ಪಡುಬಿದ್ರಿ: ಉಡುಪಿ ವಿದ್ಯುತ್ ಸ್ಥಾವರದ ವಠಾರದಲ್ಲಿ ಸ್ಥಾಪಿಸಲ್ಪಟ್ಟ ದೇವಾಲಯಗಳ ವರ್ಧಂತ್ಯುತ್ಸವ ಸೋಮವಾರ ಜರಗಿತು. ಸಾಂಪ್ರದಾಯಿಕ ವಿಶೇಷ ಪೂಜೆಯನ್ನು ಕಂಪೆನಿಯ ಜಂಟಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ದಂಪತಿ ಗ್ರಾಮಸ್ಥರ ಹಾಗೂ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿಸಿದರು.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಪತ್ನಿ, ಅದಾನಿ ಫೌಂಡೇಶನ್ನ ಮ್ಯಾನೇ ಜಿಂಗ್ ಟ್ರಸ್ಟಿ ಡಾ| ಪ್ರೀತಿ ಅದಾನಿ ಆಶಯದಂತೆ 2016ರಲ್ಲಿ ಅದಾನಿ ಸ್ಥಾವರದ ವಠಾರದಲ್ಲಿ ಗಣಪತಿ, ಹನುಮಂತ ಹಾಗೂ ನಾಗದೇವರ ದೇವಸ್ಥಾನವನ್ನು ನಿರ್ಮಿಸಿ ಗ್ರಾಮಸ್ಥ ರಿಗೆ ಸಮರ್ಪಿಸಲಾಯಿತು. ಇದಲ್ಲದೆ ಸ್ಥಾವರದ ಮಧ್ಯ ಭಾಗದಲ್ಲಿ ನಾಗಬನವನ್ನೂ ಸಹ ನಿರ್ಮಾಣ ಮಾಡಿ ಪ್ರತಿನಿತ್ಯ ಎರಡು ಬಾರಿ ಈ ದೇವಾ ಲಯಗಳಿಗೆ ಮತ್ತು ನಾಗಬನಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ.
ಸೋಮವಾರ ವರ್ಧಂತಿ ಉತ್ಸವ ದಂಗವಾಗಿ ಗಣಪತಿ ಸನ್ನಿಧಾನದಲ್ಲಿ 1,144 ಮೋದಕ ಹೋಮ, 1,144 ಅಪೂಪ ಹೋಮ, ನವಕಪ್ರಧಾನ ಹೋಮ, ನವಕ ಕಲಶ, ಹನುಮಂತ ದೇವರ ಸನ್ನಿಧಾನದಲ್ಲಿ ವಾಯುಸ್ತುತಿ ಪುರಃಶ್ಚರಣ ಹೋಮ, ನವಕಪ್ರಧಾನ ಹೋಮ, ನವಕ ಕಲಶ ಮತ್ತು ನಾಗದೇವರಿಗೆ ಆಶ್ಲೇಷಾ ಬಲಿಗಳನ್ನು ವೇ| ಮೂ| ಪಾವಂಜೆ ವಾಸುದೇವ ಭಟ್ ಅವರ ನೇತೃತ್ವದಲ್ಲಿ ನೆರವೇರಿಸ ಲಾಯಿತು. ನಾಗಬನಕ್ಕೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಲಾಯಿತು.
ಯುಪಿಸಿಎಲ್ ಅದಾನಿ ಸಮೂಹಕ್ಕೆ ಸೇರಿದ ಅನಂತರ ಹತ್ತು ಹಲ ವಾರು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿ
ಕೊಳ್ಳುತ್ತಾ ಬರುತ್ತಿದ್ದು, ದೇವರ ಆಶೀರ್ವಾದ ಹಾಗೂ ಗ್ರಾಮಸ್ಥರ ಮತ್ತು ಪಂಚಾಯತ್ ಬೆಂಬಲ ದಿಂದಲೇ ಮಾತ್ರ ಇದು ಸಾಧ್ಯ ಎಂದು ಕಿಶೋರ್ ಆಳ್ವ ಹೇಳಿದರು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಡಾ| ದೇಪ್ರಸಾದ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಮುದರಂಗಡಿ ಗ್ರಾ.ಪಂ.ಅಧ್ಯಕ್ಷ ಡೇವಿಡ್ ಡಿ”ಸೋಜಾ, ಜಿ.ಪಂ.ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ, ತಾ.ಪಂ. ಸದಸ್ಯ ಯು. ಶೇಖಬ್ಬ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.