Advertisement

ವರ್ಷಪೂರ್ತಿ ‘ಅದಿತಿ’ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು

01:22 PM Nov 25, 2022 | Team Udayavani |

ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಒಬ್ಬೊಬ್ಬ ನಾಯಕಿಯರು ಮಿಂಚುತ್ತಿರುತ್ತಾರೆ. ಹಾಗಾದರೆ, 2022ರಲ್ಲಿ ಅತಿ ಹೆಚ್ಚು ಸಿನಿಮಾ ರಿಲೀಸ್‌ ಆಗಿ ಮಿಂಚಿರುವ ನಟಿ ಯಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಮದ್ವೆ ಹುಡುಗಿ!

Advertisement

ಸದ್ಯ ಕನ್ನಡ ಚಿತ್ರರಂಗದ ಮದ್ವೆ ಹುಡುಗಿ ಯಾರೆಂದು ಎಲ್ಲರಿಗೂ ಗೊತ್ತೇ ಇದೆ. ಅದು ಅದಿತಿ ಪ್ರಭುದೇವ.  ಹೌದು, ಅದಿತಿ ಪ್ರಭುದೇವ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ನ.27 ಅದಿತಿ ಆರತಕ್ಷತೆಯಾದರೆ ನ.28 ಮದುವೆ.

ಈ ವರ್ಷದ ರಿಲೀಸ್‌ ವಿಷಯಕ್ಕೆ ಬರುವುದಾದರೆ ಅದಿತಿ ನಟಿಸಿರುವ ಆರು ಸಿನಿಮಾಗಳು ಈಗಾಗಲೇ ತೆರೆಕಂಡಿದ್ದು, ಏಳನೇ ಸಿನಿಮಾ “ಜಮಾಲಿಗುಡ್ಡ’   ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ. ಅಲ್ಲಿಗೆ 2022ರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿರುವ ನಟಿಯಾಗಿ ಅದಿತಿ ಹೊರಹೊಮ್ಮಿದ್ದಾರೆ. ಈ ವರ್ಷ ಅದಿತಿ ನಾಯಕಿಯಾಗಿ ತೆರೆಮೇಲೆ ಬಂದಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ, “ಒಂಭತ್ತನೇ ದಿಕ್ಕು’, “ಓಲ್ಡ್‌ ಮಾಂಕ್‌’, “ಗಜಾನನ ಅಂಡ್‌ ಗ್ಯಾಂಗ್‌’, “ತೋತಾಪುರಿ’, “ಚಾಂಪಿಯನ್‌’, “ತ್ರಿಬಲ್‌ ರೈಡಿಂಗ್‌’, “ಜಮಾಲಿಗುಡ್ಡ’ ಚಿತ್ರಗಳಲ್ಲಿ ಈ ವರ್ಷ ಅದಿತಿ ಮಿಂಚಿದ್ದಾರೆ. ಇದರ ಜೊತೆಗೆ “ಅಂದೊಂದಿತ್ತು ಕಾಲ’ ಹಾಗೂ “5ಡಿ’ ಚಿತ್ರಗಳು ಕೂಡಾ ಬಿಡುಗಡೆಗೆ ಸಿದ್ಧವಿದ್ದು, ಒಂದು ವೇಳೆ ಡಿಸೆಂಬರ್‌ನಲ್ಲಿ ತೆರೆಕಂಡರೆ, ಈ ವರ್ಷ ಒಂಭತ್ತು ಸಿನಿಮಾಗಳಲ್ಲಿ ಅದಿತಿ ಮಿಂಚಿದಂತಾಗುತ್ತದೆ.

ಹೊಸಬರಿಂದ ಹಿಡಿದು ಸ್ಟಾರ್‌ಗಳವರೆಗೆ…

ಅದಿತಿ ಪ್ರಭುದೇವ ಸಿನಿಮಾ ರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ ದಿನದಿಂದಲೂ ಬಿಝಿ ನಟಿಯಾಗಿಯೇ ಬಂದವರು. ಸ್ಟಾರ್‌ ಗಳಿಂದ ಹಿಡಿದು ಹೊಸಬರ ಚಿತ್ರಗಳಲ್ಲೂ ಅದಿತಿ ನಟಿಸುತ್ತಾ ಬಂದ ಪರಿಣಾಮ ಅದಿತಿ ವರ್ಷಪೂರ್ತಿ ಬಿಝಿಯಾಗಿದ್ದಾರೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ನಾಯಕಿ ಪ್ರಧಾನ ಹಾಗೂ ಹೊಸ ಬಗೆಯ ಸಿನಿಮಾಗಳಲ್ಲೂ ಅದಿತಿ ಕಾಣಿಸಿಕೊಂಡಿದ್ದಾರೆ.

Advertisement

ಕನಸಿನ ಹುಡುಗ

ಅದಿತಿ ಪ್ರಭುದೇವ ಅವರಿಗೆ ತಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು ಎಂಬ ಕಲ್ಪನೆ ಇತ್ತಂತೆ. ಈಗ ಅದಕ್ಕೆ ತಕ್ಕಂತಹ ಹುಡುಗ ಸಿಕ್ಕಿದ್ದಾನೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅದಿತಿ ಹೇಳಿಕೊಂಡಂತೆ, “ನಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ನನಗೆ ಸ್ಪಷ್ಟತೆಯಿತ್ತು. ಆ ಹುಡುಗನ ಬಗ್ಗೆ ನನ್ನದೇ ಆದ ಒಂದಷ್ಟು ಕನಸುಗಳಿದ್ದವು. ಅದೆಲ್ಲವನ್ನೂ ಪರಿಪೂರ್ಣ ಮಾಡುವಂಥ ಹುಡುಗ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ನನಗೆ ಎಂಥ ಹುಡುಗ ಬೇಕು ಅನ್ನೋದನ್ನ ನಮ್ಮ ಮನೆಯವರೇ ಹುಡುಕಿ ಕೊಟ್ಟಿದ್ದಾರೆ. ಮನೆಯವರಿಗೆ ಇಷ್ಟವಾದ ಹುಡುಗ ನನಗೂ ಇಷ್ಟವಾಗಿದ್ದಾರೆ. ಅದು ಇನ್ನೂ ಖುಷಿಯ ವಿಷಯ’ ಎನ್ನುತ್ತಾರೆ ಅದಿತಿ.

 ರವಿಪ್ರಕಾಶ್‌ ರೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next