೆ ಇರುವುದರಿಂದ ದತ್ತು ಪ್ರಮಾಣ ಕಡಿಮೆಯಾಗಿರುತ್ತದೆ. ಅಲ್ಲದೇ ಹೆಚ್ಚಾಗಿ ದತ್ತು ಪಡೆಯಬಯಸುವ ಪೋಷಕರು ನವಜಾತ ಮತ್ತು ಆರೋಗ್ಯಕರ ಶಿಶುಗಳನ್ನೇ ಬಯಸುತ್ತಾರೆ. ಮಗುವಿನ ಜೀವನದ ಮೊದಲ ಐದು ವರ್ಷಗಳು ಅತ್ಯಂತ ಮುಖ್ಯವಾಗಿರುತ್ತದೆ. ಆದರೆ ಹೆಚ್ಚಾಗಿ ಕಡಿಮೆ ಪೋಷಣೆಯಿಂದ ಜನಿಸಿದ ಮಕ್ಕಳನ್ನು ಯಾರೂ ದತ್ತು ಸ್ವೀಕರಿಸಲು ಮುಂದೆ ಬರುವುದಿಲ್ಲ.

ಹೇಗಿದೆ ದತ್ತು ನಿಯಮ? :

ಮಗುವನ್ನು ದತ್ತು ಪಡೆಯಲು ಕೇಂದ್ರ ಸರಕಾರವು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವನ್ನು ರಚಿಸಿದೆ. ಈ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆ ಮಕ್ಕಳನ್ನು ದತ್ತು ಪಡೆಯಲು ಮಾನ್ಯವಾಗಿದೆ. ಬೇರೆ ದೇಶದವರು ಭಾರತದಲ್ಲಿ ಮಗುವನ್ನು ದತ್ತು ಪಡೆಯಬೇಕಾದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಪಾಲಕರು cಚrಚ.nಜಿc.ಜಿn ಗೆ ಭೇಟಿ ನೀಡಿ ಮಗು ದತ್ತು ಪಡೆಯಲು ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ದತ್ತು ಘಟಕವು ಮನೆಗೆ ಭೇಟಿ ನೀಡಿ ಅನಂತರ ಅಧ್ಯಯನ ವರದಿ ಸಿದ್ಧಪಡಿಸುತ್ತದೆ. ಮದುವೆಯಾದ ಎರಡು ವರ್ಷಗಳ ಅನಂತರ ಮಾತ್ರ ದಂಪತಿ ಮಗುವನ್ನು ದತ್ತು ಪಡೆಯಬಹುದು. ಇದರಲ್ಲಿ ಇಬ್ಬರ ವಯಸ್ಸು ಕೂಡ ಮುಖ್ಯವಾಗಿರುತ್ತದೆ.

ಮಕ್ಕಳ ದತ್ತು ಪ್ರಕ್ರಿಯೆ ಅನ್ವಯಿಸಿ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ  ಹಾಗೂ ಬಾಲ ನ್ಯಾಯ ಕಾಯ್ದೆ ಎಂಬೆರಡು ಕಾನೂನುಗಳು ಜಾರಿಯಲ್ಲಿವೆ.

ಅಗತ್ಯ ದಾಖಲೆಗಳು  :

