Advertisement
ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರ ಶ್ರಾವಣ ಮಾಸದ ಜಾತ್ರೆಯಲ್ಲಿ ಮಾತನಾಡಿದ ಅವರು, ಭಕ್ತರನ್ನು ಸಮನಾದ ದೃಷ್ಟಿಯಿಂದ ಕಂಡು ನಂಬಿ ಬಂದವರಿಗೆ ಬಾ ಎಂದು ಕರೆದು ಕೃಪೆ ತೋರುವ ಗುರುವಿನ ನಂಬಿ ನಡೆಯಿರಿ ಎಂದರು.
ಗುರುವಂದನಾ ಕಾರ್ಯಕ್ರಮ ನಡೆಯಿತು. ನಂತರ ಅಡಿವೆಪ್ಪ ಮಹಾರಾಜರು ಸೇರಿ ವಿವಿಧ ಸತು³ರುಷರಿಂದ ನುಡಿ ಮುತ್ತುಗಳು ನಡೆದವು. ಜಾತ್ರೆಯಲ್ಲಿ ಸರೂರು ಗ್ರಾಮದ ಖೆಂಡಯ್ಯ ಸ್ವಾಮೀಜಿ, ಶಿವಣಗಿಯ ಖೆಂಡಯ್ಯ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ, ಜಿಪಂ ಮಾಜಿ ಸದಸ್ಯ ಬೀರಪ್ಪ ಸಾಸನೂರ, ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ಸಂಗಮೇಶ ಓಲೇಕಾರ, ಜಕ್ಕಣ್ಣ ಮಾಸ್ತಾರ, ವಿಕಾಸ ಜೋಗಿ ಸೇರಿದಂತೆ ಬಾಗಲಕೋಟೆ, ಗದಗ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಜಾತ್ರೆಗೆ ಸಾಕ್ಷಿಯಾದರು.
Related Articles
Advertisement
ಮುಂಗಾರಿ ಸಾಧಾರಣ ಬೆಳೆದರೆ ಹಿಂಗಾರಿ ಉತ್ತಮ ರೀತಿಯಲ್ಲಿ ಬೆಳಯಲಿವೆ ಹಾಗೂ ಹತ್ತಿ ಸಾಲಾಗ ಬಂಗಾರ ಕಡೆ ಇದೆ, ಯಾವ ಭಕ್ತರು ಧೈರ್ಯ ಬೀಡಬೇಡಿ, ನಿಮ್ಮ ಹಿಂದೆ ನಾ ಅದೀನಿ ಅಂತ ಮುತ್ಯಾ ಹೇಳುತ್ತಾನೆ ಎಂದು ಹೇಳಿದರು.