Advertisement

ಇಡೀ ಜಗತ್ತನ್ನೇ ಬೆದರಿಸಿದ್ದ ಹಿಟ್ಲರ್ “ಕೆಲವು ವಿಚಾರಗಳಲ್ಲಿ ಹೆದರು ಪುಕ್ಕಲ”ನಾಗಿದ್ದನಂತೆ!

03:41 PM Feb 06, 2023 | ನಾಗೇಂದ್ರ ತ್ರಾಸಿ |

ಜಗತ್ತು ಈವರೆಗೆ ನೂರಾರು ವರ್ಷಗಳಿಂದ ಹಲವಾರು ಜನಪ್ರಿಯ ನಾಯಕರನ್ನು ಕಂಡಿದೆ. ಅವರೆಲ್ಲಾ ಹೆಸರುವಾಸಿಯಾಗಿ, ಜನರ ಪ್ರೀತಿಯನ್ನು ಗಳಿಸಿದ್ದರು. ತಮ್ಮ ದೇಶಕ್ಕಾಗಿ ಅವರು ಮಾಡಿರುವ ಸೇವೆ, ತ್ಯಾಗಗಳಿಂದ ಜನರು ಅವರನ್ನೆಲ್ಲಾ ಗೌರವಿಸಿ ಆರಾಧಿಸುತ್ತಿರುವುದು ಕಾರಣವಾಗಿದೆ. ಆದರೆ ಕೆಲವರು ತಮ್ಮ ಸರ್ವಾಧಿಕಾರಿ ಧೋರಣೆಯಿಂದಲೇ ಜಗತ್ತನ್ನು ಗೆಲ್ಲಲು ಹೊರಟು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿರುವುದನ್ನು ಓದಿದ್ದೇವೆ. ಅವರಲ್ಲಿ ಅಡಾಲ್ಫ್ ಹಿಟ್ಲರ್ ಕೂಡಾ ಒಬ್ಬ. ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಕೆಲವೊಂದು ವಿಷಯಗಳ ಬಗ್ಗೆ ಆತ ತುಂಬಾ ಹೆದರುಪುಕ್ಕಲನಾಗಿದ್ದ ಎಂಬ ಅಂಶವನ್ನು ಇತಿಹಾಸಕಾರರು ದಾಖಲಿಸಿದ್ದಾರೆ.

Advertisement

ಇದನ್ನೂ ಓದಿ:

ದಂತ ವೈದ್ಯರ ಬಗ್ಗೆ ಹೆದರಿಕೆ:

ಹಿಟ್ಲರ್ ನ ಖಾಸಗಿ ದಂತ ವೈದ್ಯ ಜೋನ್ನೆಸ್ ಬ್ಲಾಸ್ ಚೆಕ್ ಅವರು ದಾಖಲು ಮಾಡಿರುವ ಅಂಶದ ಪ್ರಕಾರ, ಹಿಟ್ಲರ್ ಒಸಡು ಸಮಸ್ಯೆಯಿಂದ ಬಳಲುತ್ತಿದ್ದು, ಆತನ ಉಸಿರಾಟದ ಗಾಳಿ ದುರ್ನಾತದಿಂದ ಕೂಡಿರುತ್ತಿತ್ತಂತೆ. ಈ ಕಾರಣದಿಂದ ಆತ ದಂತವೈದ್ಯರನ್ನು ದೂರ ಇಡಲು ಬಯಸುತ್ತಿದ್ದು, ಅವರನ್ನು ಕಂಡರೆ ಭಯ ಪಡುತ್ತಿದ್ದ ಎಂದು ದಾಖಲಿಸಿದ್ದಾರೆ.

Advertisement

ಲೈಂಗಿಕ ವಿಚಾರದಲ್ಲೂ ಭಯಪಡುತ್ತಿದ್ದ!

ಹಿಟ್ಲರ್ ನ ಲೈಂಗಿಕ ಜೀವನದ ವಿಷಯ ಬಹಳ ಹಿಂದಿನಿಂದಲೂ ಐತಿಹಾಸಿಕ ಚರ್ಚೆಯ ವಿಷಯವಾಗಿತ್ತಂತೆ. ಬ್ರಿಟಿಷ್ ಇತಿಹಾಸಕಾರ ಇಯಾನ್ ಕೆರ್ಶೊ ಪ್ರಕಾರ, ಹಿಟ್ಲರ್ ದೈಹಿಕ ಸಂಬಂಧದ ವಿಚಾರದಲ್ಲಿ ಭಯಗ್ರಸ್ತನಾಗಿದ್ದ, ದೈಹಿಕ ಸಂಬಂಧದಿಂದ ಕಾಯಿಲೆ ಹರಡುತ್ತದೆ ಎಂಬ ಭೀತಿ ಹಿಟ್ಲರ್ ನದ್ದಾಗಿತ್ತಂತೆ.

