Advertisement
ಭಾರತೀಯ ಕ್ರಿಕೆಟಿಗರ ಈಗಿನ ಫಾರ್ಮ್ ಪ್ರಕಾರ ಕೊಹ್ಲಿ ಆತಿಥೇಯರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಅದರಲ್ಲೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ರಮವಾಗಿ 75, 45 ಹಾಗೂ 71 ರನ್ ಬಾರಿಸಿ ಪ್ರಚಂಡ ಫಾರ್ಮ್ನ ಮುನ್ಸೂಚನೆ ನೀಡಿದ್ದಾರೆ. ಭಾರತೀಯ ಕಪ್ತಾನನನ್ನು ಕಟ್ಟಿಹಾಕಿದರೆ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸಬಹುದು ಎಂಬುದು ಇಂಗ್ಲೆಂಡಿನ ಲೆಕ್ಕಾಚಾರ. ಹಾಗಾದರೆ ಅವರ ಮೇಲೆ ಯಾರನ್ನು “ಛೂ’ ಬಿಡಬೇಕು? ಈ ಚರ್ಚೆ ಈಗ ಇಂಗ್ಲೆಂಡ್ ಆಯ್ಕೆ ಸಮಿತಿಯಲ್ಲಿ ಬಹಳ ಜೋರಾಗಿಯೇ ನಡೆಯುತ್ತಿದೆ.
ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿಯನ್ನು ಕಾಡಿ ಸುದ್ದಿಯಾದವರೆಂದರೆ ಲೆಗ್‌ಬ್ರೇಕ್ ಬೌಲರ್ ಆದಿಲ್ ರಶೀದ್. ಇವರು 2 ಸಲ ಕೊಹ್ಲಿ ವಿಕೆಟ್ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಟೆಸ್ಟ್ ಸರಣಿಯಲ್ಲೂ ರಶೀದ್ ಅವರನ್ನು ಆಡಿಸಬಾರದೇಕೆ ಎಂದು ಇಸಿಬಿ ಯೋಚಿಸುತ್ತಿದೆ ಎಂಬುದಾಗಿ “ನ್ಪೋರ್ಟ್ಸ್ ಮೇಲ್’ ವರದಿ ಮಾಡಿದೆ. ಆಯ್ಕೆ ಸಮಿತಿ ಅಧ್ಯಕ್ಷ ಎಡ್ ಸ್ಮಿತ್ ಈಗಾಗಲೇ ರಶೀದ್ ಅವರನ್ನು ಸಂಪರ್ಕಿಸಿದ್ದಾಗಿಯೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ರಶೀದ್ ಅವರನ್ನು ಆಯ್ಕೆ ಮಾಡಿದರಾಯಿತು, ಅದರಲ್ಲೇನಂತೆ ಎಂದು ಪ್ರಶ್ನಿಸ ಬಹುದು. ಇಲ್ಲೇ ಇರುವುದು ತೊಡಕು. ಆದಿಲ್ ರಶೀದ್ ಈಗಗಾಲೇ ಟೆಸ್ಟ್ ಸರಣಿಗೆ ವಿದಾಯ ಘೋಷಿಸಿಯಾಗಿದೆ. ಈ ನಿರ್ಧಾರವನ್ನು ಮರುಪರಿಶೀಲಿಸಿ ಟೆಸ್ಟ್ ಕ್ರಿಕೆಟಿಗೆ ವಾಪಸಾಗುವಂತೆ ರಶೀದ್ ಅವರ ಮನ ಒಲಿಸಲು ಸ್ಮಿತ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ರಶೀದ್ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.
Related Articles
Advertisement