ದತ್ತು ಪಡೆಯಬಯಸುವ ಕುಟುಂಬ ಅಥವಾ ದಂಪತಿ ಅಥವಾ ವ್ಯಕ್ತಿಯ ಛಾಯಾಚಿತ್ರ, ಜನನ ಪ್ರಮಾಣ ಪತ್ರ, ಪಾನ್‌ ಕಾರ್ಡ್‌, ವಿಳಾಸ ಪುರಾವೆ, ದತ್ತು ಪಡೆಯುವ ವ್ಯಕ್ತಿಗೆ ಯಾವುದೇ ರೀತಿಯ ಗಂಭೀರ ಕಾಯಿಲೆಗಳಿಲ್ಲ ಎನ್ನುವ ಕುರಿತು ಸರಕಾರಿ ವೈದ್ಯಕೀಯ ಅಧಿಕಾರಿಯ ಸಹಿ ಇರುವ ಪ್ರಮಾಣ ಪತ್ರ, ದತ್ತು ಪಡೆಯುವ ದಂಪತಿಯ ವೈದ್ಯಕೀಯ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ, ಆದಾಯ ತೆರಿಗೆಯ ಅಧಿಕೃತ ಪ್ರತಿ, ವಿಚ್ಛೇದನ ಪಡೆದಿದ್ದರೆ ಅದರ ಪ್ರಮಾಣ ಪತ್ರ, ದತ್ತು ಪಡೆಯುವ ವ್ಯಕ್ತಿಗೆ ಸಂಬಂಧಿಸಿ ಇಬ್ಬರ ಹೇಳಿಕೆ, ಈಗಾಗಲೇ ಮಗು ಹೊಂದಿದ್ದು, ಅದರ ವಯಸ್ಸು 5ಕ್ಕಿಂತ ಮೇಲ್ಪಟ್ಟಿದ್ದರೆ ಅದರ ಒಪ್ಪಿಗೆ, ಪೋಷಕರು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಎಲ್ಲ ರೀತಿಯಲ್ಲೂ ಸಮರ್ಥರಾಗಿರುವ ದಾಖಲೆ, ವಿವಾಹಿತ ದಂಪತಿಯ ಪರಸ್ಪರ ಒಪ್ಪಿಗೆ ಅಗತ್ಯವಾಗಿರುತ್ತದೆ. ಒಂಟಿ ತಾಯಿ ಯಾವುದೇ ಲಿಂಗದ ಮಗುವನ್ನು ದತ್ತು ಪಡೆಯಬಹುದು. ಆದರೆ ಒಬ್ಬ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು.

ಈ ಎಲ್ಲ ಅರ್ಹತೆಗಳು ಒಬ್ಬ ಸಾಮಾನ್ಯ ಭಾರತೀಯ ಪ್ರಜೆಗೆ ಅನ್ವಯವಾದರೆ, ಹೊರದೇಶ, ಎನ್‌ಆರ್‌ಐಗಳು, ಸಂಬಂಧಿಕರು ದತ್ತು ಪಡೆಯುವ ಪ್ರಕ್ರಿಯೆಗೆ ವಿಭಿನ್ನ ನಿಯಮಗಳಿವೆ.

ವರ್ಷ  ದೇಶದಲ್ಲಿ ದತ್ತು           ವಿದೇಶಿಯ ರಿಂದ ದತ್ತು

2010-11           5,693   628

2011-12           5,964   629

2012-13           4,694   308

2013-14           3,924   430

2014-15           3,988   374

2015-16           3,011   666

2016-17           3,210   578

2017-18           3,276   651

2018-19           3,374   653

2019-20           3,351   394

2020-21           3,142   417

2020- 21ರಲ್ಲಿ ನಡೆದ ದತ್ತು ಪ್ರಮಾಣ :

ರಾಜ್ಯ   ಹುಡುಗ          ಹುಡುಗಿ          ಒಟ್ಟು

ಅಂಧ್ರಪ್ರದೇಶ  39        36        75

ಅಸ್ಸಾಂ 36       40        76

ಅರುಣಾಚಲ ಪ್ರದೇಶ   0          3          3

ಬಿಹಾರ 29       93       122

ಮಧ್ಯಪ್ರದೇಶ   50       91       141

ಮಹಾರಾಷ್ಟ್ರ   239     354     593

ಪಂಜಾಬ್‌        13       33       46

ರಾಜಸ್ಥಾನ       42       87       129

ಉತ್ತರ ಪ್ರದೇಶ 72       125     197

ಚಂಡೀಗಢ       5         6         11

ಛತ್ತೀಸ್‌ಗಢ      44       51       95

ಹೊಸದಿಲ್ಲಿ      39       45       84

ಗೋವಾ           10        11       21

ಗುಜರಾತ್‌        48       59       107

ಹರಿಯಾಣ      19       16       35

ಹಿಮಾಚಲ ಪ್ರದೇಶ      0         3         3

ಝಾರ್ಖಂಡ್‌   44       34       78

ಕರ್ನಾಟಕ       90       137     227

ಕೇರಳ  62       65       127

ಉತ್ತರಾಖಂಡ  7         9         16

Advertisement

Udayavani is now on Telegram. Click here to join our channel and stay updated with the latest news.

Next