Advertisement

ಕನ್ನಡಲ್ಲೂ ಬರಲಿದೆ ‘ಆದಿಪುರುಷ್‌’

02:57 PM May 07, 2023 | Team Udayavani |

ನಟ ಪ್ರಭಾಸ್‌ ಅಭಿನಯದ “ಆದಿಪುರುಷ್‌’ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ “ಆದಿಪುರುಷ್‌’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮೇ 9ರಂದು ಸಿನಿಮಾದ ಗ್ಲೋಬಲ್‌ ಟ್ರೇಲರ್‌ ಅನ್ನು ಬಿಡುಗಡೆ ಮಾಡುತ್ತಿದೆ.

Advertisement

ಇನ್ನು ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳ ಜೊತೆಗೆ ಕನ್ನಡ ದಲ್ಲೂ “ಆದಿಪುರುಷ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ಓಂ ರಾವುತ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಆದಿಪುರುಷ್‌’ ಸಿನಿಮಾವನ್ನು “ಟಿ-ಸೀರಿಸ್‌’ ಸಂಸ್ಥೆ ನಿರ್ಮಾಣ ಮಾಡಿದ್ದು, ವಾಲ್ಮೀಕಿ ಬರೆದ ರಾಮಾ ಯಣದ ಅಂಶಗಳನ್ನು ಆಧರಿಸಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. “ಆದಿ ಪುರುಷ್‌’ ಸಿನಿಮಾದಲ್ಲಿ ನಾಯಕ ಪ್ರಭಾಸ್‌ ಅವರಿಗೆ ಕೃತಿ ಸನೂನ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ.

ಇದನ್ನೂ ಓದಿ:Karnataka Election ಇದು ರಾಜ್ಯದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ: ಬಿ.ವೈ ವಿಜಯೇಂದ್ರ

ಉಳಿದಂತೆ ಸೈಫ್ ಆಲಿಖಾನ್‌, ಸನ್ನಿ ಸಿಂಗ್‌, ದೇವದತ್ತನಾಗೆ, ವತ್ಸಲ್‌ ಸೇತ್‌, ಸೋನಾಲ್‌ ಚೌಹಾಣ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಆದಿಪುರುಷ್‌’ ಸಿನಿಮಾವು ಇದೇ ಜೂ. 16ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next