Advertisement

10 ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಕಾಲೇಜು ಸ್ಥಾಪನೆಗೆ ಆಡಳಿತ ಅನುಮೋದನೆ

06:45 AM Aug 01, 2017 | Team Udayavani |

ಬೆಂಗಳೂರು: ಶೈಕ್ಷಣಿಕವಾಗಿ ಹಿಂದುಳಿದ 10 ಜಿಲ್ಲೆಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ ಒಳಗೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

Advertisement

ಕೋಲಾರ, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ ಹಾಗೂ ಬೀದರ್‌ ಜಿಲ್ಲೆಯಲ್ಲಿ ತಲಾ 25 ಕೋಟಿಯಂತೆ 250 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಸ್ಥಾಪಿಸಲಾಗುತ್ತದೆ. ಉಳಿದ 167.14 ಕೋಟಿ ರೂ.ಗಳನ್ನು ಕಾಮಗಾರಿ ಪ್ರಗತಿಯ ಆಧಾರದಲ್ಲಿ 2018-19 ಮತ್ತು 2019-20ರ ಆಯವ್ಯಯದಲ್ಲಿ ಒದಗಿಸಲಾಗುತ್ತದೆ.

ಸಂಬಂಧಪಟ್ಟ ವಿವಿಯ ಪಠ್ಯಕ್ರಮಕ್ಕೆ ಅನುಗುಣವಾಗಿ ಬಿ.ಎ. ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ(ಎಚ್‌ಪಿಇ) ಕೋರ್ಸ್‌, ಬಿ.ಎಸ್ಸಿ ಭೌತಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್‌ಸೈನ್ಸ್‌(ಪಿಎಂಸಿಎಸ್‌) ಹಾಗೂ ಬಿ.ಕಾಂ ವಿಶ್ವವಿದ್ಯಾಲಯ ನಿಗದಿ ಪಡಿಸಿದರೂ ವಾಣಿಜ್ಯ ವಿಷಯದಲ್ಲಿ ಆರಂಭಿಸಬೇಕು ಎಂಬ ಷರತ್ತು ವಿಧಿಸಿದೆ.

ಪ್ರತಿ ತರಗತಿಗೆ 40 ವಿದ್ಯಾರ್ಥಿಗಳಂತೆ ಪ್ರತಿ ಕಾಲೇಜಿಗೆ 120 ವಿದ್ಯಾರ್ಥಿಗಳ ಪ್ರವೇಶಾತಿ ಇರುತ್ತದೆ. ಶೇ.60ರಷ್ಟು ಸೀಟನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹಾಗೂ ಉಳಿದ ಶೇ.40 ಸೀಟನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗುತ್ತದೆ.360 ವಿದ್ಯಾರ್ಥಿಗಳ ವಸತಿಗೆ ಅನುಕೂಲವಾಗುವಂತೆ ವಸತಿ ನಿಲಯ ಸ್ಥಾಪಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next