Advertisement
ಸುವರ್ಣ ವಿಧಾನಸೌಧ ಗೇಟ್ ಬಳಿ ವಕೀಲರ ದಂಡು ಬರುತ್ತಿದ್ದಂತೆ ಗೇಟ್‌ಗಳನ್ನು ಪೊಲೀಸರು ಮುಚ್ಚಿದರು. ಬ್ಯಾರಿಕೇಡ್ ಹಾಕಿ ತಡೆದರು. ಆದರೆ ಪೊಲೀಸರ ಮನವೊಲಿಕೆಗೂ ಬಗ್ಗದೇ ಒಳ ನುಗ್ಗಲು ಯತ್ನಿಸಿದರು. ಇನ್ನೂ ಕೆಲ ವಕೀಲರು ಗೇಟ್ ಮೇಲೆ ಹತ್ತಿ ನಿಂತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
Related Articles
Advertisement
ಪ್ರತಿಭಟನೆಗೆ ಡಿ.ಕೆ.ಶಿವಕುಮಾರ್ ಬೆಂಬಲವಕೀಲರ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಪಾಲ್ಗೊಂಡು, ಅವರ ಹೋರಾಟ ಬೆಂಬಲಿಸಿದರು. ವಕೀಲರ ಸಂರಕ್ಷಣ ಕಾಯ್ದೆ ಜಾರಿಗೊಳಿಸಬೇಕು ಎಂಬ ನಿಮ್ಮ ಆಗ್ರಹ ನ್ಯಾಯಬದ್ಧವಾಗಿದೆ. ಬೆಳಗಾವಿ ಅ ಧಿವೇಶನದಲ್ಲಿ ನಿಮ್ಮ ರಕ್ಷಣೆ ಕುರಿತ ಕರಡು ಮಂಡಿಸಿ, ಅಂಗೀಕಾರ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಾನೂ ಸರಕಾರಕ್ಕೆ ಈ ವಿಚಾರವಾಗಿ ಒತ್ತಾಯ ಮಾಡುತ್ತೇನೆ. ಖಾಸಗಿ ನಿರ್ಣಯ ಮಂಡಿಸಲು ನಾವು ಬದ್ಧರಾಗಿದ್ದೇವೆ ಎಂದರು.