Advertisement

ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳು

03:48 PM May 17, 2023 | Team Udayavani |

ಕುಂದಾಪುರ/ಕಾರ್ಕಳ: ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಡ ಳಿತಾವಧಿ ಪೂರ್ಣಗೊಂಡಿದ್ದು, ಅಧಿಕಾರಿಗಳು ಆಡ ಳಿತ ನಡೆಸುವಂತೆ ಅಧಿಸೂಚನೆ ಹೊರಡಿಸ ಲಾಗಿದೆ.
ನಗರಸಭೆಗೆ ಡೆಪ್ಯೂಟಿ ಕಮಿಷನರ್‌ ಅಥವಾ ಸಮಾನ ದರ್ಜೆಯ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ಅಸಿಸ್ಟೆಂಟ್‌ ಕಮಿಷನರ್‌ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿ ಹಾಗೂ ಜಿಲ್ಲಾ ಮುಖ್ಯಸ್ಥ ಕಾರ್ಯಸ್ಥಾನದಲ್ಲಿನ ಮುನ್ಸಿಪಲ್‌ ಕೌನ್ಸಿಲ್‌ ತಹಶೀಲ್ದಾರ್‌ ಅಥವಾ ಸಮಾನ ದರ್ಜೆಯ ಅಧಿಕಾರಿಗಳು ಮತ್ತು ಇತರ ಮುನ್ಸಿಪಲ್‌ ಕೌನ್ಸಿಲ್‌ಗ‌ಳ ಸಂದರ್ಭದಲ್ಲಿ (ಪಟ್ಟಣ ಪಂಚಾಯತ್‌) ತಹಶೀಲ್ದಾರರು ಅಧಿಕಾರದಲ್ಲಿರಲಿದ್ದಾರೆ.

Advertisement

ಅರ್ಧಅವಧಿ ಪೂರ್ಣ
ಒಟ್ಟು 5 ವರ್ಷಗಳ ಸದಸ್ಯರ ಅಧಿಕಾರಾವಧಿ ಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಧಿಕಾರ ಇರುತ್ತದೆ. ಈ ಹಿಂದಿನ ಪುರಸಭೆ ಆಡಳಿತಾವಧಿ ಮುಗಿದು 2018ರ ಸೆಪ್ಟಂಬರ್‌ನಲ್ಲಿ ಚುನಾವಣೆ ಆಗಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಬಂದುದು ಎರಡೂವರೆ ವರ್ಷಗಳ ಬಳಿಕ. ಹಾಗಾಗಿ 2020ರಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಈಗ ಎರಡೂವರೆ ವರ್ಷ ಪೂರ್ಣಗೊಂಡಿದೆ. ಮತ್ತೆ ಎರಡೂವರೆ ವರ್ಷದ ಆಡಳಿತದ ಬಳಿಕವೇ ಚುನಾವಣೆ ನಡೆಯಲಿದೆ.

ಮುಂದಿನ ಆಯ್ಕೆ ಹೇಗೆ?
ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೀಸಲಾತಿಗೆ ಅನುಗುಣವಾಗಿ ಮುಂದಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯ ಲಿದೆ. ಹಲವು ಮಂದಿ ಆಕಾಂಕ್ಷಿಗಳಿದ್ದರೆ ಅದಕ್ಕೂ ಮುನ್ನ ಸರ್ವಸದಸ್ಯರ ಮೂಲಕ ಚುನಾವಣೆ ನಡೆದು ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ.

ಗೊಂದಲ ಉಂಟಾದರೆ ಮತ್ತೆ ಕಷ್ಟಕರ
ಈ ಹಿಂದಿನಂತೆ ಮೀಸಲಾತಿ ವಿಚಾರದಲ್ಲಿ ಮತ್ತೆ ಗೊಂದಲ ಉಂಟಾದರೆ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕವೇ ಆದೇಶ ಬರಬೇಕಿರುವ ಕಾರಣ ಜನರ ನಿರೀಕ್ಷೆ ಸರಕಾರದ ಮೇಲಿದೆ.

ಅಧಿಕಾರಿಗಳ ದರ್ಬಾರ್‌
ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಆಡಳಿತಾವಧಿ ಮುಕ್ತಾಯಗೊಂಡು ಒಂದು ತಿಂಗಳು ಕಳೆಯುತ್ತಿದೆ. ಕೆಲವೆಡೆ ಎಪ್ರಿಲ್‌ ತಿಂಗಳ‌ಲ್ಲಿ ಮುಕ್ತಾಯಗೊಂಡರೆ ಮತ್ತೆ ಕೆಲವೆಡೆ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಈ ಬಗ್ಗೆ ಸರಕಾರವೂ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ ಸಭೆಗಳು ಆಡಳಿತಾಧಿಕಾರಿ ನೇತೃತ್ವದಲ್ಲಿಯೇ ನಡೆಯಲಿದೆ.

