ಮುಂಬಯಿ: ದೇಶದೆಲ್ಲೆಡೆ ಇಂದು ರಾಮನವಮಿ ಹಬ್ಬದ ಸಂಭ್ರಮ ಜೋರಾಗಿದೆ. ರಾಮನ ಹೆಸರಿನಲ್ಲಿ ಭಕ್ತರು ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಇದೇ ಸಂತಸದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ʼಆದಿಪುರುಷ್ʼ ಚಿತ್ರತಂಡದಿಂದ ಸ್ಪೆಷೆಲ್ ಪೋಸ್ಟರ್ ರಿಲೀಸ್ ಆಗಿದೆ.
ರಾಮಾಯಣದ ಕಥಾಹಂದರ ಹೊಂದಿರುವ ಓಂ ರಾವುತ್ ನಿರ್ದೇಶನದ ʼಆದಿಪುರುಷ್ʼ ಭಾರತದ ಬಹುಕೋಟಿ ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಶೇಷನಾಗಿ ಸನ್ನಿ ಸಿಂಗ್ ಮತ್ತು ಭಜರಂಗನಾಗಿ ದೇವದತ್ತ ನಾಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾವಣನಾಗಿ ಸೈಫ್ ಆಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ರಾಮನವಮಿ ಹಬ್ಬಕ್ಕೆ ಆದಿಪುರುಷ್ ಚಿತ್ರ ತಂಡ ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. “ಮಂತ್ರಕ್ಕಿಂತ ದೊಡ್ಡದು ನಿಮ್ಮ ಹೆಸರು ಜೈ ಶ್ರೀರಾಮ್” ಎಂದು ಬರೆದುಕೊಂಡು ಸಿನಿಮಾದ ಸ್ಪೆಷೆಲ್ ಪೋಸ್ಟರ್ ನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ʼಆದಿಪುರುಷ್ʼ ಸಿನಿಮಾದ ಟೀಸರ್ ವಿವಾದಕ್ಕೆ ಕಾರಣವಾಗಿತ್ತು. ಕಳಪೆ ವಿಎಫ್ ಎಕ್ಸ್ ನಿಂದ ಟ್ರೋಲ್ ಗೆ ಒಳಗಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಆಗಸ್ಟ್ 11 ರಂದೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದೊಂದಿಗಿನ ಪೈಪೋಟಿಯಿಂದೆ ಹಿಂದೆ ಸರಿಯುವ ನಿರ್ಧಾರವನ್ನು ಕೈಗೊಂಡು ಸಿನಿಮಾವನ್ನು ಈ ವರ್ಷದ ಜೂನ್ 16 ರಂದು ರಿಲೀಸ್ ಮಾಡುವುದಾಗಿ ಈಗಾಗಲೇ ಹೇಳಿದೆ.
Related Articles
ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.