ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ಸಪ್ತಮಿಗೌಡ ಭೇಟಿ ನೀಡಿದರು ದೇವಳದ ವತಿಯಿಂದ ಸಪ್ತಮಿ ಗೌಡ ಅವರನ್ನು ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಲಾಯಿತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಪ್ತಮಿ ಗೌಡ ಕಾಂತಾರ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ, ತುಳುನಾಡಿನ ದೈವಾರಾದನೆ ಬಗ್ಗೆ ನನಗೆ ಮೊದಲು ತಿಳಿದಿಲ್ಲ, ಕಾಂತರಾ ಚಿತ್ರದ ನಂತರ ತಿಳಿದೆ, ಬೇರೆ ಬೇರೆ ನಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದೆ, ತುಳುವಲ್ಲಿ ಅವಕಾಶ ಸಿಕ್ಕಿದರೆ ಖಂಡಿತ ನಟಿಸುವೆ ಎಂದು ಹೇಳಿದರು. ಸಪ್ತಮಿ ಜೊತೆ ನಟ ಸನಿಲ್ ಗುರು, ತಾಯಿ ಶಾಂತಿ ಇದ್ದರು.
ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಪ್ರಸಾದ ನೀಡಿ ಗೌರವಿಸಿದರು. ಈ ವೇಳೆ ಸಪ್ತಮಿ ಜೊತೆ ಅಭಿಮಾನಿಗಳು ಸೆಲ್ಪಿಗಾಗಿ ಮುಗಿ ಬಿದ್ದರು.
ಇದನ್ನೂ ಓದಿ : ಸಾಕು ನಾಯಿಯಿಂದ ದಾಳಿಗೊಳಗಾದ ಗುರುಗ್ರಾಮ್ನ ಮಹಿಳೆಗೆ 2 ಲಕ್ಷ ಪರಿಹಾರ!