Advertisement

ಉಡುಪಿ ನಗರಸಭೆ
ಜಿಲ್ಲಾಧಿಕಾರಿ ಆಡಳಿತ
ಉಡುಪಿ ನಗರಸಭೆ ಅಧ್ಯಕ್ಷರಾಗಿ ಇದುವರೆಗೆ ಎರಡೂವರೆ ವರ್ಷ ಸುಮಿತ್ರಾ ನಾಯಕ್‌, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜು ಕೊಳ ಸೇವೆ ಸಲ್ಲಿಸಿದ್ದರು. ಎ. 29ರಂದು ಇವರ ಅವಧಿ ಮುಗಿದಿದ್ದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆವರೆಗೆ ಇವರು ಆಡಳಿತಾಧಿಕಾರಿಯಾಗಿ ಮುಂದು ವರಿಯುವರು. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವೇ ಮೀಸಲಾತಿ ಆದೇಶ ಹೊರಬೀಳಲಿದೆ. ಅನಂತರ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ ನಡೆಯಲಿದೆ ಎಂದು ಪೌರಾಯುಕ್ತ ಆರ್‌.ಪಿ.ನಾಯ್ಕ ತಿಳಿಸಿದ್ದಾರೆ.

ಕುಂದಾಪುರ ಪುರಸಭೆ: ಆಡಳಿತಾಧಿಕಾರಿಯಾಗಿ ಸಹಾಯಕ ಕಮಿಷನರ್‌
ಕುಂದಾಪುರ: ಕುಂದಾಪುರ ಪುರಸಭೆಯಲ್ಲಿ ಅಧ್ಯಕ್ಷರಾಗಿ ವೀಣಾ ಭಾಸ್ಕರ ಮೆಂಡನ್‌, ಉಪಾಧ್ಯಕ್ಷರಾಗಿ ಸಂದೀಪ್‌ ಖಾರ್ವಿ ಕಾರ್ಯ ನಿರ್ವಹಿಸುತ್ತಿದ್ದರು. ಸಹಾಯಕ ಕಮಿಷನರ್‌ ಅವರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕಿದ್ದು ಈ ಬಗ್ಗೆ ಅಧಿಕೃತ ಆದೇಶವಾಗಬೇಕಿದೆ.

ಕಾರ್ಕಳ ಪುರಸಭೆ: ಇನ್ನೂ ನೇಮಕವಾಗದ ಆಡಳಿತಾಧಿಕಾರಿ
ಕಾರ್ಕಳ: ಕಾರ್ಕಳ ಪುರಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಸುಮಾಕೇಶವ್‌ ಅಧ್ಯಕ್ಷೆಯಾಗಿ, ಪಲ್ಲವಿ ಪ್ರವೀಣ್‌ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದಿದ್ದು ಚುನಾವಣೆ ಇತ್ಯಾದಿ ಕಾರಣಗಳಿಂದ ಆಡಳಿತಾಧಿಕಾರಿ ನೇಮಕ ವಿಳಂಬವಾಗಿದೆ.

ಸಾಲಿಗ್ರಾಮ ಪ.ಪಂ.ನಲ್ಲಿ ಆಡಳಿತಾಧಿಕಾರಿ ಆಡಳಿತ
ಕೋಟ: ಸಾಲಿಗ್ರಾಮ ಪ.ಪಂ. ಅಧ್ಯಕ್ಷರಾಗಿ ಸುಲತಾ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ಅನಸೂಯಾ ಹೇಳೆì ಅವರು ಸೇವೆ ಸಲ್ಲಿಸಿ ದ್ದರು. ಮೇ 2ರಂದು ಇವರ ಆಡಳಿತಾವಧಿ ಮುಕ್ತಾಯಗೊಂಡಿದೆ. ರಾಜ್ಯ ಸರಕಾರದಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿ ಆಯ್ಕೆಯಾಗುವವರೆಗೆ ಆಡಳಿತಾಧಿಕಾರಿಯವರು ಆಡಳಿತ ನಡೆಸಲಿದ್ದಾರೆ.

ಕಾಪು ಪುರಸಭೆಗೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾದರೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಲಿಲ್ಲ. ಹೀಗಾಗಿ ಇಲ್ಲಿ ಕುಂದಾಪುರದ ಸಹಾಯಕ ಕಮಿಷನರ್‌ ಅವರೇ ಆಡಳಿತಾಧಿಕಾರಿಯಾಗಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್‌ ರಚನೆಯಾಗಿದೆಯೇ ವಿನಾ ಚುನಾವಣೆಯೇ ನಡೆದಿಲ್ಲ. ಹೀಗಾಗಿ ಬೈಂದೂರು ಪ.ಪಂ. ಆಡಳಿತಾಧಿಕಾರಿಯಾಗಿ ಬೈಂದೂರು ತಹಶೀಲ್ದಾರ್‌ ಶ್ರೀಕಾಂತ ಹೆಗ್ಡೆ ಅವರು ಆಡಳಿತಾಧಿಕಾರಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next