Advertisement

ರಬಕವಿ-ಬನಹಟ್ಟಿ: ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯ

04:51 PM Sep 28, 2022 | Team Udayavani |

ರಬಕವಿ-ಬನಹಟ್ಟಿ: ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ ಎಂದು ಬನಹಟ್ಟಿಯ ದಿವಾಣಿ ನ್ಯಾಯಾಧೀಶೆ ಶುಷ್ಮ ಟಿ.ಸಿ. ಹೇಳಿದರು.

Advertisement

ಅವರು ಸೆ.28ರ ಬುಧವಾರ ರಾಮಪುರದ ಪೂರ್ಣ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ರಬಕವಿ-ಬನಹಟ್ಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಾದಕ ವ್ಯಸನದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಅಮೂಲ್ಯವಾದದು. ಅದು ನಮಗೆ ಮತ್ತೇ ಬೇಕು ಅಂದರೂ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಹವ್ಯಾಸವನ್ನು ಮೈಗೂಡಿಸಿಕೊಂಡು ಆದರ್ಶ ಪ್ರಾಯವಾಗಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡು ಬೇರೆಯವರಿಗೂ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮಾದಕ ವ್ಯಸನ ಒಬ್ಬ ವ್ಯಕ್ತಿಯನಷ್ಟೇ ಅಲ್ಲ ಆತನ ಇಡೀ ಕುಟುಂಬವನ್ನೇ ನಾಶ ಮಾಡುತ್ತದೆ. ಇಂದಿನ ಯುವ ಜನಾಂಗ ದುಷ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ಅರಿವಿಲ್ಲದಂತೆ ಅದಕ್ಕೆ ದಾಸರಾಗುತ್ತಿದ್ದಾರೆ. ಇದು ಮಾನಸಿಕ ಮತ್ತು ದೈಹಿಕವಾಗಿ ಜೀವನವನ್ನು ದುರಂತಕ್ಕೆ ತಳ್ಳುತ್ತಿದೆ. ಮಾದಕ ವ್ಯಸನವು ಯಾವುದೇ ಬೇದ ಬಾವ ಇಲ್ಲದೇ ಎಲ್ಲರಲ್ಲಿಯೂ ಕಂಡು ಬರುತ್ತಿದ್ದು, ಅದೇ ಚಟವಾಗಿ ಪರಿಣಮಿಸುತ್ತಿದೆ. ಅದು ತಮ್ಮ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದರೂ ಯುವ ಜನಾಂಗಕ್ಕೆ ಅದರಿಂದ ಹೊರಗೆ ಬರಲು ಆಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾದಕ ವ್ಯಸನ ತಡೆಗಟ್ಟುವ ಕುರಿತು ವಕೀಲರಾದ ಕಿರಣ ದೇಸಾಯಿ, ರಸ್ತೆ ಅಪಘಾತ ತಡೆ ಕಾಯ್ದೆ ಕುರಿತು ಕೆ. ಎಸ್. ನ್ಯಾಮಗೌಡ ಉಪನ್ಯಾಸ ನೀಡಿದರು.

Advertisement

ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನೇಮಗೌಡ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪೂರ್ಣ ಪ್ರಜ್ಞೆ ಶಿಕ್ಷಣ ಸಂಸ್ಥೆಯ ಚೇರ್ಮೇನ್‌ ಎಸ್. ವಿ. ಮೇಣಿ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಸಹಾಯಕ ಅಭಿಯೋಜಕ ಮಹಾಂತೇಶ ಮಸಳಿ, ಸಂಸ್ಥೆಯ ಉಪಾಧ್ಯಕ್ಷ ರಾಮದಾಸ ಸಿಂಘನ, ವಕೀಲರಾದ ಕೆ. ಡಿ. ತುಬಚಿ, ಬಿ. ಎಮ್. ಖಾರ್ವೇಕರ, ಎಮ್. ಎಮ್. ಕಲಾದಗಿ, ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ, ಎಎಸ್‌ಐ ಎಸ್. ಎಂ. ಹುದ್ದಾರ, ಪ್ರಾಚಾರ್ಯರಾದ ಎಸ್. ಬಿ. ಹಟ್ಟಿ, ಎಂ. ಎನ್. ಕೋಪರ್ಡೆ, ಎ. ಕೆ. ಕಾಡದೇವರ, ಬಿ. ಎಂ. ಹಳೇಮನಿ, ಮುಲ್ಲಾ, ಮುನ್ನೋಳ್ಳಿ, ವಿನಾಯಕ ಹಳಿಂಗಳಿ ಸೇರಿದಂತೆ ಅನೇಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next