Advertisement

ಜಾಹೀರಾತು ರಹಿತ ಯೂಟ್ಯೂಬ್‌ ಪ್ರೀಮಿಯಂ

04:41 AM May 18, 2020 | Lakshmi GovindaRaj |

ಆನ್‌ಲೈನ್‌ ಸ್ಟ್ರೀಮಿಂಗ್‌ ಕಂಪನಿಗಳು ಜನಪ್ರಿಯವಾಗುತ್ತಿರುವ ಈ ಹೊತ್ತಿನಲ್ಲಿ, ಯೂಟ್ಯೂಬ್‌ ಕೂಡಾ, ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರತಿನಿತ್ಯ ಯೂಟ್ಯೂಬ್‌ ಬಳಸುವವರಿಗೆ ಕಿರಿಕಿರಿ ತರುವ ಒಂದು ವಿಷಯವೆಂದರೆ,  ವಿಡಿಯೊ ಶುರುವಾಗುವ ಮೊದಲು ಮತ್ತು ನಡುವಿನಲ್ಲಿ ಬರುವ ಜಾಹೀರಾತುಗಳು. ಈ ಬಗ್ಗೆ ಬಳಕೆದಾರ ಬೇಸರ ಪಟ್ಟುಕೊಳ್ಳುವುದಕ್ಕೆ ಕಾರಣವೇ ಇಲ್ಲ. ಏಕೆಂದರೆ, ಜಾಹೀರಾತುಗಳು ಯೂಟ್ಯೂಬ್‌ ಆದಾಯ ಮೂಲವೂ ಹೌದು.

Advertisement

ಬಳಕೆದಾರ, ಉಚಿತವಾಗಿ ಯೂಟ್ಯೂಬ್‌ ವಿಡಿಯೋಗಳನ್ನು ನೋಡಲು ಅನುವು ಮಾಡಿಕೊಡುವುದರಿಂದ, ಜಾಹೀರಾತುಗಳನ್ನು ಸಹಿಸಿಕೊಳ್ಳಬೇಕಾದುದು ಅನಿವಾರ್ಯ. ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್‌ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌  ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ.

ಲಭ್ಯವಿರುವ ಪ್ಲ್ಯಾನುಗಳು ಇಂತಿವೆ
* 139 ರೂ./ ತಿಂಗಳಿಗೆ
* 399 ರೂ./ 3 ತಿಂಗಳಿಗೆ

ಉಚಿತವಾಗಿ ಟ್ರೈ ಮಾಡಿ:  ದಾದಾರಿಕೆಯನ್ನು ಪಡೆಯುವ ಮುನ್ನ, ಯೂಟ್ಯೂಬ್‌ ಪ್ರೀಮಿಯಂನ ಅನುಭವ ಪಡೆಯಬೇಕೆಂದರೆ ಅದಕ್ಕೂ ಅವಕಾಶವಿದೆ. ಒಂದು ತಿಂಗಳ ಕಾಲ ಫ್ರೀ ಟ್ರಯಲ್, ಅಂದರೆ ಉಚಿತ ಚಂದಾದಾರಿಕೆಯನ್ನು  ಆಯ್ಕೆ ಮಾಡಿ, ಅದರ ಸವಲತ್ತುಗಳ ಅನು ಭವ ಪಡೆದು ಕೊಳ್ಳ ಬಹುದು. ಅಂದ ಹಾಗೆ, ಈ ಫ್ರೀ ಟ್ರಯಲ್‌ ಒಂದು ಯೂಟ್ಯೂಬ್‌ ಖಾತೆಗೆ, ಒಂದು ಬಾರಿ ಮಾತ್ರ ಲಭ್ಯ. ಒಮ್ಮೆ ಫ್ರೀ ಟ್ರಯಲ್‌ ಆಯ್ಕೆ ಪಡೆದುಕೊಂಡ ನಂತರ, ಎರಡನೇ  ಬಾರಿ ಈ ಆಯ್ಕೆಯನ್ನು ಆರಿಸಿಕೊಳ್ಳಲಾಗುವುದಿಲ್ಲ.

ಪ್ರೀಮಿಯಂ ಸವಲತ್ತುಗಳು:
* ಜಾಹೀರಾತು ರಹಿತ ಸೇವೆ

Advertisement

* ಯೂಟ್ಯೂಬ್‌ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು.

* ಯೂಟ್ಯೂಬ್‌ ಒರಿಜಿನಲ್ಸ್‌ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.

* ಯೂಟ್ಯೂಬಿನಲ್ಲಿರುವ ಯಾವುದೇ ವಿಡಿಯೋವನ್ನು ಆ್ಯಪ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಯೂಟ್ಯೂಬ್‌ ಆ್ಯಪ್‌ ಅನ್ನು ಬ್ಯಾಕ್‌ ಗ್ರೌಂಡಿನಲ್ಲಿ ಪ್ಲೇ ಮಾಡಬಹುದು. ಅಂದರೆ, ಯೂಟ್ಯೂಬ್‌ನಲ್ಲಿ ಯಾವುದೇ ವಿಡಿಯೊ ಪ್ಲೇ ಕಟ್‌ ಮಾಡದೆಯೇ, ಸ್ಮಾರ್ಟ್‌ಫೋನಿನಲ್ಲಿರುವ ಬೇರೆ ಆ್ಯಪ್‌ಗ್ಳಿಗೂ ಭೇಟಿ ಕೊಡಬಹುದು. ಹಿನ್ನೆಲೆಯಲ್ಲಿ  ಯೂಟ್ಯೂಬ್‌ ವಿಡಿಯೋ ಪ್ಲೇ ಆಗುತ್ತಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next