Advertisement
ಭಾರತದ ಗಮನ ಉಗ್ರರನ್ನು ಮಟ್ಟ ಹಾಕುವತ್ತ ಇದ್ದರೆ ಎಲ್‌ಎಸಿಯಲ್ಲಿ ತನಗೆ ಅನುಕೂಲ. ಜತೆಗೆ ಭಾರತದ ಪ್ರಗ ತಿಯೂ ಕುಂಠಿತವಾಗುತ್ತದೆ ಎಂಬುದು ಚೀನದ ಹುನ್ನಾರ.
ಕಳೆದ ಜೂನ್‌ನಲ್ಲಿ ಲಷ್ಕರ್ ಎ ತಯ್ಯಬಾ (ಎಲ್‌ಇಟಿ)ದ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಮತ್ತು ಮುರಿದ್ಕೆ ಯಲ್ಲಿರುವ ಉಗ್ರರ ತರಬೇತಿ ಶಿಬಿರಗಳಿಗೆ ಪ್ರಧಾನ ನಿಧಿ ಸಂಗ್ರಹಕಾರ ಅಬ್ದುಲ್ ರಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವುದಕ್ಕೆ ಕೂಡ ಚೀನ ತಡೆ ಹಾಕಿತ್ತು. ಮಕ್ಕಿಯು ಎಲ್‌ಇಟಿ ಮುಖ್ಯಸ್ಥ, ಜಾಗತಿಕ ಉಗ್ರ ಹಫೀಜ್ ಸಯೀದನ ನಿಕಟ ಸಂಬಂಧಿ, ಎಲ್‌ಇಟಿಯ ತಥಾಕಥಿತ ವಿದೇಶ ವ್ಯವಹಾರ ವಿಭಾಗದ ಮುಖ್ಯಸ್ಥ.
Related Articles
ಮತ ಪ್ರಸರಣಕ್ಕಾಗಿ ಎಂಬ ನೆಪ ಹೇಳಿ ಮಕ್ಕಿ ಪೂರ್ವ ಏಷ್ಯಾದ ದೇಶಗಳಿಂದ ನಿಧಿ ಸಂಗ್ರಹಿಸುತ್ತಾನೆ. ಆದರೆ ಅವನದನ್ನು ಉಪಯೋಗಿಸುವುದು ಮಾತ್ರ ಮತಾಂಧ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಎಸಗುತ್ತಾರೆ, ಅಮೆರಿಕ ಮತ್ತು ಅಫ್ಘಾನಿಸ್ಥಾನಗಳಲ್ಲಿ ಭಾರತೀಯ ಹಿತಾಸಕ್ತಿಗಳನ್ನು ಕೆಡವಲು ಪ್ರಯತ್ನಿಸುತ್ತಾರೆ.
Advertisement
ಪಾಕಿಸ್ಥಾನದಲ್ಲಿ ನೆಲೆಯಾಗಿರುವ 40ಕ್ಕೂ ಹೆಚ್ಚು ಭಯೋತ್ಪಾದಕ ಗುಂಪುಗಳಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರ ಕುಟುಂಬಗಳಿಂದಲೇ ನಡೆಸಲ್ಪಡುವಂಥವು. ಇವೆರಡಕ್ಕೂ ರಾವಲ್ಪಿಂಡಿ ಮತ್ತು ಪಾಕಿಸ್ಥಾನದಲ್ಲಿ ಗಾಢವಾದ ನೆರವು, ಸಹಾನುಭೂತಿ ಇದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆ ನಡೆಸಲು ಮುಕ್ತ ಸ್ವಾತಂತ್ರ್ಯ, ಧನ ಸಹಾಯ ಮತ್ತು ಆಶ್ರಯ – ಮೂರು ಬಗೆಯ ಸಹಾಯಗಳನ್ನು ಎಲ್‌ಇಟಿ ಮತ್ತು ಜೆಇಎಂ ಪಾಕಿಸ್ಥಾನದಿಂದ ಪಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನದ ಸೂಚನೆಯಂತೆ ಕಾಶ್ಮೀರ ಸಹಿತ ಭಾರತದಲ್ಲಿ ಉಗ್ರ ಕೃತ್ಯಗಳನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತವೆ.
