ಕೋಲ್ಕತ್ತಾ : ಬಂಗಾಳ ಚುನಾವಣೆಯ ಎರಡನೇ ಹಂತದ ಪ್ರಚಾರಕ್ಕಾಗಿ ಮಂಗಳವಾರ(ಮಾ. 30) ತೆರೆ ಬೀಳುತ್ತಿದ್ದಂತೆ, ನಾನು, ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ ಗೋತ್ರದವಳು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ನಂದಿಗ್ರಾಮದಲ್ಲಿ ದೇವಸ್ಥಾನಕ್ಕೆ ಬೇಟಿ ನೀಡಿರುವ ವಿಚಾರಕ್ಕೆ ಸ್ಪಂದಿಸಿದ ಮಮತಾ, ನನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ದೇವಸ್ಥಾನಕ್ಕೆ ಭೇಟಿ ನೀಡಿದೆ. ಅಲ್ಲಿ ದೇವಸ್ಥಾನದ ಪುರೋಹಿತರು ನನ್ನ ಗೋತ್ರವನ್ನು ಕೇಳಿದರು, ನಾನು ‘ಮಾ ಮತಿ ಮನುಷ್’ ಎಂದು ಅವರಿಗೆ ಹೇಳಿದೆ ಎಂದು ಹೇಳಿದ್ದಾರೆ.
ಓದಿ : ಅಂಧೇರಿ ಪಶ್ಚಿಮದ ಶ್ರೀ ಶಾಂತಾ ದುರ್ಗಾ ಮಂದಿರ: ವಾರ್ಷಿಕ ಭಜನ ಮಹೋತ್ಸವ
ತ್ರಿಪುರಾದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಅದು ನೆನಪಿಸಿತು. ಅಲ್ಲಿಯೂ ಕೂಡ ಪುರೋಹಿತರು ನನ್ನ ಗೋತ್ರವನ್ನು ಕೇಳಿದ್ದರು, ಆಗ ಕೂಡ ‘ಮಾ ಮತಿ ಮನುಷ್’ ಎಂದು ಹೇಳಿದ್ದೆ. ಆದಾಗ್ಯೂ, ನನ್ನ ಗೋತ್ರ ‘ಶಾಂಡಿಲ್ಯ’ ಎಂದು ಅವರು ತಿಳಿಸಿದ್ದಾರೆ.
ಮಮತಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, ‘ಇದು ನನ್ನ ಗೋತ್ರ ಎಂದು ನಾನು ಎಂದಿಗೂ ಹೇಳಬೇಕಾಗಿಲ್ಲ, ಆದರೆ ಚುನಾವಣೆಯಲ್ಲಿ ಸೋಲುವ ಭಯದಿಂದ ಮಮತಾ ಅದನ್ನು ಹೇಳುತ್ತಾರೆ. ಮಮತಾ ಬ್ಯಾನರ್ಜಿ, ರೋಹಿಂಗ್ಯಾಗಳು ಮತ್ತು ಅಕ್ರಮ ವಾಗಿ ಒಳನುಸುಳಿದವರು ಸಹ ಶಾಂಡಿಲ್ಯ ಗೋತ್ರದವರೇ ಎಂದು ದಯವಿಟ್ಟು ಹೇಳಿ ? ಆಕೆಯ ಸೋಲು ಖಚಿತ,” ಎಂದು ಹೇಳಿದ್ದಾರೆ.
ಓದಿ : ಶಿರ್ವ ಗ್ರಾ.ಪಂ. ಉಪ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು