Advertisement

ಮೈತ್ರಿಗೆ HDK ಕಂಬಳಿ ಹಾಕಿಕೊಂಡೇ ಕುಳಿತಿದ್ದರು: ಎಚ್‌. ವಿಶ್ವನಾಥ್‌ ವ್ಯಂಗ್ಯ

02:57 PM Feb 02, 2021 | Team Udayavani |

ಕೆ.ಆರ್‌.ನಗರ: ನಾನು ರಾಜಕೀಯ ಪಕ್ಷಗಳಿಗೆ ಕರ್ಚೀಫ್ ಹಾಕುತ್ತೇನೆ ಎಂದು ಹೇಳಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಇತರ ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಂಬಳಿ ಹಾಸಿಕೊಂಡೇ ಕುಳಿತಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವ್ಯಂಗ್ಯವಾಡಿದರು.

Advertisement

ಬಿಜೆಪಿ ನಾಯಕರ ವಿರುದ್ಧ ತಿರುಗಿ ಬಿದ್ದಿರುವ ಎಚ್‌.ವಿಶ್ವನಾಥ್‌ ಅವರು ಇನ್ನೊಂದು ರಾಜಕೀಯ ಪಕ್ಷ ಇದ್ದಿದ್ದರೆ ಕರ್ಚೀಫ್ ಅಥವಾ ಟವೆಲ್‌ ಹಾಕಿರುತ್ತಿದ್ದರು ಎಂಬ ಎಚ್‌.ಡಿ.  ಕುಮಾರ ಸ್ವಾಮಿ ಅವರ ಟೀಕೆಗೆ ಸುದ್ದಿಗೋಷ್ಠಿ  ಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ:2021 ಬಜೆಟ್ ಮಂಡನೆ ನಂತರ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆ ಏನು?

ಇಬ್ಬರಿಂದ ಮೈತ್ರಿ ಪತನ: ಎಚ್‌.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ನಾನು ಕ್ಲರ್ಕ್‌ ಆಗಿದ್ದೆ. ಕಾಂಗ್ರೆಸ್‌ ನನ್ನನ್ನು ಮುಖ್ಯಮಂತ್ರಿಯಂತೆ ನಡೆಸಿಕೊಳ್ಳಲಿಲ್ಲ ಎನ್ನು ತ್ತಾರೆ. ಮತ್ತೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್‌ ಒಂದು ರಾಜಕೀಯ ಪಕ್ಷ ವೇ ಅಲ್ಲ. ಅವರಿಗೆ ತತ್ವ ಸಿದ್ದಾಂತ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಎರಡು ತತ್ವ ಸಿದ್ಧಾಂತ ಇಲ್ಲದ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ ದ ನಂತರ ಇಬ್ಬರು ಮಹಾನ್‌ ನಾಯಕರಿಂದ ಸರ್ಕಾರ ಪತನವಾಯಿತು ಎಂದು ವಿಧಾನ ಪರಿಷತ್‌ ಸದಸ್ಯರು ಹೇಳಿದರು.

ಸಮ್ಮಿಶ್ರ ಸರ್ಕಾರ ಪತನವಾಗಲು ನಾವು ಕಾರಣರಲ್ಲ. ಅದಕ್ಕೆ ಕಾರಣ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣರು ಎಂಬುದನ್ನು ರಾಜ್ಯದ ಜನತೆ ಮನಗಾಣಬೇಕು. ಏಕೆಂದರೆ ಅದನ್ನು ಅವರಿಬ್ಬರೇ ಸಾಭೀತು ಮಾಡಿದ್ದಾರೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next