Advertisement
ಇದನ್ನೂ ಓದಿ:- “ನಾಟಕ, ಅಸಮರ್ಪಕ”: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಲಾಲು ಪ್ರಸಾದ್ ಯಾದವ್ ವ್ಯಂಗ್ಯ
Related Articles
Advertisement
ವಿಶ್ವ ವಿದ್ಯಾಲಯದ ಹೊಸ ಯೋಜನೆಗಳು
2021-22ನೇ ಸಾಲಿನಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಜತೆಗೆ ಕೆಲವೊಂದು ಹೊಸ ಯೋಜನೆ ಗಳನ್ನು ವಿಶ್ವವಿದ್ಯಾಲಯವು ಹಾಕಿಕೊಂಡಿದೆ. ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 2 ಎಕರೆ ಜಾಗ ನೀಡಿದ್ದು, ಇನ್ನು 8 ಎಕರೆ ಜಾಗ ಖರೀದಿಸಿ, ಸುಸಜ್ಜಿತ ಸ್ನಾತ ಕೋತ್ತರ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ.
17 ಕೋಟಿ ವೆಚ್ಚದಲ್ಲಿ ಯುವಿಸಿಇ ಹುಡುಗರ ಹಾಸ್ಟೆಲ್, ಜ್ಞಾನಭಾರತಿ ಆವರಣದಲ್ಲಿ 13.85 ಕೋಟಿ ರೂ. ವೆಚ್ಚದಲ್ಲಿ ಹುಡುಗರ ಹಾಸ್ಟೆಲ್ ನಿರ್ಮಾಣವಾಗಲಿದೆ. ಒಬಿಸಿ ಹಾಸ್ಟೆಲ್ ಅನ್ನು 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ 9.7 ಕೋಟಿ ವೆಚ್ಚದಲ್ಲಿ ಜ್ಞಾನಭಾರತಿ ಆವರಣದಲ್ಲಿ ಡಾ.ಕೆ.ವೆಂಕಟಗಿರಿ ಗೌಡ ಸಭಾಂಗಣದ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಯುವಿಸಿಇ ಆವರಣದಲ್ಲಿ 55 ಕೋಟಿ ವೆಚ್ಚದಲ್ಲಿ ಮೆಕೆನಿಕಲ್ ಬ್ಲಾಕ್ ನಿರ್ಮಾಣ ಆರಂಭವಾಗಿದ್ದು, ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಇದು ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
“ವಿಶ್ವವಿದ್ಯಾಲಯದಲ್ಲಿ ಡಿಜಿಟಲೈಜೇಷನ್‌ಗೆ ಆದ್ಯತೆ ನೀಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ 30 ಹೋಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಪರೀಕ್ಷಾಂಗ ವಿಭಾಗವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಮುಂದೆ ಕಚೇರಿ ವ್ಯವಹಾರಗಳನ್ನು ಕಾಗದ ಮುಕ್ತ ಮಾಡಲಿದ್ದೇವೆ. ಸಂಶೋಧನಾ ವಿಷಯವಾಗಿಯೂ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇವೆ.” – ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ.
ವಿಭಾಗ ಬದಲು ಅರ್ಜಿ ಸಲ್ಲಿಕೆಗೆ 11ರವರೆಗೆ ಅವಕಾಶ ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಧೀನದ ಸ್ವಾಯತ್ತ, ಸ್ವತಂತ್ರ ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು 2021-22ನೇ ಸಾಲಿಗೆ ವಿಭಾಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ವಿಟಿಯು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ನ.11ರವರೆಗೂ ಅವಕಾಶ ನೀಡಲಾಗಿದೆ. ಕಾಲೇಜುಗಳಲ್ಲಿ ಸಂಬಂಧಪಟ್ಟ ಅರ್ಜಿಯನ್ನು ಪರಿಶೀಲಿಸಲು ನ.13ರವರೆಗೂ ಅವಕಾಶವಿದೆ. ನ.15ರಂದು ವಿಟಿಯು ಮೆರಿಟ್ ಪಟ್ಟಿ ಪ್ರಕಟಿಸಲಿದೆ. ನ.18ರೊಳಗೆ ಬದಲಾದ ವಿಭಾಗಕ್ಕೆ ವಿದ್ಯಾರ್ಥಿಗಳು ಸೇರಿಕೊಳ್ಳಬೇಕು ಎಂದು ವಿಟಿಯು ತಿಳಿಸಿದೆ.