ಪೊಲೀಸರು ಪ್ರಕರಣ ದಾಖಲಿಸಿದ್ದು, ಇವರಿಂದ 110 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ವಿಷ್ಣು ಸ್ನೇಹಿತ ಸಂತೋಷ್ ಇತರರು ನಾಪತ್ತೆಯಾಗಿದ್ದಾರೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಐಪಿಸಿ 279 (ಅತಿ ವೇಗವಾಗಿ ವಾಹನ ಚಾಲನೆ) 337 ನಿರ್ಲಕ್ಷ್ಯದ ಆರೋಪದ ಮೇಲೆ ವಿಷ್ಣು ವಿರುದಟಛಿ ಜಯ ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಬುಧವಾರ ತಡರಾತ್ರಿ 12.30ರ ಸುಮಾರಿಗೆ ಸ್ನೇಹಿತನ ಮನೆಯಲ್ಲಿ ಇಟ್ಟಿದ್ದ ಮೊಬೈಲ್ ತರಲು ಬೆಂಝ್ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಆರ್.ವಿ.ಕಾಲೇಜು ಜಂಕ್ಷನ್ ಕಡೆಯಿಂದ ಅತಿ ವೇಗವಾಗಿ ಹೋಗುತ್ತಿದ್ದ ಗೀತ ವಿಷ್ಣು, ಸೌಂತ್ ಎಂಡ್ ಸರ್ಕಲ್‌ನಲ್ಲಿ ಯಡಿಯೂರು ಸರ್ಕಲ್ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕಾರುಬಿಬಿಎಂಪಿ ನಾಮಫಲಕಕ್ಕೆ ಗುದ್ದಿ, ಪೆಟ್ರೋಲ್ ಬಂಕ್ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಹತ್ತಿ, ಪಲ್ಟಿಯಾಗಿದೆ. ಡಿಕ್ಕಿ ಪರಿಣಾಮ ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿದೆ. ಅದರಲ್ಲಿದ್ದ ಕಲಾಸಿಪಾಳ್ಯ ನಿವಾಸಿಗಳಾದ ಕೈಜರ್, ಗಿಜರ್ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಷ್ಣ ಹಾಗೂ ಇತರ ಮೂವರು ಸ್ನೇಹಿತರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ, ವಿಷ್ಣು ಹೊರತು ಪಡಿಸಿ ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತದಿಂದ ಉದ್ರಿಕ್ತಗೊಂಡಿದ್ದ ಸಾರ್ವಜನಿಕರು, ರಸ್ತೆಯುದ್ದಕ್ಕೂ ವಿಷ್ಣುಗೆ ಹೊಡೆದು ಕೊಂಡು, ಜಯನಗರ ಠಾಣೆಗೆ ಎಳೆದೊಯ್ದು, ಪೊಲೀಸರಿಗೊಪ್ಪಿಸಿದ್ದಾರೆ. ಈ ವೇಳೆ, ವಿಷ್ಣು ಕಂಠಪೂರ್ತಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ
ಸಾರ್ವಜನಿಕರು ವಿಷ್ಣು ಕಾರಿನಲ್ಲಿ ಗಾಂಜಾ ಇದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ಕಾರು ಪರಿಶೀಲಿಸಿದಾಗ ಸಿಬ್ಬಂದಿಗೆ 110 ಗ್ರಾಂ ಗಾಂಜಾ ಸಿಕ್ಕಿದೆ. ತೀವ್ರ ಹಲ್ಲೆಗೊಳಗಾದ ವಿಷ್ಣು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದಿಕೇಶವಲು ಸ್ನೇಹಿತರಾಗಿರುವ ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಘಟನೆ ವೇಳೆ ವಿಷ್ಣು ಚಾಲನೆ ಮಾಡುತ್ತಿದ್ದ ಬೆಂಝ್ ಕಾರಿನಲ್ಲಿ ಇದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇತ್ತ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ವಿಷ್ಣು ಮತ್ತು ಇತರರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿದ್ದಂತೆ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಸ್ಥಳದಿಂದ ಪರಾರಿಯಾದರು ಎಂದು ಹೇಳಲಾಗಿದೆ. ಆದರೆ, ನಮಗೆ ಅಧಿಕೃತವಾದ ಮಾಹಿತಿಯಿಲ್ಲ. ಸದ್ಯ ವಿಷ್ಣು ಪ್ರಸಾದ್ ಆಸ್ಪತ್ರೆಯಲ್ಲಿದ್ದು, ಈತನ ವಿಚಾರಣೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.