Advertisement

ಅದಮಾರು: ಸಂಸ್ಥಾಪಕರ ದಿನಾಚರಣೆ

11:17 PM Jul 04, 2019 | Team Udayavani |

ಪಡುಬಿದ್ರಿ: ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶ್ರೀ ವಿಬುಧೇಶ ತೀರ್ಥರು ಗುಣಮಟ್ಟಕ್ಕೆ ಬೆಲೆ ನೀಡುತ್ತಿದ್ದವರಾಗಿದ್ದರು. ವಿಜ್ಞಾನ, ಆಂಗ್ಲ ಮಾಧ್ಯಮಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದ ಅವರು ಕನ್ನಡ ಮಾಧ್ಯಮವನ್ನೂ ಎಂದು ಅವಗಣಿಸಿರಲಿಲ್ಲ. ಮಕ್ಕಳು ದೇಶದ ಹೆಮ್ಮೆ ಎಂಬುದನ್ನೂ ಪ್ರತಿಪಾದಿಸುತ್ತಿದ್ದ ಅವರು ಒಲಿಂಪಿಕ್ಸ್‌ ಪದಕ ತಮ್ಮ ಸಂಸ್ಥೆಯ ಮಕ್ಕಳಿಂದ ಭಾರತಕ್ಕೆ ಸಿಗಬೇಕೆಂಬ ಹಂಬಲ ಅವರದ್ದಾಗಿತ್ತು ಎಂದು ಪೂರ್ಣಪ್ರಜ್ಞ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ | ಜಗದೀಶ ಶೆಟ್ಟಿ ಹೇಳಿದರು.

Advertisement

ಅವರು ಜು. 4ರಂದು ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ, ದತ್ತಿ ಉಪನ್ಯಾಸ ಮತ್ತು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿದ್ಯಾರ್ಥಿ ಸಂಘಗಳು ಅತ್ಯವಶ್ಯಕವೆಂದ ಡಾ| ಶೆಟ್ಟಿ ಸಂಸ್ಕೃತಿ ಯನ್ನು ಮೈಗೂಡಿಸಿಕೊಂಡು ಬೆಳೆಯ ಬೇಕು. ನಿಮ್ಮ ಜೀವನೋತ್ಸಾಹ ಕುಗ್ಗ ದಿರಲಿ. ಸೋಲಿನಿಂದ ಧೃತಿಗೆಡದಿರಿ. ಬಾಳಲ್ಲಿ ನಂಬಿಕೆ ಸದಾ ಇರಲಿ ಎಂದರು.

ಇದೇ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಉಡುಪ ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ಎರ್ಮಾಳುಬೀಡು ಅಶೋಕರಾಜರ ಪ್ರಾಯೋಜಕತ್ವದ ದತ್ತಿ ಉಪನ್ಯಾಸವನ್ನು ಶಿವಮೊಗ್ಗ ಜಾವಳ್ಳಿಯ ಅರಬಿಂದೋ ಪ. ಪೂ. ಕಾಲೇಜಿನ ಸಂಸ್ಕೃತ ಶಿಕ್ಷಕ ಜಿ.ಎಸ್‌. ನಟೇಶ್‌ ಪ್ರಸ್ತುತಪಡಿಸಿ ದರು. ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ, ನ್ಯಾಯವಾದಿ ಪ್ರದೀಪ್‌ ಕುಮಾರ್‌ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ಪ. ಪೂ. ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಪೈ ಸ್ವಾಗತಿಸಿದರು. ಹಿಂದಿ ಪ್ರಾಧ್ಯಾಪಕಿ ಡಾ| ಒಲಿವಿಟಾ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀಕಾಂತ್‌ ರಾವ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next