Advertisement
ಕೈಬಿಟ್ಟ ಗ್ರಾಮಗಳುಕಡಬ ತಾಲೂಕಿಗಾಗಿ ಹಲವು ದಶಕಗಳಿಂದಲೇ ಹೋರಾಟಗಳು ನಡೆದಿತ್ತು. ಕಡಬದ ತಾಲೂಕಿನ ಪ್ರಸ್ತಾವನೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ, ಹತ್ಯಡ್ಕ ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ ಏನೆಕಲ್, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು, ಎಡಮಂಗಲ, ಐವತ್ತೂಕ್ಲು(ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿತ್ತು. ತಾಲೂಕು ರಚನ ಸಮಿತಿಗಳೂ ಈ ಗ್ರಾಮಗಳನ್ನು ಸೇರ್ಪಡೆಗೊಳಿಸಿಯೇ ಸರಕಾರಕ್ಕೆ ವರದಿ ನೀಡಿದ್ದವು.
Related Articles
ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಫಲವಾಗಿ ರಾಜ್ಯದ ಅಧೀನ ಕಾರ್ಯದರ್ಶಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ, ಅಗತ್ಯವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಕಡಬ ತಾ| ಹೋರಾಟ ಸಮಿತಿಯ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.
Advertisement
ಸೇರಿಸಿದರೆ ಉತ್ತಮಪ್ರಸ್ತುತ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ ಹಾಗೂ ಹತ್ಯಡ್ಕ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಿದರೆ ಅಲ್ಲಿನ ಜನರಿಗೆ ಅನುಕೂವಾಗಲಿದೆ. ನಾವು ಕಂದಾಯ ಕಚೇರಿಯ ಕೆಲಸಗಳಿಗೆ ಮಾತ್ರ ಬೆಳ್ತಂಗಡಿಗೆ ಹೋಗಬೇಕಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆಗಳ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಉತ್ತಮ ರಸ್ತೆ ಮತ್ತು ಸೇತುವೆಗಳಿರುವ ಕಾರಣ ನಮಗೆ ಕಡಬವನ್ನು ತಲುಪುವುದು ಸುಲಭ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಿ ಎನ್ನುವುದು ನಮ್ಮ ಆಗ್ರಹ.
ಎ.ಸಿ. ಮ್ಯಾಥ್ಯೂ, ಮಾಜಿ ಅಧ್ಯಕ್ಷರು, ಶಿಬಾಜೆ ಗ್ರಾ.ಪಂ. ನಾಗರಾಜ್ ಎನ್.ಕೆ.