Advertisement

PM ಸ್ವನಿಧಿ ಸಮರ್ಪಕ ಅನುಷ್ಠಾನ: ಮಾಜಿ ಸಚಿವ ರಾಮದಾಸ್‌

01:17 AM Nov 09, 2023 | Team Udayavani |

ಉಡುಪಿ: ಕೇಂದ್ರ ಸರಕಾರದ ಪಿಎಂ ಸ್ವನಿಧಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ದೇಶದಲ್ಲೇ ಮುಂದೆ ಇದ್ದು ಈಗ ಆ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದೆ.

Advertisement

ಹೀಗಾಗಿ ಯೋಜನೆಯಡಿ ಇನ್ನಷ್ಟು ಫ‌ಲಾನುಭವಿಗಳ ಆಯ್ಕೆಯ ಜತೆಗೆ ಹೆಚ್ಚೆಚ್ಚು ಪ್ರಚಾರ ನಡೆಸುವ ಬಗ್ಗೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಯೋಜನೆಯ ರಾಜ್ಯ ಸಂಚಾಲಕ ಎ. ರಾಮದಾಸ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ನಗರ ಪ್ರದೇಶದ 3.8 ಲಕ್ಷ, ಜಿಲ್ಲೆಯಲ್ಲಿ 7,656 ಬೀದಿಬದಿ ವ್ಯಾಪಾರಿಗಳು ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ. ಇದಕ್ಕಾಗಿ ಕೇಂದ್ರ ಸರಕಾರ 500 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಿದೆ. ಯೋಜನೆಯಡಿ ಆರಂಭದಲ್ಲಿ 10 ಸಾವಿರ, ಅನಂತರ 20 ಸಾವಿರ, ಮೂರನೇ ಕಂತಿನಲ್ಲಿ 50 ಸಾವಿರ ರೂ. ನೀಡಲಾಗುತ್ತದೆ. 50 ಸಾವಿರ ಪಾವತಿಸಿದವರಿಗೆ ಮುದ್ರಾ ಯೋಜನೆಯ ಮೂಲಕ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ. ಪ್ರಧಾನಮಂತ್ರಿ ಕಚೇರಿಯಿಂದ ದಾಖಲೆ ನೀಡುವ ಜತೆಗೆ ಪ್ರಧಾನ ಮಂತ್ರಿಯವರಿಂದ ಫ‌ಲಾನುಭವಿಗಳಿಗೆ ಖುದ್ದು ಪತ್ರ ಬರಲಿದೆ ಎಂದು ಹೇಳಿದರು.

ಪಿಎಂ ಸ್ವನಿಧಿ ಹಾಗೂ ಪಿಎಂ ವಿಶ್ವಕರ್ಮ ಯೋಜನೆಯ ಸಮರ್ಪಕ ಜಾರಿಯ ಬಗ್ಗೆಯೂ ಈಗಾಗಲೇ 26 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇವೆ. ವಿಶ್ವಕರ್ಮ ಯೋಜನೆಗೆ ರಾಜ್ಯದ 18 ಜಿಲ್ಲೆಗಳನ್ನು ಪರಿಗಣಿಸಲಾಗಿದೆ. ಉಳಿದ ಜಿಲ್ಲೆಗಳನ್ನು 2 ಹಂತದಲ್ಲಿ ಪರಿಗಣಿಸಲಿದೆ. ಈ ಯೋಜನೆಯಡಿ 13 ಸಾವಿರ ಕೋ.ರೂ.ಗಳನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ ಎಂದರು.

ಸಾಮಾಜಿಕ ಸ್ಥಿತಿ ಅಧ್ಯಯನ
ರಾಜ್ಯದ ನಗರ ಸ್ಥಳೀಯ ಸಂಸ್ಥೆಯಲ್ಲಿನ ಬೀದಿ ವ್ಯಾಪಾರಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಕೇಂದ್ರ ಸರಕಾರ ಆದೇಶಿಸಿದೆ. ಸ್ವನಿಧಿ ಯೋಜನೆಯಡಿ ಪತ್ರಿಕೆ ವಿತರಕರನ್ನು ತರಲಾಗಿದೆ. ಹಾಗೆಯೇ ಮನೆ ಮನೆಗೆ ಹಾಲು ಹಾಕುವವರು, ಕೇಟರಿಂಗ್‌ನವರು, ಫುಡ್‌ ಡೆಲಿವರಿ ಬಾಯ್ಸ, ಮನೆಯಲ್ಲಿ ಆಹಾರೋತ್ಪನ್ನ ಸಿದ್ಧಪಡಿಸುವವರನ್ನು ಕೇಂದ್ರ ಸರಕಾರದ ವಿವಿಧ ಯೋಜನೆ ಗಳ ಒಳಗೆ ತರುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಶೆಟ್ಟಿ ಕುತ್ಯಾರ್‌, ಪಿಎಂ ಸ್ವನಿಧಿ ಯೋಜನೆ ಜಿಲ್ಲಾ ಸಂಚಾಲಕರಾದ ಪ್ರಕಾಶ್‌ ಶೆಟ್ಟಿ ಪಾದೇಬೆಟ್ಟು, ಕಿಶೋರ್‌ ಕುಂದಾಪುರ, ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಶಿವಕುಮಾರ್‌ ಅಂಬಲಪಾಡಿ, ಪ್ರಮುಖರಾದ ವೀಣಾ ಶೆಟ್ಟಿ, ನಳಿನಿ ಪ್ರದೀಪ್‌ ರಾವ್‌, ಅನಿತಾ ಶ್ರೀಧರ್‌, ಶ್ರೀನಿಧಿ ಹೆಗ್ಡೆ, ದಾವುದ್‌ ಅಬೂಬಕ್ಕರ್‌ ಇದ್ದರು.

Advertisement

ಬರ: ರಾಜಕೀಯ ಬೇಡ
ಚುನಾವಣೆ ಉದ್ದೇಶದಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ಕೇಂದ್ರ ಸರಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬರ ಅಧ್ಯಯನಕ್ಕೆ ಬಿಜೆಪಿ ತಂಡ ಹೋಗುತ್ತಿದ್ದಂತೆ ರಾಜ್ಯ ಸರಕಾರಕ್ಕೆ ಎಚ್ಚರವಾಗಿದೆ. ಈ ವಿಷಯದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ರಾಜಕೀಯ ಮಾಡುವುದನ್ನು ನಿಲ್ಲಿಸಿ ತತ್‌ಕ್ಷಣ ಪರಿಹಾರ ಅನುದಾನ ಘೋಷಣೆ ಮಾಡಬೇಕು ಎಂದು ರಾಮದಾಸ್‌ ಆಗ್ರಹಿ ಸಿದರು. ಪಕ್ಷದ ಸೂಚನೆಯಂತೆ ಕೆಲಸ ಮಾಡುತ್ತಿದ್ದೇವೆ. ಶಾಸಕ, ಸಂಸದರಿಗಿಂತ ಹೆಚ್ಚಿನ ಕೆಲಸವನ್ನು ಪಕ್ಷವೀಗ ಕೊಟ್ಟಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next