Advertisement

ದತ್ತು ಮಗಳ ಬರ್ತ್ ಡೇ ಅದ್ದೂರಿಯಾಗಿ ಆಚರಿಸಿದ ನಟಿ ಸನ್ನಿ ಲಿಯೋನ್

02:39 PM Oct 15, 2021 | Team Udayavani |

ಮುಂಬೈ : ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ಅವರು ತಮ್ಮ ದತ್ತು ಪುತ್ರಿ ನಿಶಾ ವೇಬರ್ ಳ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

Advertisement

ಮುಂಬೈನಲ್ಲಿರುವ ತಮ್ಮ ಹೊಸ ಮನೆಯಲ್ಲಿ ಹಿರಿಯ ಮಗಳ ಜನ್ಮದಿವನ್ನು ಅದ್ಧೂರಿಯಾಗಿ ಆಚರಿಸಿರುವ ಸನ್ನಿ ಲಿಯೋನ್ ಹಾಗೂ ಡೇನಿಯಲ್ ದಂಪತಿ, ಈ ಸುಂದರ ಕ್ಷಣಗಳ ಫೋಟೊಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ “ನೀನು ನಮ್ಮ ಬಾಳಿನ ಬೆಳಕು” ಎಂದು ಪ್ರೀತಿಯಿಂದ ಶುಭ ಕೋರಿದ್ದಾರೆ.

ಸನ್ನಿ ಲಿಯೋನ್​ ಅವರ ಮಗಳು ನಿಶಾ ವೇಬರ್ 6ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಹೊಸ ಮನೆಯಲ್ಲಿ ಕೇಕ್​ ಕತ್ತರಿಸುವ ಮೂಲಕ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ ಸನ್ನಿ ಲಿಯೋನ್​. ಈ ಬರ್ತ್​ ಡೇ ಪಾರ್ಟಿಯಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದಾರೆ.

ಸನ್ನಿ ಲಿಯೋನ್‌ ಮತ್ತು ಪತಿ ಡೇನಿಯಲ್‌ ವೆಬರ್‌ ಅವರು 2017ರಲ್ಲಿ ಮಹಾರಾಷ್ಟ್ರದ ಲಾತೂರ್‌ನಿಂದ ಹೆಣ್ಣು ಮಗುವನ್ನು ದತ್ತು ಪಡೆದರು. ಈ ಮಗುವಿಗೆ ನಿಶಾ ಕೌರ್‌ ವೆಬರ್‌ ಎಂದು ನಾಮಕರಣ ಮಾಡಿದರು. ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆದಿದ್ದಾರೆ. ಎರಡು ವರ್ಷಗಳ ಸತತ ಪ್ರಯತ್ನದ ನಂತರ ನಿಶಾಳನ್ನು ಅನಾಥಾಶ್ರಮದಿಂದ ದತ್ತು ಪಡೆಯುವಲ್ಲಿ ಸನ್ನಿ ಲಿಯೋನ್​ ಹಾಗೂ ಡೇನಿಯಲ್​ ವೆಬರ್​ ಯಶಸ್ವಿಯಾಗಿದ್ದರು.

ನಿಶಾಳನ್ನು ದತ್ತು ಪಡೆದ ನಂತರದಲ್ಲಿ ಬಾಡಿಗೆ ತಾಯಿ ಮೂಲಕ ಮತ್ತೆ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಈಗ ಮೂವರು ಮಕ್ಕಳ ಜೊತೆ ಮುಂಬೈನಲ್ಲೇ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next