ವಿಧಾನ ಪರಿಷತ್ತು: ಚೊಚ್ಚಲ ಹೆರಿಗೆ ಸುಸೂತ್ರವಾಗಿ ಆಗಿದೆ. ಮಗುವೂ ಚೆನ್ನಾಗಿದೆ. ಆದರೆ, ಮಗು ಈ ಕಡೆ ಬಂದ್ರೆ ಕುಲುಕುಲು ನಗ್ತದೆ; ಆ ಕಡೆ ಹೋದ್ರೆ ಚಿಟ್‌ಚಿಟ್ ಚೀರ್ತದೆ…!
– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಚೊಚ್ಚಲ ಬಜೆಟ್ ಅನ್ನು ಬಿಜೆಪಿಯ ಎಚ್. ವಿಶ್ವನಾಥ್ ವಿಶ್ಲೇಷಿಸಿದ ರೀತಿ ಇದು.
ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಆ ಬಜೆಟ್ ಎಂಬ “ಮಗು’ ನೋಡಲು ತುಂಬಾ ಮುದ್ದಾಗಿಯೂ ಇದೆ. ಈ ಕಡೆ (ಆಡಳಿತ ಪಕ್ಷದ ಕಡೆ) ನೋಡಿ ಕುಲುಕುಲು ನಗುತ್ತದೆ. ಆ ಕಡೆ (ಪ್ರತಿಪಕ್ಷಗಳ ಕಡೆ)ಗೆ ಹೋದ್ರೆ ಸಾಕು, ಅಳಲು ಶುರು ಮಾಡುತ್ತದೆ. ಅದರಲ್ಲೂ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಎತ್ತಿಕೊಂಡರಂತೂ ಕಿಟಾರ್‌ನೇ ಚೀರುತ್ತದೆ. ಅದೇ ಪಕ್ಕದಲ್ಲೇ ಇರುವ ಜೆಡಿಎಸ್‌ನ ಬೋಜೇಗೌಡ ಮತ್ತು ಶ್ರೀಕಂಠೇಗೌಡರು ಇದನ್ನು ಎತ್ತಿ ಆಡಿಸುತ್ತಾರೆ. ಆಗ ಮಗು, “ನನ್ನಂತೆಯೇ ಇದ್ದಾರಲ್ಲಾ ಅಂತ ನೋಡಿ ನಗುತ್ತದೆ’ ಎಂದು ವಿಶ್ವನಾಥ್ ತಮ್ಮದೇ ಆದ ಧಾಟಿಯಲ್ಲಿ ಬಣ್ಣಿಸಿದರು.
ಇದನ್ನೂ ಓದಿ:ಸಬ್ ಕಾ ವಿಶ್ವಾಸ್ ಸೇ ಕಾಂಗ್ರೆಸ್ ಸರ್ವನಾಶ್: ಬೋಪಯ್ಯ