ದುಬೈ: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ವದಂತಿಗಳ ಊಹಾಪೋಹಗಳ ನಡುವೆ ಜನಪ್ರಿಯ ಪಾಕಿಸ್ತಾನಿ ನಟಿ ಆಯೇಷಾ ಒಮರ್ ಹೆಸರು ಗಮನ ಸೆಳೆಯುತ್ತಿದೆ.
ಸಾನಿಯಾ ಅವರ ನಿಗೂಢ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ನಂತರ ಅವರ ವೈವಾಹಿಕ ಜೀವನದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿದೆ. ಒಂದು ಮೂಲದ ಪ್ರಕಾರ ಸಾನಿಯಾ- ಮಲಿಕ್ ವಿಚ್ಚೇದನವಾಗಿದೆ ಎನ್ನಲಾಗಿದೆ. ಇವರಿಬ್ಬರೂ ಈಗ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಪಾಕಿಸ್ತಾನಿ ಮಾಡೆಲ್ ಆಯೇಷಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ.
ಇದನ್ನೂ ಓದಿ:ಮುಂದುವರಿದ ‘ಆಹ್ವಾನ’ ರಾಜಕೀಯ: ಅಸಲಿ ಕಥೆಯನ್ನು ಬಿಜೆಪಿ ಮುಚ್ಚಿಡುತ್ತಿದೆ ಎಂದ ಜೆಡಿಎಸ್
Related Articles
ಆಯೇಷಾ ಒಮರ್ ವಿವಾದಗಳಿಗೆ ಹೊಸತಲ್ಲ. ಆಕೆ ತನ್ನ ಹೇಳಿಕೆಗಳಿಂದ ಪದೇ ಪದೇ ವಿವಾದಗಳಿಗೆ ಗುರಿಯಾಗುತ್ತಾಳೆ. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಪ್ರತ್ಯೇಕತೆಯ ವದಂತಿಗಳ ನಡುವೆ ಆಯೇಷಾ ಮತ್ತು ಮಲಿಕ್ ನಡುವಿನ ಚಿತ್ರವೊಂದು ಇಂಟರ್ನೆಟ್ ನಲ್ಲಿ ತಿರುಗಾಡುತ್ತಿದೆ.
ಕೆಲ ಸಮಯದ ಹಿಂದೆಯೇ ಮಾಡಿದ ಬೋಲ್ಡ್ ಫೋಟೋಶೂಟ್ ನ ಚಿತ್ರವೊಂದು ಈಗ ಹರಿದಾಡುತ್ತಿದೆ. ಇದೇ ಕಾರಣದಿಂದ ನಟಿ ಆಯೇಶಾ ಒಮರ್ ಅವರ ಹೆಸರು ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.