Advertisement

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

12:43 AM Nov 24, 2024 | Team Udayavani |

ಹೊಸದಿಲ್ಲಿ: ಸೌರಶಕ್ತಿ ಒಪ್ಪಂದ ಪಡೆದುಕೊಳ್ಳಲು 2,200 ಕೋಟಿ ರೂ. ಲಂಚ ನೀಡಿ ರುವ ಪ್ರಕರಣಕ್ಕೆ ಸಂಬಂ ಧಿಸಿದಂತೆ ಗೌತಮ್‌ ಅದಾನಿ ಮತ್ತು ಅವರ ಅಳಿಯ ಸಾಗರ್‌ ಅದಾನಿಗೆ ಅಮೆರಿಕ ಸಮನ್ಸ್‌ ನೀಡಿದೆ. ಅಹ್ಮದಾಬಾದ್‌ನಲ್ಲಿರುವ ಅದಾನಿ ಅವರ ಮನೆಗೆ ಈ ಸಮನ್ಸ್‌ ತಲುಪಿಸಲಾಗಿದೆ. ಈ ಆರೋಪಗಳಿಗೆ ಮುಂದಿನ 21 ದಿನಗಳೊಳಗೆ ಉತ್ತರ ನೀಡಬೇಕು ಎಂದು ಅಮೆರಿಕದ ಭದ್ರತೆ ಮತ್ತು ವಿನಿಮಯ ಸಂಸ್ಥೆ ಸೂಚಿಸಿದೆ. ಸಮನ್ಸ್‌ಗೆ ಉತ್ತರ ನೀಡಲು ವಿಫ‌ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next