Advertisement

ವಿಳಿಂಜಂ ಪೊಲೀಸ್‌ ಠಾಣೆಗೆ 3 ಸಾವಿರ ಮಂದಿಯಿಂದ ಮುತ್ತಿಗೆ

06:35 PM Nov 28, 2022 | Team Udayavani |

ತಿರುವನಂತಪುರ: ಕೇರಳದಲ್ಲಿ ನಿರ್ಮಾಣ ಹಂತದಲ್ಲಿರುವ ಅದಾನಿ ಬಂದರು ವಿರುದ್ಧದ ಸ್ಥಳೀಯರ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ.

Advertisement

ಭಾನುವಾರ ಸಂಜೆ ಸುಮಾರು 3 ಸಾವಿರದಷ್ಟು ಮಂದಿ ವಿಳಿಂಜಂ ಪೊಲೀಸ್‌ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಠಾಣೆಯಲ್ಲಿ ದೊಡ್ಡಮಟ್ಟದಲ್ಲಿ ದಾಂದಲೆಯನ್ನೂ ನಡೆಸಲಾಗಿದ್ದು, ಘಟನೆಯಲ್ಲಿ 40 ಪೊಲೀಸ್‌ ಸಿಬ್ಬಂದಿ ಮತ್ತು ಹಲವು ಸ್ಥಳೀಯರು ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಮಹಿಳೆಯರು, ಮಕ್ಕಳು ಸೇರಿದಂತೆ 3 ಸಾವಿರ ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ಕಾನೂನುಬಾಹಿರವಾಗಿ ಗುಂಪು ಸೇರಿರುವುದು, ಗಲಭೆ, ಕ್ರಿಮಿನಲ್‌ ಸಂಚು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.

ಆಗಿದ್ದೇನು?
ಅದಾನಿ ಪೋರ್ಟ್‌ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಶನಿವಾರ ನಾಲ್ವರನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಭಾನುವಾರ ಸಂಜೆ ಕಬ್ಬಿಣದ ರಾಡು, ಕೋಲುಗಳು, ಕಲ್ಲು, ಇಟ್ಟಿಗೆಗಳನ್ನು ಹೊತ್ತುಕೊಂಡು ಪೊಲೀಸ್‌ ಠಾಣೆಯನ್ನು ಸುತ್ತುವರಿಯಿತು. ಆರೋಪಿಗಳನ್ನು ಬಿಡುಗಡೆ ಮಾಡದಿದ್ದರೆ ಠಾಣೆಗೆ ಬೆಂಕಿ ಹಚ್ಚುವುದಾಗಿಯೂ ಬೆದರಿಕೆ ಹಾಕಲಾಯಿತು. 5 ಪೊಲೀಸ್‌ ವಾಹನಗಳಿಗೆ ಹಾನಿ ಮಾಡಿ, ಠಾಣೆಯೊಳಗಿದ್ದ ಕಡತಗಳನ್ನೆಲ್ಲ ನಾಶಪಡಿಸಿತು ಎಂದು ಎಫ್ಐಆರ್‌ನಲ್ಲಿಉಲ್ಲೇಖಿಸಲಾಗಿದೆ.

ಇನ್ನು, ಪೊಲೀಸ್‌ ಠಾಣೆ ಮೇಲಿನ ದಾಳಿಯನ್ನು ಖಂಡಿಸಿರುವ ಕೇರಳ ಸರ್ಕಾರ “ಇದು ಸ್ವೀಕಾರಾರ್ಹವಲ್ಲ’ ಎಂದು ಹೇಳಿದೆ. ಇನ್ನು, ಲ್ಯಾಟಿನ್‌ ಕ್ಯಾಥೊಲಿಕ್‌ ಚರ್ಚ್‌, “ಈ ದಾಳಿಯ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ. ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು’ ಎಂದು ಒತ್ತಾಯಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next