Advertisement

ನೌಕಾಪಡೆಗೆ ಅಡ್ಮಿರಲ್‌ ಹರಿಕುಮಾರ್‌ ಮುಖ್ಯಸ್ಥ

08:59 PM Nov 30, 2021 | Team Udayavani |

ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್‌ ಆರ್‌.ಹರಿಕುಮಾರ್‌ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಹೊಸ ಹುದ್ದೆಗೆ ನೇಮಕವಾಗುವುದಕ್ಕಿಂತ ಮೊದಲು ಅವರು ಪಶ್ಚಿಮ ನೇವಲ್‌ ಕಮಾಂಡ್‌ನ‌ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌-ಇನ್‌-ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

1962ರ ಏ.12ರಂದು ಜನಿಸಿರುವ ಹರಿಕುಮಾರ್‌ ಅವರು 1983ರ ಜ.1ರಂದು ನೌಕಾಪಡೆಗೆ ಸೇರಿದ್ದರು. ಒಟ್ಟು 39 ವರ್ಷಗಳ ಸೇವಾವಧಿಯಲ್ಲಿ ಕುಮಾರ್‌ ಅವರು ನೌಕಾಪಡೆಯ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಐಎನ್‌ಎಸ್‌ ನಿಶಾಕ್‌, ಕ್ಷಿಪಣಿ ವ್ಯವಸ್ಥೆ ಹೊಂದಿರುವ ಐಎನ್‌ಎಸ್‌ ಕೋರಾ, ಐಎನ್‌ಎಸ್‌ ರಣವೀರ್‌ನಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next