Advertisement
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳ ಪೈಕಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ವಾರ್ಡ್ ಗಳಿವೆ. 2.27 ಲಕ್ಷ ಮತದಾರರಿದ್ದರೆ, ಜನಸಂಖ್ಯೆ 2.80 ಲಕ್ಷದಷ್ಟಿದೆ. ಸುರತ್ಕಲ್ ನಗರ ಭಾಗದಲ್ಲೇ 11 ವಾರ್ಡ್‌ಗಳಿವೆ. ಪ್ರಸಕ್ತ ಮಹಾನಗರ ಪಾಲಿಕೆ ಉತ್ತರ ಕ್ಷೇತ್ರ ವ್ಯಾಪ್ತಿಗೆ ಶೇ. 40ರಷ್ಟು ಅನುದಾನ ನೀಡುತ್ತಿದೆ. ಆದರೆ ಪಟ್ಟಣದ ಒಂದು ಹಂತದ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕೆ ದೊಡ್ಡ ಮೊತ್ತದ ಯೋಜನೆ ಬೇಕು ಎನ್ನುವುದು ಜನರ ಆಗ್ರಹ.
ಮಂಗಳೂರು ನಗರದ ಅಭಿವೃದ್ಧಿಗೆ ಜಾರಿಯಾದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುರತ್ಕಲ್‌ಗೆ ಯಾವುದೇ ದೊಡ್ಡ ಮೂಲ ಸೌಕರ್ಯ ನೀಡಲಾಗಿಲ್ಲ. ಶಾಸಕರ ಒತ್ತಡದ ಮೇರೆಗೆ ಕೆಲವೊಂದು ಕಾಮಗಾರಿಗಳು ಬಂದಿರುವುದು ಬಿಟ್ಟರೆ ಸ್ಮಾರ್ಟ್ ಸಿಟಿಯಿಂದ ಮಂಗಳೂರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂಬ ಆರೋಪಗಳಿವೆ.
Related Articles
ಒಳಚರಂಡಿ: ಸುರತ್ಕಲ್‌ನ ಹಿಂದಿನ ಒಳಚರಂಡಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕಳಪೆ ಕಾಮಗಾರಿಯಿಂದ ಅಂತರ್ಜಲ ಮಲಿನವಾಗುತ್ತಿದೆ. ಮಾಧವ ನಗರ ವೆಟ್‌ವೆಲ್ ದುರಸ್ತಿಗೆ ಅಮೃತ ಯೋಜನೆಯಡಿ ಸರಕಾರದಿಂದ ಹೆಚ್ಚುವರಿ 3 ಕೋಟಿ ರೂ.ಅನುದಾನ ಬಿಡುಗಡೆಯಾದರೂ ಸಂಪರ್ಕ ಕಲ್ಪಿಸುವ ಕೆಲಸ ಬಾಕಿಯಿದೆ. ಸಂಪರ್ಕ ಪೈಪ್ ಅಳವಡಿಕೆಗೆ ಅಂದಾಜು 15 ಕೋಟಿ ಅನುದಾನ ಅಗತ್ಯವಿದೆ.
ಮಾರುಕಟ್ಟೆ ಕಟ್ಟಡ: ಸುರತ್ಕಲ್, ಕೃಷ್ಣಾಪುರದ ಪಾಲಿಕೆ ಮಾರ್ಕೆಟ್ ನಿರ್ಮಾಣ ಹಂತದಲ್ಲಿದೆ. ಬೈಕಂಪಾಡಿಯಲ್ಲಿ ಇಂದಿಗೂ ರಸ್ತೆ ಬದಿ ಹಾಗೂ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮೀನು, ತರಕಾರಿ ಮಾರಲಾಗುತ್ತಿದೆ. ಇಲ್ಲಿನ ಕೈಗಾರಿಕ ಪ್ರದೇಶದ ಸಾವಿರಾರು ಕಾರ್ಮಿಕ ಅನುಕೂಲಕ್ಕಾಗಿ ಮಾರ್ಕೆಟ್‌ಗೆ ಅನುದಾನ, ಕೂಳೂರು ಬಳಿ ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಿದ್ದು, ಅನುದಾನ ದೊರಕಿಲ್ಲ.
ಈಜುಕೊಳ ಬೇಕಾಗಿದೆ: ಕೃಷ್ಣಾಪುರ ಅಥವಾ ಹೊಸಬೆಟ್ಟುವಿನಲ್ಲಿ ಈಜುಕೊಳ ನಿರ್ಮಾಣ ಯೋಜನೆ ಇತ್ತಾದರೂ, ಜಾಗದ ಕೊರತೆಯ ನೆಪವೊಡ್ಡಿ ಮಂಗಳೂರು ಎಮ್ಮೆಕೆರೆಗೆ ಸ್ಥಳಾಂತರಿಸಲಾಯಿತು. ಹೊಸಬೆಟ್ಟುವಿನ ರೀಜೆಂಟ್ ಬಳಿ ಜಾಗವಿದ್ದರೂ ಕದ್ರಿ ಪಾರ್ಕ್ ಮಾದರಿ ರೂಪಿಸಲು ಅನುದಾನದ್ದೇ ಸಮಸ್ಯೆಯಾಗಿದೆ.
