Advertisement

ಸೋಂಕು ನಿಯಂತ್ರಣಕ್ಕೆ ಆಡಳಿತದ ಬಿಗಿ ಕ್ರಮ

04:00 PM Apr 24, 2021 | Team Udayavani |

ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಜನರಜೀವನ ಹಿಂಡುತ್ತಿರುವ ಹೆಮ್ಮಾರಿಕೊರೊನಾ ಸೋಂಕು ನಿಯಂತ್ರಣಕ್ಕಾಗಿಸರ್ಕಾರ ಜಾರಿಗೊಳಿಸಿರುವಭಾಗಶಃ ಲಾಕ್‌ಡೌನ್‌ಶುಕ್ರವಾರವೂ ಮುಂದುವರೆದಿದ್ದು,ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಇದರಿಂದಜನ- ವಾಹನಗಳ ಓಡಾಟ ತೀರಾಕಡಿ‌ಮೆಯಾಗಿದೆ.ಎರಡನೇ ಅಲೆ ರೂಪದಲ್ಲಿಅಪ್ಪಳಿಸಿರುವ ಹೆಮ್ಮಾರಿ ಕೋವಿಡ್‌ಸೋಂಕು ಹರಡದಂತೆ ಸರ್ಕಾರಗುರುವಾರದಿಂದ ನೈಟ್‌ ಕರ್ಫ್ಯೂ ಮತ್ತುವಿಕೆಂಡ್‌ ಕರ್ಫ್ಯೂ ಮಾರ್ಗಸೂಚಿಗಳನ್ನುಬದಲಿಸಿ ಕಟ್ಟುನಿಟ್ಟಿನ ನಿಯಮಗಳನ್ನುಜಾರಿಗೊಳಿಸಿದೆ.

Advertisement

ಅದರಂತೆ ಬೀದರನಗರ ಸೇರಿ ಜಿಲ್ಲೆಯಲ್ಲೂ ಜಿಲ್ಲಾಡಳಿತಮತ್ತು ಜಿಲ್ಲಾ ಪೊಲೀಸ್‌ ಇಲಾಖೆನಿಯಮಗಳ ಜಾರಿಗೆ ಕ್ರಮವಹಿಸುತ್ತಿದ್ದು, ಅಗತ್ಯ ಸೇವೆಗಳನ್ನುಹೊರತುಪಡಿಸಿ ವ್ಯಾಪಾರ ವಹಿವಾಟುಬಂದ್‌ ಮಾಡಿಸಿದೆ. ಕೆಲವೆಡೆಅಂಗಡಿಗಳನ್ನು ತೆರೆಯಲು ಪ್ರಯತ್ನಿಸಿದ್ದವ್ಯಾಪಾರಿಗಳಿಗೆ ಪೊಲೀಸರು ಬಿಸಿಮುಟ್ಟಿಸಿದ್ದಾರೆ.ಮೇಡಿಕಲ್‌, ಕಿರಾಣಿ ಅಂಗಡಿ,ಹಾಲು, ತರಕಾರಿ ಮತ್ತು ಹಣ್ಣುವ್ಯಾಪಾರಕ್ಕೆ ಯಾವುದೇ ಅಡ್ಡಿ ಇಲ್ಲ.ಹೋಟೆಲ್‌, ಬಾರ್‌- ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶಕೊಡಲಾಗಿದೆ.

ಆದರೆ, ಗ್ರಾಹಕರಬರುವಿಕೆ ಕಡಿಮೆಯಾಗಿರುವುದರಿಂದವ್ಯಾಪಾರ ಸಂಪೂರ್ಣ ಕುಸಿದಿದೆ.ಹಾಕಿದ ಬಂಡವಾಳವೂ ಸಹ ಬರದೇಆರ್ಥಿಕ ನಷ್ಟ ಅನುಭವಿಸುವಂತಾಗಿದೆಎನ್ನುತ್ತಾರೆ ವ್ಯಾಪಾರಿಗಳು.ಆಡಳಿತದ ಟಫ್‌ ರೂಲ್ಸ್‌ಜತೆಗೆ ಸೋಂಕಿನ ಭೀತಿಯಿಂದಸಾರ್ವಜನಕರ ಓಡಾಟ ಸಹ ಈಗತೀರಾ ಇಳಿಮುಖವಾಗಿದೆ. ಕಲಂ144 ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿಗುಂಪು-ಗುಂಪಾಗಿ ಸೇರುವುದನ್ನುಪೊಲೀಸರು ತಡೆಯುತ್ತಿದ್ದಾರೆ.

ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶನೀಡಲಾಗಿದ್ದರೂ ಪ್ರಯಾಣಿಕರ ಸಂಖ್ಯೆಕಡಿಮೆಯಾಗುತ್ತಿದ್ದಂತೆ ಬಸ್‌ಗಳಕಾರ್ಯಾಚರಣೆಯನ್ನು ಸಹ ಕಡಿಮೆಮಾಡಲಾಗಿದೆ ಎಂದು ಎನ್‌ಈಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದ್ದಾರೆ.ಇನ್ನೂ ಗ್ರಾಮೀಣ ಭಾಗದಲ್ಲಿಕರ್ಫ್ಯೂನ ಮೊದಲ ದಿನ ಗುರುವಾರಹೆಚ್ಚಿನ ಬಿಸಿ ತಟ್ಟಿರಲಿಲ್ಲ. ಆದರೆ,ಶುಕ್ರವಾರದಿಂದ ಹೋಬಳಿಮಟ್ಟದಲ್ಲಿಯೂ ಸಹ ಬಿಗಿ ಕ್ರಮಗಳನ್ನುವಹಿಸಲಾಗುತ್ತಿದೆ. ಹಾಗಾಗಿ ಅಗತ್ಯಸೇವೆ ಬಿಟ್ಟರೆ ಎಲ್ಲ ಬಗೆಯ ಅಂಗಡಿಮುಂಗಟ್ಟುಗಳು ಬಂದ್‌ ಆಗಿದ್ದವು.ಜನ ಸಂಚಾರ ಸಹ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next