ಭಾರತದ ಶಕ್ತಿ ಸೋರಿಕೆಗೆ ಚೀನ ಪ್ರಯತ್ನಜೈಶ್ ಎ ಮೊಹಮ್ಮದ್ ನೆಲೆಯಾಗಿರುವುದು ಬಹವಾಲ್ಪುರದಲ್ಲಿ. ಮಸೂದ್ ಅಜರ್ ಇದರ ನಾಯಕ. ಈ ಅಂತಾರಾಷ್ಟ್ರೀಯ ಉಗ್ರ ಗುಂಪಿನ ಕಾರ್ಯಾಚರಣೆಗಳ ಸೂತ್ರಧಾರ ರವೂಫ್ . 2016ರಲ್ಲಿ ಪಠಾಣ್‌ಕೋಟ್ ವಾಯುನೆಲೆ ಮೇಲಣ ದಾಳಿ ಮತ್ತು 2019ರ ಪುಲ್ವಾಮಾ ದಾಳಿಗಳ ಸೂತ್ರಧಾರನೂ ಇವನೇ. ಭಾರತದ ಮೇಲೆ ನಖಶಿಖಾಂತ ದ್ವೇಷ ಹೊಂದಿರುವ ಮಸೂದ್ ಅಜರ್‌ನ ಸೂಚನೆಯಂತೆ ಜಮ್ಮು – ಕಾಶ್ಮೀರದಲ್ಲಿ ಉಗ್ರ ದಾಳಿಗಳನ್ನು ಯೋಜಿಸುವವನು ರವೂಫ್ . 1994ರಲ್ಲಿ ಶ್ರೀನಗರದ ಹೊರವಲಯದಲ್ಲಿ ಮಸೂದ್ ಅಜರ್‌ನನ್ನು ಸೆರೆಹಿಡಿಯಲಾಗಿತ್ತು. ಆಗ ಭಾರತೀಯ ಪಡೆಗಳು ತನ್ನನ್ನು ನೋಡಿಕೊಂಡದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ತವಕ ಮಸೂದ್ ಅಜರ್‌ಗೆ. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರರ 1267 ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ 2019ರ ಮೇ 1ರಂದು ಚೀನ ಕನಿಷ್ಠ ನಾಲ್ಕು ಬಾರಿ ತಡೆ ಒಡ್ಡಿತ್ತು. ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸದೆ ಇರುವುದಕ್ಕೆ ಸಂಬಂಧಿಸಿದ ಸೂಚನೆಯನ್ನು ಚೀನದ ಉನ್ನತ ನಾಯಕರೇ ನೀಡಿದ್ದರು. ತನ್ನ ನೆಲದಲ್ಲಿ ಮಸೂದ್ ಅಜರ್ ಇಲ್ಲ ಎಂಬುದಾಗಿ ಪಾಕಿಸ್ಥಾನವು ಜಾಗತಿಕ ಮಟ್ಟದಲ್ಲಿ ಉಗ್ರರಿಗೆ ಹಣಕಾಸು ನೆರವು ಲಭಿಸುವುದರ ಮೇಲೆ ನಿಗಾ ಇರಿಸಿರುವ ಎಫ್ಎಟಿಎಫ್ಗೆ ಸಾಕಷ್ಟು ಬಾರಿ ಹೇಳಿದೆ. ಆದರೆ ನಿಜಾಂಶ ಎಂದರೆ, ಪಾಕಿಸ್ಥಾನದ ಪಂಜಾಬ್ ಪ್ರಾಂತದ ಮದರಸ ವೊಂದರಲ್ಲಿ ಮಸೂದ್ ಅಜರ್ ಸಾಕಷ್ಟು ಕಾಲದಿಂದ ಆರಾಮವಾಗಿ ನೆಲೆಸಿದ್ದಾನೆ. ಹೀಗೆ ಮಸೂದ್ ಅಜರ್ ಸಹಿತ ಉನ್ನತ ಉಗ್ರ ನಾಯಕರಿಗೆಲ್ಲ ಆಶ್ರಯ ನೀಡಿ ಸಾಕಿ ಸಲಹುತ್ತ ಭಾರತದತ್ತ ಛೂಬಿಟ್ಟು ಭಾರತದ ಶಕ್ತಿ ಸಾಮರ್ಥ್ಯದ ಬಹುಭಾಗ ಈ ಛಾಯಾಸಮರವನ್ನು ನಿಭಾಯಿಸುವುದ ರಲ್ಲಿಯೇ ಕಳೆದುಹೋಗುವಂತೆ ಮಾಡುತ್ತಿರುವುದಕ್ಕೆ ಉಡು ಗೊರೆ ಎಂಬಂತೆ ಚೀನವು ಇವರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ತಡೆ ಒಡ್ಡುತ್ತಲೇ ಬರುತ್ತಿದೆ. ಚೀನ ಒಡ್ಡಿದ ತಡೆಗಳು
1.ಅಬ್ದುಲ್ ರವೂಫ್ ಅಜರ್: ಜೈಶ್ ಎ ಮೊಹಮ್ಮದ್‌ನ ಕಾರ್ಯಾಚರಣೆಗಳ ಸೂತ್ರಧಾರ.
2.ಅಬ್ದುಲ್ ರಹಮಾನ್ ಮಕ್ಕಿ: ಎಲ್‌ಇಟಿಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ
3.ಅಜಂ ಚೀಮಾ, ಎಲ್‌ಇಟಿಯ ಗುಪ್ತಚರ ಮುಖ್ಯಸ್ಥ: ಜಕಿ ಉರ್ ರೆಹಮಾನ್‌ನ ನಾಯಕತ್ವದಲ್ಲಿ 26/11 ದಾಳಿ ಕೋರರಿಗೆ ತರಬೇತಿ ನೀಡಿದವನು.
4.ಮೊಹಮ್ಮದ್ ಯೂಸುಫ್ ಶಾ ಆಲಿಯಾಸ್ ಸಯ್ಯದ್ ಸಲಾಹುದ್ದೀನ್: ಹಿಜ್ಬುಲ್ ಮುಜಾಹಿದೀನ್ ನಾಯಕ