ಪಾರ್ಕಿಂಗ್ ಅವ್ಯವಸ್ಥೆ: ಸುರತ್ಕಲ್‌ನಲ್ಲಿ ದಿನಕ್ಕೆ ನೂರಾರು ದ್ವಿಚಕ್ರ, ಚತುಷ್ಚಕ್ರ ವಾಹನಗಳು ನೋಂದಣಿ ಆಗುತ್ತಿವೆ. ಆದರೆ, ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದೆ ವಾಹನ ಮಾಲಕರು ವಾಹನ ನಿಲ್ಲಿಸಲು ಪರದಾಡುವಂತಾಗಿದೆ. ಪಾರ್ಕಿಂಗ್ ಸ್ಥಳ ಮೀಸಲು, ಮಲ್ಟಿ ಪಾರ್ಕಿಂಗ್ ವ್ಯವಸ್ಥೆ ದೂರದೃಷ್ಟಿ ಯೋಜನೆಯ ಅಗತ್ಯವಿದೆ.
Advertisement
ಯಾವುದಕ್ಕೆ ಪ್ರಮುಖ ಆದ್ಯತೆ?-ಬೈಲಾರೆ, ಪಡ್ರೆ, ಮುಂಚೂರು ಸಹಿತ ರಾಜಕಾಲುವೆ ತಡೆಗೋಡೆ ಅಭಿವೃದ್ಧಿ
-ಒಳ ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳ ಸೌಲಭ್ಯ
-ಸುರತ್ಕಲ್ ರೈಲ್ವೇ ಬ್ರಿಡ್ಜ್ ಬಳಿ ಪಾದಚಾರಿ ಸೇತುವೆ ನಿರ್ಮಾಣವಾಗಬೇಕಿದೆ.
-ಫುಟ್‌ಪಾತ್, ಮಳೆ ನೀರು ಹರಿಯುವ ತೋಡು ನಿರ್ಮಾಣ
-ಸುರತ್ಕಲ್‌ನಲ್ಲಿ ಹೈಟೆಕ್ ಬಸ್ ನಿಲ್ದಾಣ
-ರೈಲು ನಿಲ್ದಾಣಕ್ಕೆ ಕಾರಿಡಾರ್ ನಿರ್ಮಾಣ ಜನರ ಬೇಡಿಕೆಗಳು ಇವು
ಸುರತ್ಕಲ್ ವಲಯದಲ್ಲಿ ಕದ್ರಿ ಮಾದರಿ ಉದ್ಯಾನವನ, ಸುಸಜ್ಜಿತ ಮೈದಾನ, ಟೌನ್‌ಹಾಲ್‌ನಂತಹ ಸಭಾಂಗಣ ನಿರ್ಮಿಸಲು ಪಾಲಿಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಇದರಿಂದ ಮಂಗಳೂರು ನಗರದದಲ್ಲಿ ವಾಹನ ದಟ್ಟಣೆ,ಜನರ ಒತ್ತಡ ಕಡಿಮೆ ಮಾಡಬಹುದು.
-ಅನಂತರಾಜ್ ಶೆಟ್ಟಿಗಾರ್, ರಥಬೀದಿ ಸುರತ್ಕಲ್ ಮಕ್ಕಳ ಪಾರ್ಕ್ ನಿರ್ಮಿಸಿ
ನೆಹರೂ ಮೈದಾನದಂತೆ ಕ್ರೀಡಾಂಗಣ, ರಂಗಮಂದಿರ, ಮಕ್ಕಳಿಗೆ ಆಟವಾಡಲು ಮಕ್ಕಳ ಪಾರ್ಕ್ ನಿರ್ಮಿಸಲು ಅನುದಾನ ಕೊಡಿ, ನಗರದ ಕಡೆ ಬಾರದೆ ಇಲ್ಲೇ ಅವಶ್ಯ ಪೂರೈಸಿಕೊಳ್ಳುತ್ತೇವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ವ್ಯವಸ್ಥೆಗಳನ್ನು ಮಾಡಿಕೊಡಿ.
-ಶಮೀರ್, ಚೊಕ್ಕಬೆಟ್ಟು ಇನ್ನೂ ಡಾಮರು ಕಾಣದ ರಸ್ತೆ
ಸ್ಮಾರ್ಟ್ ಸಿಟಿಗೆ ಸುರತ್ಕಲ್ ಅನ್ನೂ ಸೇರಿಸಿ ಅಭಿವೃದ್ಧಿ ಮಾಡಿ, ಇಲ್ಲಿ ಇನ್ನೂ ಡಾಮರು ಕಾಣದ ರಸ್ತೆಯಿದೆ. ತೋಡಿಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತದೆ. ಮನರಂಜನೆಗೆ ಒಂದೂ ವ್ಯವಸ್ಥೆ ಇಲ್ಲ. ತೆರಿಗೆ ಸಮಾನವಾಗಿ ನೀಡುತ್ತೇವೆ. ಸೌಕರ್ಯವೂ ಸಮಾನವಾಗಿರಲಿ.
-ಆನಂದ ಅಮೀನ್, ಸುರತ್ಕಲ್ -ಲಕ್ಷ್ಮೀನಾರಾಯಣ ರಾವ್