ಶ್ರೀನಗರ: 2022ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ಮಾಡುವಲ್ಲಿ ಪೊಲೀಸರು ಶೇ.100ರಷ್ಟು ಯಶಸ್ವಿಯಾಗಿದ್ದಾರೆ ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ವರ್ಷದ ಕೊನೆಯ ದಿನವಾದ ಶನಿವಾರ ಸರಣಿ ಟ್ವೀಟ್‌ಗಳ ಮೂಲಕ ಅವರು ಈ ಮಾಹಿತಿ ಹೊರಹಾಕಿದ್ದಾರೆ. ಜತೆಗೆ ಕಣಿವೆ ಯಲ್ಲಿ ಪಾಕಿಸ್ಥಾನ ಪ್ರಾಯೋಜಿತ ಆನ್‌ಲೈನ್ ಉಗ್ರವಾದವೇ ದೊಡ್ಡ ಸವಾಲಾಗಿದೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಸುಮಾರು ಎರಡು ಡಜನ್ ಯುವಕರನ್ನು ನಾವು ಮುಖ್ಯವಾಹಿನಿಗೆ ಕರೆತಂದಿದ್ದೇವೆ. ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಪ್ರಮುಖ ಉಗ್ರ ಕಮಾಂಡರ್‌ಗಳು ಮತ್ತು ಮುಖ್ಯಸ್ಥರನ್ನು ಹತ್ಯೆಗೈದಿ ದ್ದೇವೆ. ಈ ವರ್ಷ ಹರತಾಳ, ಬೀದಿಬದಿ ಹಿಂಸಾಚಾರ, ಇಂಟರ್ನೆಟ್ ಸ್ಥಗಿತ, ಉಗ್ರರ ಶವದ ಮೆರವಣಿಗೆ, ಕಲ್ಲುತೂರಾಟ ಪ್ರಕರಣಗಳು ನಡೆದಿಲ್ಲ ಎಂದೂ ಅವರು ತಿಳಿಸಿದ್ದಾರೆ.
172 ಉಗ್ರರ ಹತ್ಯೆ: 2022ರಲ್ಲಿ 42 ಮಂದಿ ಪಾಕಿಸ್ಥಾನಿ ಉಗ್ರರ ಸಹಿತ ಒಟ್ಟು 172 ಭಯೋತ್ಪಾದಕರನ್ನು ಸದೆಬಡಿ ಯಲಾಗಿದೆ. ಉಗ್ರವಾದಕ್ಕೆ ಯುವಕರ ನೇಮಕ ಶೇ.37ರಷ್ಟು ಇಳಿಕೆಯಾಗಿದೆ. ಒಂದು ವರ್ಷದಲ್ಲಿ 100 ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ. ಶೂನ್ಯ ಉಗ್ರ ಚಟುವಟಿಕೆಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ಡಿಜಿಪಿ ದಿಲಾºಗ್ ಸಿಂಗ್ ಹೇಳಿದ್ದಾರೆ.
ಇದೇ ವೇಳೆ ಉಗ್ರ ಕೃತ್ಯಗಳಿಂದ 2022ರಲ್ಲಿ ಮೂವರು ಕಾಶ್ಮೀರಿ ಪಂಡಿತರ ಸಹಿತ 6 ಮಂದಿ ಹಿಂದೂ ಗಳು, 15 ಮುಸ್ಲಿಮರ ಸಹಿತ ಒಟ್ಟಾರೆ 21 ಸ್ಥಳೀಯರು ಸಾವಿಗೀ ಡಾ ಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.