ನವದೆಹಲಿ: ಭಾರತೀಯ ಮಹಿಳೆಯರು ಸೋಮಾರಿಗಳು, ಎಲ್ಲದಕ್ಕೂ ಗಂಡ ಅಥವಾ ಪ್ರಿಯಕರನನ್ನು ಅವಲಂಬಿಸಿರುತ್ತಾರೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಸೋನಾಕ್ಷಿ ಕುಲಕರ್ಣಿ,ದೇಶದ ಮಹಿಳೆಯರ ಬಳಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಅಲ್ಲದೇ, ಇದು ಯಾರನ್ನೂ ನೋಯಿಸಲು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಎಂದು ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, “ಭಾರತದಲ್ಲಿ ಹಲವಾರು ಮಹಿಳೆಯರು ಸೋಮಾರಿಗಳಾಗಿರುತ್ತಾರೆ ಎನ್ನುವುದನ್ನು ನಾವು ಗಮನಿಸಿಯೇ ಇರುವುದಿಲ್ಲ. ಹೆಚ್ಚಿಗೆ ಸಂಪಾದಿಸುವ ಗಂಡ, ಪ್ರಿಯಕರ, ಮನೆ, ಕಾರು ಹೀಗೆ ಅಗತ್ಯವನ್ನೆಲ್ಲ ಅವರಿಂದಲೇ ಬಯಸುತ್ತಾ, ನಾವು ನಮಗಾಗಿ ದುಡಿಯುವುದನ್ನು ಸ್ವಾವಲಂಭಿಯಾಗಿ ಬದುಕುವುದನ್ನು ಮರೆತು ಬಿಟ್ಟಿರುತ್ತಾರೆ. ಮಹಿಳೆಯರನ್ನು ಸ್ವಾವಲಂಭಿಯಾಗಿಸಲು ಪ್ರೋತ್ಸಾಹಿಸಿ’ಎಂದಿದ್ದರು.