Advertisement
ನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ ಆಡಳಿತಾಧಿಕಾರಿ ನೇಮಕ ವಿಚಾರಣೆ ಕೈಗೆತ್ತಿಕೊಂಡಿತು. ಕಳೆದ ವಾರ ಅಮಿಕಸ್ ಕ್ಯೂರಿ (ಇಬ್ಬರು ನ್ಯಾಯಾಧೀಶರ ಸಮಿತಿ) ನೀಡಿದ್ದ 9 ಮಂದಿ ಬಿಸಿಸಿಐ ಆಡಳಿತಾಧಿಕಾರಿಗಳ ಪಟ್ಟಿಯನ್ನು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ನೀಡಿರುವ ಪಟ್ಟಿ ಉದ್ದವಾಯಿತು. ದೇಶದ ಕ್ರಿಕೆಟ್‌ನಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಲೋಧಾ ಸಮಿತಿ ನೀಡಿರುವ ಶಿಫಾರಸುಗೆ ಅಮಿಕಸ್ ಕ್ಯೂರಿ ನೀಡಿರುವ ಪಟ್ಟಿಯಲ್ಲಿನ ಹೆಸರುಗಳು ವ್ಯತಿರಿಕ್ತ ವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು. ಹೀಗಾಗಿ ನ್ಯಾಯಾಲಯ ಆಡಳಿತಾಧಿಕಾರಿಗಳ ನೇಮಕ ವಿಷಯ ಸಂಬಂಧ ಯಾವುದೇ ಅಧಿಕೃತ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಮುಂದಿನ ಆದೇಶವನ್ನು ಕಾಯ್ದಿರಿಸಿತು.
ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಸರ್ವೋಚ್ಚ ನ್ಯಾಯಾಲಯ ಈಗ ಕೇಂದ್ರ ಹಾಗೂ ಬಿಸಿಸಿಐನ ಸಲಹೆ ಕೇಳಿದೆ. ಜ. 27ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಆಡಳಿತಾಧಿಕಾರಿಗಳ ಹೆಸರನ್ನು ಸೂಚಿಸುವಂತೆ ಸೂಚಿಸಿದೆ. ಅನಂತರವಷ್ಟೇ ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Related Articles
ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಂದ ಸರ್ವೋಚ್ಚ ನ್ಯಾಯಾಲಯ ಸಲಹೆ ಕೇಳಿದೆ. ಬಿಸಿಸಿಐಗೆ ಹೊಸ ಚುನಾವಣೆ ನಡೆದು ಮುಂದಿನ ಅಧ್ಯಕ್ಷರು ಆಯ್ಕೆಯಾಗಬೇಕಿದೆ. ಅಲ್ಲಿಯ ತನಕ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೆ ಸಿಬಲ್ ಸಲಹೆ ನೀಡಬಹುದು ಎಂದಿದೆ.
Advertisement