Advertisement

“ಶಿಕ್ಷಣ ಸಾಮರ್ಥ್ಯ ಸಮರ್ಪಕವಾಗಿ ಬಳಸಿ’​​​​​​​

12:30 AM Feb 16, 2019 | Team Udayavani |

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಬರುವ ಶೈಕ್ಷಣಿಕ,ಸಾಂಸ್ಕೃತಿಕ ಮತ್ತು ಕ್ರೀಡಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಬಾಲಕೃಷ್ಣ ಶೆಟ್ಟಿ ಹೇಳಿದರು. 

Advertisement

ಅಜ್ಜರಕಾಡು ಡಾ| ಜಿ.ಶಂಕರ್‌ ಸರಕಾರಿ ಮಹಿಳಾ ಪ್ರ. ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವದಲ್ಲಿ ಪ್ರಧಾನ ಭಾಷಣಕಾರರಾಗಿ  ಮಾತನಾಡಿದರು.

ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ|ಜಿ.ಶಂಕರ್‌ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ಸ್ಥಾಪಿಸುವ ಬಗ್ಗೆ 5 ಲ.ರೂ. ಚೆಕ್‌ನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಮೂಲಕ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. 
 
ಕಾಲೇಜು ಅಭಿವೃದ್ಧಿ ಸದಸ್ಯ ಯಶ್‌ಪಾಲ್‌ ಸುವರ್ಣ  ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ  ರ್‍ಯಾಂಕ್‌ ವಿಜೇತರಾದ  ಸನಿಲ್‌ ವರ್ಷಿತ ಸುಧಾಕರ , ಸ್ನಾತಕೋತ್ತರ ಇತಿಹಾಸ ವಿಭಾಗದ  ರಕ್ಷಿತಾ,  ಸ್ನಾತಕೋತ್ತರ ಎಂ.ಕಾಂ.  ವಿಭಾಗದ  ಪೂಜಾರಿ ಸುಶ್ಮಿತಾ ಶಿವ, ಸ್ನಾತಕೋತ್ತರ ಎಂ.ಕಾಂ.  ವಿಭಾಗದ ಅಕ್ಷಯ ಬಲ್ಲಾಳ್‌,  ಸ್ನಾತಕೋತ್ತರ ರಾಜ್ಯಶಾಸ್ತ್ರ  ವಿಭಾಗದ  ಎಂ. ಶಾಂತಾಕುಮಾರಿ ಅವರನ್ನು ಸಮ್ಮಾನಿಸಲಾಯಿತು.  ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದ ಸಾಧಕರನ್ನು ಗುರುತಿಸಲಾಯಿತು.
  
ಕಾಲೇಜು ಕಲಾ, ವಾಣಿಜ್ಯ ಮತ್ತು ವಿಜ್ಞಾನ  ನಿಕಾಯದ ಡೀನ್‌ಗಳಾದ   ಗೌರಿ ಎಸ್‌. ಭಟ್‌,   ರಾಮಚಂದ್ರ ಅಡಿಗ ಜಿ.,  ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ|ಉಮೇಶ್‌ ಮಯ್ಯ,  ಪ್ರಕಾಶ ಕ್ರಮಧಾರಿ ಶೈಕ್ಷಣಿಕ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಐಕ್ಯೂಎಸಿ ಸಂಚಾಲಕ  ಸೋಜನ್‌ ಕೆ.ಜಿ.  ಸಂಪಾದಕತ್ವದ ಚಿಗುರು ಪತ್ರಿಕೆ  ಅನಾವರಣಗೊಳಿಸಲಾಯಿತು. ಶಾಸಕ,  ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ಕೆ.ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು.  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ ಸ್ವಾಗತಿಸಿದರು.  ಎನ್‌. ನಿತ್ಯಾನಂದ  ನಿರೂಪಿಸಿದರು. ವಿಜ್ಞಾನ ನಿಕಾಯದ ಡೀನ್‌  ರಾಮಚಂದ್ರ ಅಡಿಗ ಜಿ. ವಂದಿಸಿದರು. 

ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಡಾ| ವಾಣಿ ಆರ್‌. ಬಲ್ಲಾಳ್‌, ಮುಖ್ಯ ವಿದ್ಯಾರ್ಥಿ ಪ್ರತಿನಿಧಿ   ಸಮೀನಾ,ಸ್ನಾತಕೋತ್ತರ ವಿಭಾಗದ ಸಂಗೀತಾ ಕೆ,  ಸಾಂಸ್ಕೃತಿಕ ಪ್ರತಿನಿಧಿ ಪ್ರಥ್ವಿ ನಾಯಕ್‌, ಕ್ರೀಡಾ ಪ್ರತಿನಿಧಿ ಚೈತ್ರಾ ಶೆಟ್ಟಿಗಾರ್‌ ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next