ನವ ದೆಹಲಿ : ಜನಪ್ರಿಯ ಬ್ರಿಟಿಷ್ ನಟಿ, ಸಾಮಾಜಿಕ ಹೋರಾಟಗಾರ್ತಿ ಮತ್ತು ರೇಡಿಯೋ ನಿರೂಪಕಿಯೂ( ಆರ್ ಜೆ) ಆಗಿರುವ ಜಮೀಲಾ ಜಮಿಲ್ ಅವರು ಭಾರತೀಯ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ಕಾರಣದಿಂದಾಗಿ ಭಯಾನಕ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓದಿ: ದೇವದಾಸಿ ಕುಟುಂಬದ ಹನಮವ್ವಳಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ
“ಕಳೆದ ಕೆಲವು ತಿಂಗಳುಗಳಿಂದ ನಾನು ಭಾರತದ ರೈತರ ಪ್ರತಿಭಟನೆಯ ಬಗ್ಗೆ ಮತ್ತು ಅಲ್ಲಿ ನಡೆಯುತ್ತಿರುವ ಪ್ರಸ್ತುತ ವಿಚಾರಗಳ ಬಗ್ಗೆ ‘ಪದೇ ಪದೇ’ ಮಾತನಾಡಿದ್ದೇನೆ, ಆದರೇ, ಇದೇ ಕಾರಣದಿಂದಾಗಿ ಪ್ರತಿ ಬಾರಿ ನಾನು ಸಾವು ಮತ್ತು ಅತ್ಯಾಚಾರ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ. ಸಂದೇಶಗಳಲ್ಲಿ ನನ್ನ ಮೇಲೆ ಒತ್ತಡ ಹೇರುತ್ತಿರುವಾಗ, ನಿಭಾಯಿಸಬಲ್ಲೆ ಎಂಬುದಕ್ಕೆ ಕೆಲವು ಮಿತಿಗಳನ್ನು ಹೊಂದಿರುವ ಮನುಷ್ಯೆ ನಾನು ಎಂಬುದನ್ನು ನೆನಪಿನಲ್ಲಿಡಿ.” ಎಂದು ಜಮೀಲಾ ಜಮಿಲ್ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಜಮೀಲಾ ಅವರ ತಂದೆ ಅಲಿ ಜಮಿಲ್ ಭಾರತೀಯ ಮೂಲದವರು ಮತ್ತು ತಾಯಿ ಶಿರೀನ್ ಜಮಿಲ್ ಪಾಕಿಸ್ತಾನ ಮೂಲದವರಾಗಿದ್ದಾರೆ.
ಓದಿ: ತೆಂಡೂಲ್ಕರ್ “ಭಾರತ ರತ್ನ”ಕ್ಕೆ ಅರ್ಹರಲ್ಲ : RJD ಉಪಾಧ್ಯಕ್ಷರ ವಿವಾದಾತ್ಮಕ ಹೇಳಿಕೆ