Advertisement

ಸದ್ದು ಗದ್ದಲವಿಲ್ಲದೇ ಮಜಲಬೆಟ್ಟು ಬೀಡುವಿನಲ್ಲಿ ನಟಿ ಶುಭಾ ಪೂಂಜಾ ವಿವಾಹ, ವರ ಯಾರು ಗೊತ್ತಾ?

03:38 PM Jan 05, 2022 | Team Udayavani |

ಉಡುಪಿ:ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬುಧವಾರ(ಜನವರಿ 05) ಶಿರ್ವದ ನಿವಾಸದಲ್ಲಿ ಸುಮಂತ್ ಜತೆ ಹಸೆಮಣೆ ಏರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿರುವುದಾಗಿ ಉದಯವಾಣಿ ಡಾಟ್ ಕಾಮ್ ಗೆ ಮೂಲಗಳು ತಿಳಿಸಿವೆ.

Advertisement

ಕಳೆದ ವರ್ಷವೇ ವಿವಾಹವಾಗುವ ವದಂತಿ ಇತ್ತು, ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಶುಭ ಪೂಂಜಾ ಸರಳವಾಗಿ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಮನೆಯರು, ಆತ್ಮೀಯರು, ಸ್ನೇಹಿತರು ಉಪಸ್ಥಿತರಿದ್ದರು ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಶುಭಾ, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರಯ, ಕಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಇನ್ಸ್ ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next