Advertisement

ಚುನಾವಣಾ ಅಗತ್ಯ ಸಿದ್ದತೆಗೆ ಇಲಾಖಾ ಕ್ರಮ: ಎಡಿಜಿಪಿ ಅಲೋಕ್ ಕುಮಾರ್

03:34 PM Jan 04, 2023 | Team Udayavani |

ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈಗಲೇ ಮುಂದಾಗಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.

Advertisement

ರೌಡಿ ಗಳು ಅದರಲ್ಲೂ ಕಳೆದ ಐದು ವರ್ಷಗಳಿಂದ ಐದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲೆಯಾದವರ ಮೇಲೆ ನಿಗಾ ವಹಿಸುವುದು, ಅಗತ್ಯಬಿದ್ದರೆ ಗುಂಡಾ ಕಾಯ್ದೆ ಅಡಿ ಕ್ರಮ‌ ಕೈಗೊಳ್ಳುವುದರ ಜತೆಗೆ ಇತರೆ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಲಾಗಿದೆ ಎಂದು ವಿವರಣೆ ನೀಡಿದರು.

ರೌಡಿಗಳು ಯಾವುದೇ ಪಕ್ಷದಲ್ಲಿ ಇರಲಿ ಅಥವಾ ಸೇರಲಿ. ಆದರೆ ಇಲಾಖೆ ಮಾತ್ರ ಕ್ರಮ ಕೈಗೊಳ್ಳುವುದು. ಪ್ರಮುಖ ವಾಗಿ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕದು ಎಂದರು.

ಬಂದೂಕು ಪರವಾನಗಿ ಪಡೆದವರ ಪಟ್ಟಿ ಪರಿಶೀಲನೆ‌ ಜತೆಗೆ ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆ ಎಂಬುದನ್ನು ಸಹ ಅವಲೋಕಿಸಲಾಗುವುದು.‌ ವಾರಂಟ್ ಗೆ ಉತ್ತರಿಸದವರ ಪತ್ತೆಗೂ ಇಲಾಖೆಯ ಕಠಿಣ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣವನ್ನು ಅವಲೊಕಿಸಿ ‌ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.‌ಇದರಲ್ಲಿ ರಕ್ಷಣೆ ಮಾತು ಬಾರದು ಎಂದು ಎಡಿಜಿಪಿ ಅಲೋಕಕುಮಾರ ಹೇಳಿದರು.

Advertisement

ಇದನ್ನೂ ಓದಿ: ಮದ್ಯದ ಅಮಲು… ವಿಮಾನದಲ್ಲೇ ಮಹಿಳಾ ಯಾತ್ರಿ ಮೇಲೆ ಮೂತ್ರ ಮಾಡಿದ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next