Advertisement

ಮಿತ ನೀರಿನ ಬಳಕೆೆ ಸಾಧನ ಅಳವಡಿಸಿಕೊಳ್ಳಿ

04:09 PM May 15, 2019 | Team Udayavani |

ಕೆ.ಆರ್‌.ಪೇಟೆ: ಮಳೆ ಪ್ರಮಾಣ ಇಳಿಮುಖ, ಅಂತರ್ಜಲ ಮಟ್ಟ ಕುಸಿತದಿಂದ ನೀರಿಗೆ ಹಾಹಾ ಕಾರವೆದ್ದಿರುವ ಈ ಸಂದರ್ಭದಲ್ಲಿ ರೋಬೋ ಮಂಜೇಗೌಡ ತೋಟಗಳಿಗೆ ನೀರನ್ನು ಮಿತವಾಗಿ ಬಳಸುವ ಹೊಸ ಆವಿಷ್ಕಾರ ಕಂಡು ಹಿಡಿದು ರೈತರಿಗೆ ಕೋಮನಹಳ್ಳಿಯ ತಮ್ಮ ತೋಟದಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

Advertisement

ಇಂದಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತ್ತಿದೆ. ಹಾಗಾಗಿ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದನ್ನು ರೂಢಿಸಿ ಕೊಳ್ಳಬೇಕು. ಹಾಗೆ ಪೋಲಾಗುವ ನೀರು ತಡೆಯುವ ಯಂತ್ರವನ್ನು ರೋಬೋ ಮಂಜೇಗೌಡ ಆವಿಷ್ಕರಿ ಸಿದ್ದು, ಇದು ರೈತರಿಗೆ ವರದಾನವಾಗಿದೆ. ಕೇವಲ ನಾಲ್ಕೈದು ಸಾವಿರ ರೂ.ಗಳಲ್ಲಿ ಈ ಯಂತ್ರ ತಯಾರಿಸಿ ಮಾರಾಟ ಮಾಡಬಹುದು. ಹನಿ ನೀರಾವರಿ ಪದ್ಧತಿ ಯನ್ನು ಅಳವಡಿಸಿಕೊಂಡಿರುವ ರೈತರು ತೋಟಗಳಿಗೆ ವಾಟರ್‌ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರು ಪೋಲಾಗು ವುದನ್ನು ತಡೆಯಬಹುದು. ಜೊತೆಗೆ ವಿದ್ಯುತ್‌ ಬಿಲ್ ಹೊರೆಯೂ ಕಡಿಮೆ ಮಾಡಿಕೊಳ್ಳಬ ಹುದು ಎಂಬ ಬಗ್ಗೆ ಮಂಜೇಗೌಡ ಮಾಹಿತಿ ನೀಡಿದರು.

ಅಗತ್ಯವಿದ್ದಷ್ಟೇ ಬಳಕೆ: ಇಂದಿನ ದಿನಗಳಲ್ಲಿ ಬೇಸಾಯಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಬಳಸಿ ನೀರು ಪೋಲಾಗುತ್ತಿದೆ. ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಒಂದು ದಿನಕ್ಕೆ ಎಷ್ಟು ಲೀಟರ್‌ ನೀರಿನ ಅವಶ್ಯಕತೆ ಇದೆಯೋ ಅಷ್ಟು ನೀರಿನ ಪ್ರಮಾಣ ಯಂತ್ರದಲ್ಲಿ ಸೆಟ್ ಮಾಡಿದರೆ ಸಾಕು ನೀರಿನ ಗರಿಷ್ಠ ಪ್ರಮಾಣದ ನೀರಿನ ಸರಬರಾಜಾಗುತ್ತಿದ್ದಂತೆ ಮೋಟಾರ್‌ ಆಫ್ ಆಗುತ್ತದೆ. ಎಂದಿನಂತೆ ಹನಿ ನೀರಾವರಿ ಪದ್ಧತಿ ಸರಬರಾಜಾಗುವ ನೀರಿಗೆ ಮೋಟಾರ್‌ ಮೂರು ಗಂಟೆ ಕೆಲಸ ಮಾಡಿದರೆ ಈ ಯಂತ್ರದ ಮೂಲಕ ಎರಡು ಗಂಟೆ ಅವಧಿಯಲ್ಲಿ ನೀರು ಪೂರೈಕೆಯಾಗುತ್ತದೆ. ವ್ಯರ್ಥವಾಗಿ ಹರಿಯುವ ನೀರು ಹಾಗೂ ವಿದ್ಯುತ್‌ ಉಳಿತಾಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಹೊಸಕೋಟೆಯ ಲಕ್ಷ್ಮೀದೇವಮ್ಮ, ಮುದುಗೆರೆ ರಾಜೇಗೌಡ, ಮೊಸಳೆಕೊಪ್ಪಲು ಬೋರೇಗೌಡ, ಸಿಂಧಘಟ್ಟ ಮುದ್ದುಕುಮಾರ್‌, ಕೆ.ಎಸ್‌.ಸೋಮಶೇಖರ್‌ ಸೇರಿದಂತೆ ವಿವಿಧ ತಾಲೂಕು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next