Advertisement

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ಸ್‌-ಸೆನ್‌ ಠಾಣೆಯಲ್ಲಿ ದೂರು

08:42 AM Jun 10, 2022 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಅಶ್ಲೀಲ ಕಮೆಂಟ್‌ ಹಾಕಿ ಟ್ಯಾಗ್‌ ಮಾಡಿದ ವ್ಯಕ್ತಿಯ ವಿರುದ್ಧ ನಟಿ ರಮ್ಯಾ ಕೇಂದ್ರವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಗುರುವಾರ ಕೇಂದ್ರ ವಿಭಾಗದ ಸೆನ್‌ ಠಾಣೆಗೆ ನಟಿ ರಮ್ಯಾ ಖುದ್ದು ಹಾಜರಾಗಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಮ್‌ ಖಾತೆಯಲ್ಲಿ ರಮ್ಯಾ ದಿವ್ಯ ಸ್ಪಂದನಾ ಎಂಬ ಹೆಸರಿನ ಖಾತೆ ಹೊಂದಿದ್ದಾರೆ. ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ನಟನೆಯ ಚಾರ್ಲಿ 777 ಕನ್ನಡ ಚಲನಚಿತ್ರ ಚೆನ್ನಾಗಿದೆ ಎಂದು ಜೂ.6ರಂದು ರಮ್ಯಾ ಪ್ರಕಟಿಸಿದ್ದರು. ಜೂ.8ರಂದು ಪ್ರೀತಮ್‌ ಡಾಟ್‌ ಪ್ರಿನ್ಸ್‌ ಡಾಟ್‌ ಕೆ ಹೆಸರಿನ ಇನ್‌ಸ್ಟ್ರಾಗ್ರಾಂ ಖಾತೆ ಹೊಂದಿರುವ ವ್ಯಕ್ತಿ ರಮ್ಯಾ ಬಗ್ಗೆ ಅಶ್ಲೀಲ ಪದಗಳಿಂದ ಕಮೆಂಟ್‌ ಮಾಡಿ, ಪೋಸ್ಟ್‌ ಮಾಡಿ, ರಮ್ಯಾಗೆ ಟ್ಯಾಗ್‌ ಮಾಡಿದ್ದ.

ಈ ಹಿನ್ನೆಲೆಯಲ್ಲಿ “ನನ್ನ ಮಾನಕ್ಕೆ ಧಕ್ಕೆಯುಂಟು ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ’ ರಮ್ಯಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸದ್ಯ ರಮ್ಯಾ ದೂರಿನ ಅನ್ವಯ ಎಫ್ಐಆರ್‌ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೆನ್‌ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಿಸುವ ಮೊದಲು ನಟಿ ರಮ್ಯಾ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿಯನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದ್ದರು.ಆರೋಪಿಯನ್ನು ಬಂಧಿಸುವಂತೆ ಕಮಿಷನರ್‌ಗೂ ಮನವಿ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next