Advertisement

ಕ್ರೀಮ್ ಚಿತ್ರದ ಶೂಟಿಂಗ್ ವೇಳೆ ಅವಘಡ : ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಗಾಯ

11:16 PM Jul 27, 2022 | Team Udayavani |

ಬೆಂಗಳೂರು : ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಅವರು ಚಿತ್ರೀಕರಣ ವೇಳೆ ಸಂಭವಿಸಿದ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಸಂಜೆ ‘ಕ್ರೀಮ್​’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಫೈಂಟಿಂಗ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಡ್ಯೂಪ್​ ಬಳಕೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದರು. ಆದರೆ ಇದಕ್ಕೆ ನಟಿ ಸಂಯುಕ್ತಾ ಒಪ್ಪಿರಲಿಲ್ಲ. ಹೀಗಾಗಿ, ಅವರೇ ಈ ಸ್ಟಂಟ್ ಮಾಡಲು ಮುಂದಾಗಿದ್ದು ಈ ವೇಳೆ ಅವಘಡ ಸಂಭವಿಸಿ ಬಲ ಕಾಲು ಹಾಗೂ ಹಣೆಗೆ ಗಾಯವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಡಿ ಕೆ. ದೇವೇಂದ್ರ ಚಿತ್ರದ ನಿರ್ಮಾಪಕರಾಗಿದ್ದಾರೆ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಯುಕ್ತಾ ಹೆಗಡೆ ಚೇತರಿಸಿಕೊಂಡ ಬಳಿಕ ಚಿತ್ರೀಕರಣ ಮುಂದುವರೆಯಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next