Advertisement

UAE ಜೈಲಿಂದ ನಟಿ ಕ್ರಿಸನ್‌ ಬಿಡುಗಡೆ

08:47 PM Apr 27, 2023 | Team Udayavani |

ಮುಂಬೈ: ವಂಚನೆಗೊಳಗಾಗಿ ಯುಎಇಗೆ ಉದ್ದೀಪನ ಕೊಂಡೊಯ್ದಿದ್ದ ಬಾಲಿವುಡ್‌ ನಟಿ ಕ್ರಿಸನ್‌ ಪೆರೀರಾ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ರವಿ ಬೊಬØಟೆ, ಆ್ಯಂಥೋನಿ ಪೌಲ್‌ ಎಂಬಿಬ್ಬರು ಹಾಲಿವುಡ್‌ನ‌ಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ, ಶಾರ್ಜಾಗೆ ಕಳುಹಿಸಿದ್ದರು. ಅಲ್ಲಿ ಆಡಿಶನ್‌ ನಡೆಯಲಿದೆ, ಈ ವೇಳೆ ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಒಂದು ಸ್ಮರಣಿಕೆ ಕೊಡಿ ಎಂದೂ ತಿಳಿಸಿದ್ದರು. ಆ ಸ್ಮರಣಿಕೆಯಲ್ಲಿ ಪುಟ್ಟಪ್ರಮಾಣದಲ್ಲಿ ಉದ್ದೀಪನ ಇತ್ತು.

Advertisement

ಶಾರ್ಜಾ ವಿಮಾನ ನಿಲ್ದಾಣದಲ್ಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಕೆಯ ತಾಯಿಗೂ 80 ಲಕ್ಷ ರೂ. ವಂಚಿಸಲು ರವಿ ಮತ್ತು ಆ್ಯಂಥೋನಿ ಯತ್ನಿಸಿದ್ದಾರೆ. ಸದ್ಯ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next