ಹೊಸದಿಲ್ಲಿ : ಆಧಾರ್ ಕಾರ್ಡ್‌ನಲ್ಲಿ ಇರುವ ವಿಳಾಸ ಪರಿಷ್ಕರಣೆ ಮಾಡಬೇಕೇ? ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ದೇಶವಾಸಿಗಳಿಗೆ ಆನ್‌ಲೈನ್ ನಲ್ಲಿಯೇ ಅದನ್ನು ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದೆ. ಅದಕ್ಕಾಗಿ ಕುಟುಂಬದ ಯಜಮಾನನ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಪಡಿತರ ಚೀಟಿ, ಅಂಕಪಟ್ಟಿ, ವಿವಾಹ ದೃಢೀಕರಣ ಪ್ರಮಾಣಪತ್ರ, ಪಾಸ್‌ಪೋರ್ಟ್ ಸೇರಿದಂತೆ ಅಂಗೀಕೃತ ದಾಖಲೆಗಳನ್ನು ನೀಡಿ ವಿಳಾಸ ಪರಿಷ್ಕರಿಸಿಕೊಳ್ಳಲು ಈಗ ಸಾಧ್ಯವಿದೆ.
ಇದರಿಂದ ಅನುಕೂಲವೇನು?
– ಮಕ್ಕಳು, ಪತ್ನಿ ಆಧಾರ್ ಹೊಂದಿದ್ದರೆ ಅವರಿಗೆ ವಿಳಾಸ ಅಪ್‌ಡೇಟ್‌ಗೆ ಅನುಕೂಲ
– ಪದೇ ಪದೆ ವಿವಿಧ ನಗರಗಳಿಗೆ ವರ್ಗಾವಣೆಯಾಗುವವರಿಗೆ ಸಹಕಾರಿ ಸಂಬಂಧ ದೃಢೀಕರಿಸುವ ದಾಖಲೆಗಳು ಇಲ್ಲದಿದ್ದರೆ ಯುಐಡಿಎಐ ಅಂಗೀಕರಿಸಿದ ದಾಖಲೆಗಳು ಇಲ್ಲದೆ ಇದ್ದಲ್ಲಿ ಕುಟುಂಬ ಮುಖ್ಯಸ್ಥ ನಿಗದಿತ ವ್ಯಕ್ತಿಯ ಜತೆಗೆ ತಾನು ಹೊಂದಿರುವ ಸಂಬಂಧವನ್ನು ಘೋಷಿಸಿ ಕೊಳ್ಳಬೇಕು. ಅದಕ್ಕಾಗಿ ಪ್ರಾಧಿಕಾರ ಸೂಕ್ತ ನಮೂನೆಯನ್ನೂ ಹೊಂದಿದೆ.
ಅಪ್‌ಡೇಟ್ ಹೇಗೆ ಮಾಡಬೇಕು?
1 https://myaadhaar.uidai.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ
2 ಕುಟುಂಬದ ಯಜಮಾನನ ಆಧಾರ್ ಸಂಖ್ಯೆಯ ಮೂಲಕ ಲಾಗ್ ಇನ್ ಆಗಿ.
3 ಬಾಂಧವ್ಯ ದೃಢೀಕರಿಸುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
4 ಈ ಸೇವೆ ಪಡೆಯಲು 50 ರೂ. ಸೇವಾ ಶುಲ್ಕ ಪಾವತಿ ಮಾಡಬೇಕು.
5 ಅನಂತರ ಸೇವೆಯನ್ನು ಪಡೆಯುವ ಕೋರಿಕೆ ಸಂಖ್ಯೆಯನ್ನು ನೀಡಲಾಗುತ್ತದೆ.
6 ವಿಳಾಸ ಬದಲಾವಣೆ ಕೋರಿಕೆ ಬಗ್ಗೆ ಯಜಮಾನನ ಮೊಬೈಲ್‌ಗೆ ಒ.ಟಿ.ಪಿ.
7 ಅದನ್ನು ಯಜಮಾನ ಅಂಗೀಕರಿಸಬೇಕು
8 ಒಪ್ಪಿಗೆಯ ಬಳಿಕ ಕೋರಿಕೆಯನ್ನು ಪರಿಗಣಿಸಲಾಗುತ್ತದೆ.