Advertisement

ಮಂಗಳೂರು: ಬೆಂಗಳೂರಿಗೆ ಹೆಚ್ಚುವರಿ ವಿಶೇಷ ರೈಲು ಬೇಡಿಕೆಗೆ ಸ್ಪಂದಿಸಿದ ರೈಲ್ವೇ ಮಂಡಳಿ

08:06 AM Jul 24, 2022 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ -ಕೆಎಸ್‌ಆರ್‌ ಬೆಂಗಳೂರು ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್‌ 31ರ ತನಕ ವಾರದಲ್ಲಿ 3 ದಿನ ಹೆಚ್ಚುವರಿಯಾಗಿ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರಿಗೆ ತೆರಳುವ ಮಾರ್ಗದ ಘಾಟಿ ಪ್ರದೇಶಗಳಲ್ಲಿ ಭೂಕುಸಿತದ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಗೆ ರೈಲ್ವೇ ಮಂಡಳಿ ತ್ವರಿತವಾಗಿ ಸ್ಪಂದಿಸಿದೆ.

Advertisement

ನಂ. 06547 ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿದ್ದು ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 9.05ಕ್ಕೆ ತಲುಪಲಿದೆ. ಮಂಗಳವಾರ, ಗುರುವಾರ ಹಾಗೂ ರವಿವಾರ ಸಂಚರಿಸಲಿದೆ. ಕೆಂಗೇರಿಗೆ 8.49ಕ್ಕೆ, ರಾಮನಗರ 9.13ಕ್ಕೆ, ಚನ್ನರಾಯಪಟ್ಟಣ 9.24ಕ್ಕೆ, ಮಂಡ್ಯ 9.54ಕ್ಕೆ, ಮೈಸೂರು 11ಕ್ಕೆ, ಕೃಷ್ಣರಾಜನಗರ 11.49ಕ್ಕೆ, ಹೊಳೆನರಸಿಪುರ 12.43ಕ್ಕೆ, ಹಾಸನ 1.35ಕ್ಕೆ, ಸಕಲೇಶಪುರ ಬೆಳಗ್ಗೆ 3ಕ್ಕೆ, ಸುಬ್ರಹ್ಮಣ್ಯ ರೋಡ್‌ 6.10ಕ್ಕೆ, ಕಬಕಪುತ್ತೂರು 7ಕ್ಕೆ, ಬಂಟ್ವಾಳ 7.30ಕ್ಕೆ, ಮಂಗಳೂರು ಜಂಕ್ಷನ್‌ 8.13ಕ್ಕೆ, ಮಂಗಳೂರು ಸೆಂಟ್ರಲ್‌ 9.05ಕ್ಕೆ ಆಗಮಿಸಲಿದೆ.

ನಂ. 06548 ಮಂಗಳೂರಿನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸಲಿದೆ. ಸಂಜೆ 6.35ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ 6.48ಕ್ಕೆ, ಬಂಟ್ವಾಳ 7.20ಕ್ಕೆ, ಕಬಕಪುತ್ತೂರು 7.48, ಸುಬ್ರಹ್ಮಣ್ಯ ರೋಡ್‌ ರಾತ್ರಿ 8.40ಕ್ಕೆ, ಸಕಲೇಶಪುರ 11.20ಕ್ಕೆ, ಹಾಸನ 12.25ಕ್ಕೆ, ಹೊಳೆನರಸಿಪುರ 1.13ಕ್ಕೆ, ಕೃಷ್ಣರಾಜನಗರ 2.08ಕ್ಕೆ, ಮೈಸೂರು ಬೆಳಗ್ಗೆ 3ಕ್ಕೆ, ಮಂಡ್ಯ 3.54ಕ್ಕೆ, ಚನ್ನರಾಯಪಟ್ಟಣ 4.30ಕ್ಕೆ, ರಾಮನಗರ 4.42ಕ್ಕೆ, ಕೆಂಗೇರಿ 5.11ಕ್ಕೆ, ಬೆಂಗಳೂರು ಕೆಎಸ್‌ಆರ್‌ ನಿಲ್ದಾಣಕ್ಕೆ ಬೆಳಗ್ಗೆ 6.15ಕ್ಕೆ ತಲುಪಲಿದೆ.

ರೈಲು 2 ಟೈಯರ್‌ಎಸಿ 2, ಎಸಿ 3 ಟೈಯರ್‌ 2, 9 ಸೆಕೆಂಡ್‌ ಕ್ಲಾಸ್‌ ಸ್ಲೀಪರ್ , ಎರಡು ಜನರಲ್‌ ಸೆಕೆಂಡ್‌ ಕ್ಲಾಸ್‌ ಬೋಗಿ ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿದೆ.

ಸಂಸದರ ಮನವಿಗೆ
ಸಚಿವರಿಂದ ತ್ವರಿತ ಸ್ಪಂದನೆ
ಮಂಗಳೂರು-ಬೆಂಗಳೂರು ಸಂಪರ್ಕ ರಸ್ತೆಯ ಶಿರಾಡಿ ಘಾಟಿಯಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ದಿಂದಾಗಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಹೆಚ್ಚುವರಿಯಾಗಿ ಒಂದು ಹಗಲು ಮತ್ತು ಒಂದು ರಾತ್ರಿ ರೈಲು ಸಂಚಾರ ಆರಂಭಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಹೊಸದಿಲ್ಲಿಯಲ್ಲಿ ಜು. 18ರಂದು ಭೇಟಿಯಾಗಿ ಮನವಿ ಮಾಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಸಚಿವರು ಇದೀಗ ಸ್ಪಂದಿಸಿದ್ದಾರೆ.

Advertisement

ಉದಯವಾಣಿ
ಗಮನ ಸೆಳೆದಿತ್ತು
ಬೆಂಗಳೂರು-ಮಂಗಳೂರು ಮಧ್ಯೆ ಘಾಟಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಪ್ರಸ್ತುತ ಇರುವ ರೈಲುಗಳ ಜತೆಗೆ ಕೂಡಲೇ ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವಂತೆ ಕರಾವಳಿ ಭಾಗದ ಪ್ರಯಾಣಿಕರ ಬೇಡಿಕೆ ಬಗ್ಗೆ ಉದಯವಾಣಿ ಜು. 18ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next