ಬ್ಲೇಡ್ ಕಂಡರೆ ಭಯಪಡುತ್ತಿದ್ದ:

ಸರ್ವಾಧಿಕಾರಿಯಾಗಿದ್ದ ಅಡಾಲ್ಫ್ ಹಿಟ್ಲರ್ ಬ್ಲೇಡ್ ಹೆಸರು ಕೇಳಿದ್ರೆ ಭಯಪಡುತ್ತಿದ್ದನಂತೆ. ಈ ಭಯದ ಕಾರಣದಿಂದಲೇ ಆತ ಶೇವಿಂಗ್ ಮತ್ತು ತಲೆಕೂದಲು ಕತ್ತರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ತಾನೇ ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದ. ಹಿಟ್ಲರ್ ಮನೋವಿಕಲ್ಪ ರೋಗದಿಂದ ಬಳಲುತ್ತಿದ್ದ. ಇದರಿಂದಾಗಿಯೇ ಆತ ಯಾವಾಗಲೂ ಜನರು ತನ್ನನ್ನು ಕೊಲ್ಲಲು ಬಯಸುತ್ತಿದ್ದಾರೆಂದು ಭಾವಿಸುತ್ತಿದ್ದನಂತೆ.

ಹಿಟ್ಲರ್ ವ್ಯಾಧಿಬ್ರಾಂತಿಯಾಗಿದ್ದ!

ಅಡಾಲ್ಫ್ ಹಿಟ್ಲರ್ ಸದಾ ವ್ಯಾಧಿಭ್ರಾಂತನಾಗಿದ್ದ. ಆತ ಯಾವಾಗಲೂ ರೋಗಗಳಿಗೆ ಮತ್ತು ಗಂಭೀರ ಪರಿಸ್ಥಿತಿಗಳ ಬಗ್ಗೆ ಹೆದರಿಕೊಳ್ಳುತ್ತಿದ್ದ. ಕೆಲವೊಂದು ರೋಗಗಳನ್ನು ತಾನೇ ಗುಣಪಡಿಸಿಕೊಳ್ಳುತ್ತಿದ್ದ. ನಂತರ ಹಿಟ್ಲರ್ ತನ್ನ ಕಾಯಿಲೆಗಳಿಗೆ ಅಪಾಯಕಾರಿಯಾದ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದನಂತೆ. ಮರದ ಆಲ್ಕೋಹಾಲ್, ಆ್ಯಟ್ರೋಪೈನ್ ಮತ್ತು ವಿಷಕಾರಿ ರಾಸಾಯನಿಕ ಚಿಕಿತ್ಸೆಗಾಗಿ ಬಳಸುತ್ತಿದ್ದ. ತನ್ನ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಲು ಜಿಗಣೆ(ಇಂಬಳ)ಯನ್ನು ಉಪಯೋಗಿಸುತ್ತಿದ್ದ. ಅಷ್ಟೇ ಅಲ್ಲ ಹೊರಗಿನ ಗಾಳಿಯೂ ವಿಷಪೂರಿತವಾಗಿರಬಹುದು ಎಂಬ ಭ್ರಾಂತಿಗೊಳಗಾಗಿದ್ದನಂತೆ!

ಸೋಲಿನ ಭೀತಿಗೊಳಗಾಗಿದ್ದ:

ಸರ್ವಾಧಿಕಾರಿ ಹಿಟ್ಲರ್ ಸೋಲಿನ ಬಗ್ಗೆ ಭೀತಿಗೊಳಗಾಗಿದ್ದ. ಸೋವಿಯತ್ ಯೂನಿಯನ್ ನ ರೆಡ್ ಆರ್ಮಿ ಬರ್ಲಿನ್ ಅನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ಸೋಲುವ ಭಯದಿಂದಾಗಿಯೇ ಹಿಟ್ಲರ್ 1945ರ ಏಪ್ರಿಲ್ 30ರಂದು ಸಾವಿಗೆ ಶರಣಾಗಿಬಿಟ್ಟಿದ್ದ.!

ಅದ್ಭುತವಾಗಿ ಶಿಳ್ಳೆ ಹೊಡೆಯುತ್ತಿದ್ದ:

ಅಡಾಲ್ಫ್ ಹಿಟ್ಲರ್ ಹಾರ್ಮೋನಿಯಂ ಮತ್ತು ಕೊಳಲನ್ನು ನುಡಿಸುತ್ತಿದ್ದ. ಇದೆಲ್ಲದರ ಹೊರತಾಗಿಯೂ ಹಿಟ್ಲರ್ ತುಂಬಾ ಚೆನ್ನಾಗಿ ಶಿಳ್ಳೆ ಹೊಡೆಯುತ್ತಿದ್ದನಂತೆ. ಹಾಡನ್ನು ಹಾಡಲು ಶಿಳ್ಳೆಯನ್ನು ಬಳಸುತ್ತಿದ್ದನಂತೆ.

