Advertisement

ನಟಿ ಖುಷ್ಬೂ ಸೇರಿ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ತಮಿಳುನಾಡು ಪೊಲೀಸರು

11:10 AM Oct 27, 2020 | keerthan |

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುಂದರ್ ಗೆ ತಮಿಳುನಾಡು ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

Advertisement

ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಥೋಲ್ ತಿರುಮಾವಾಲವನ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಖುಷ್ಬೂ ಚಿದಂಬರಂಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಹೊರವಲಯದಲ್ಲಿರುವ ಮುತ್ತಕಾಡು ಎಂಬಲ್ಲಿ ಅವರನ್ನು ತಡೆದ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಟಿ ರಾಘವನ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಟಿಂಡಿವನಂ ಟೋಲ್ ಗೇಟ್ ಬಳಿ ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಖುಷ್ಬೂ ಟ್ವೀಟ್ ಮಾಡಿದ್ದು, ‘ಬಂಧನಕ್ಕೆ ಒಳಗಾಗಿದ್ದೇನೆ.. ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಗುತ್ತಿದೆ. ಮಹಿಳೆಯರ ಗೌರವಕ್ಕಾಗಿ ನಮ್ಮ ಕೊನೆ ಉಸಿರಿನವರೆಗೂ ಹೋರಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲಿ ಸಾಗುತ್ತಿದ್ದೇವೆ. ಕೆಲವು ಕೆಟ್ಟ ವ್ಯಕ್ತಿಗಳ ದೌರ್ಜನ್ಯಕ್ಕೆ ನಾವು ಮಂಡಿಯೂರುವುದಿಲ್ಲ. ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಅಠವಳೆ ಪಕ್ಷ ಸೇರ್ಪಡೆ

Advertisement

ಮತ್ತೊಂದು ಟ್ವೀಟ್ ಮಾಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲವೇ? ನನ್ನ ಪ್ರಯಣಕ್ಕೆ ಅವಕಾಶ ನೀಡದೆ ಹಕ್ಕು ಕಸಿದುಕೊಳ್ಳಲಾಗಿದೆ. ಈ ಘಟನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಚಿದಂಬರಂ ಸಂಸದ ಥೋಲ್ ತಿರುಮಾವಾಲವನ್ ಅವರು, ಮನುಸ್ಮೃತಿ ಹಾಗೂ ಮಹಿಳೆಯರ ಕುರಿತು ಅದರ ದೃಷ್ಟಿಕೋನದ ಬಗ್ಗೆ ವ್ಯಂಗ್ಯವಾಡಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ವೆಬಿನಾರ್‌ನಲ್ಲಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next