ಚಿತ್ರಕಲಾವಿದನಾಗಿದ್ದ:

ಅಡಾಲ್ಫ್ ಹಿಟ್ಲರ್ ಒಬ್ಬ ಸರ್ಕಾರಿ ಅಧಿಕಾರಿಯಾಗಬೇಕೆಂದು ತಂದೆ ಬಯಸಿದ್ದರಂತೆ. ಆದರೆ ಹಿಟ್ಲರ್ ಯಾವಾಗಲೂ ಆರ್ಟಿಸ್ಟ್ ಆಗಿರಲು ಬಯಸಿದ್ದ. ಆದರೆ ವಿಯೆನ್ನಾ ಆರ್ಟ್ಸ್ ಅಕಾಡೆಮಿಯ ಸೇರುವ ಅವಕಾಶವನ್ನು ಎರಡೂ ಬಾರಿ ನಿರಾಕರಿಸಿದ್ದನಂತೆ. ಹಿಟ್ಲರ್ ತಾಯಿ ಸ್ತನ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದ ನಂತರ ಹಿಟ್ಲರ್ ನಿರ್ಗತಿಕನಾಗಿ ಬದುಕಿದ್ದ. ಆ ಸಂದರ್ಭದಲ್ಲಿ ತಾನು ರಚಿಸಿದ್ದ ಚಿತ್ರಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

ಶ್ವಾನ ಪ್ರೇಮಿ:

ಹಿಟ್ಲರ್ “ಬ್ಲಾಂಡೈ” ಎಂಬ ಜರ್ಮನ್ ಶೆಪರ್ಡ್ ನಾಯಿಯನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಿದ್ದನಂತೆ. ಈತ ತನ್ನ ನಾಯಿಗಳಿಗೆ ತರಬೇತಿ ಕೊಡಲು ಹೆಚ್ಚಿನ ಸಮಯ ಕಳೆಯುತ್ತಿದ್ದನಂತೆ. ಕೆಲವೊಂದು ಮುಖ್ಯವಾದ ಸಭೆಗಳಿಗೆ ಹಾಜರಾಗುವುದಕ್ಕಿಂತ ಹೆಚ್ಚು ನಾಯಿಗಳಿಗೆ ತರಬೇತಿ ಕೊಡಲು ಸಮಯ ವ್ಯಯಿಸುತ್ತಿದ್ದ. ಇದರಿಂದಾಗಿ ಆತನ ಸೇನಾ ಜನರಲ್ ಗಳು ಒಂದು ವೇಳೆ ನಾಯಿಗಳು ಚೆನ್ನಾಗಿ ಪ್ರದರ್ಶನ ನೀಡಿದರೆ ಹಿಟ್ಲರ್ ಒಳ್ಳೆಯ ಮೂಡ್ ನಲ್ಲಿರುತ್ತಾನೆ ಎಂಬುದು ಮನವರಿಕೆಯಾಗಿತ್ತಂತೆ.

ನಿಗೂಢ ಸಾವು!

ಕೆಲವು ವೈರುಧ್ಯಗಳ ನಡುವೆಯೇ ಅಡಾಲ್ಫ್ ಹಿಟ್ಲರ್ 1945ರಲ್ಲಿ ಇವಾ ಬ್ರಾನ್ ಎಂಬಾಕೆಯನ್ನು ವಿವಾಹವಾಗಿದ್ದ. ಆದರೆ ಕೇವಲ 36ಗಂಟೆಗಳ ನಂತರ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದರು. ಹಿಟ್ಲರ್ ತನ್ನ ತಲೆಗೆ ಗುಂಡು ಹೊಡೆದುಕೊಂಡಿದ್ದರೆ, ಬ್ರಾನ್ ಸೈನೆಡ್ ಉಪಯೋಗಿಸಿ ಸಾವನ್ನಪ್ಪಿದ್ದಳು. ಹಿಟ್ಲರ್ ಈ ಮೊದಲೇ ತಾನು ಸಾವನ್ನಪ್ಪಿದ ನಂತರ ಶವವನ್ನು ಸುಟ್ಟು ಬಿಡುವಂತೆ ಸೂಚನೆ ನೀಡಿದ್ದ. ಏತನ್ಮಧ್ಯೆ 2009ರಲ್ಲಿ ಅಡಾಲ್ಫ್ ಹಿಟ್ಲರ್ ನದ್ದು ಎಂಬ ನಂಬಲಾಗಿದ್ದ ತಲೆಬುರುಡೆಯ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ಡಿಎನ್ ಎ ಪರೀಕ್ಷೆಯಲ್ಲಿ ಈ ತಲೆಬುರುಡೆ ಯುವತಿ(ಇವಾ)ಯದ್ದು ಎಂಬ ವಿಷಯ ಬಹಿರಂಗವಾಗಿದೆ. ಈ ಸಂಶೋಧನೆಯ ಮೂಲಕ ಹಿಟ್ಲರ್ ಗುಂಡು ಹೊಡೆದುಕೊಂಡು ಸಾವಿಗೆ ಶರಣಾಗಿಲ್ಲ ಎಂಬುದಾಗಿ ನಂಬಬಹುದಾಗಿದೆ. ಇಲ್ಲವೇ ಸೆರೆಸಿಕ್ಕದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೃಷ್ಟಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next