Advertisement

ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು?: ಅನಂತ್ ನಾಗ್ ಬೆಂಬಲಕ್ಕೆ ನಿಂತ ಯಶ್

01:25 PM Jul 21, 2021 | Team Udayavani |

ಬೆಂಗಳೂರು :  ಚಂದನವನದ ಹಿರಿಯ ನಟ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎನ್ನುವ ಕನ್ನಡಿಗರ ಕೂಗಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಬೆಂಬಲ ಸೂಚಿಸಿದ್ದಾರೆ.

Advertisement

ಈ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಅರ್ಹ ವ್ಯಕ್ತಿಗಳ ನಾಮನಿರ್ದೇಶನದ ಹೊಣೆಯನ್ನು ಜನರಿಗೆ ನೀಡಿದ ಬೆನ್ನಲ್ಲೆ ಕನ್ನಡದಲ್ಲಿ ಇಬ್ಬರು ನಟ ಹೆಸರುಗಳು ಮುಂಚೂಣಿಯಲ್ಲಿ ಬಂದಿವೆ. ಅನಂತ್ ನಾಗ್ ಹಾಗೂ ವೈಜನಾಥ್ ಬಿರಾದಾರ್ ಅವರ ಹೆಸರುಗಳು ಕೇಳಿ ಬಂದಿವೆ.

ಮೊನ್ನೆಯಿಂದ ಪದ್ಮ ಫಾರ್ ಅನಂತ್ ನಾಗ್ ಅಭಿಯಾನಕ್ಕೆ ಇದೀಗ ಯಶ್ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಅನಂತ್ ನಾಗ್ ಕರ್ನಾಟಕದ ಹೆಮ್ಮೆ, ಭಾರತೀಯ ಚಿತ್ರರಂಗ ಅಭಿಜ್ಞಾ’ ಎಂದು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಅಭಿನಯ ಎನ್ನುವುದು ವರ್ತನೆ ಎಂದು ಅನಂತ್ ನಾಗ್ ಅವರು ಒಮ್ಮೆ ಹೇಳಿದ್ದರು. ಆ ಮಾತು ನನ್ನಲ್ಲಿ ಇನ್ನು ಉಳಿದಿದೆ. ಅವರ ಹಾಸ್ಯ ಪ್ರಧಾನ ಸಿನಿಮಾಗಳನ್ನು ನೋಡಿ ನಕ್ಕವನು ನಾನು ಬೆಳೆದವನು ನಾನು. ಅವರ ಅತ್ತಾಗ ನನ್ನ ಕಣ್ಣು ಸಹ ಒದ್ದೆಯಾಗಿತ್ತು. ಆ ಮಹಾನ್ ಕಲಾವಿದನ ಜೊತೆ ನಟಿಸಬೇಕು ಎನ್ನುವ ಹಂಬಲ ಎಂದೆಂದಿಗೂ ಇರಲಿದೆ’.

‘ಅನಂತ್ ನಾಗ್ ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಕಿರುತೆರೆಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದ ದಿನಗಳಿಂದಲೂ ಈ ಅದ್ಭುತ ಕಲಾವಿದನ ಜೊತೆ ನಟಿಸುವ ಅದೃಷ್ಟ ನನಗೆ ಸಿಕ್ಕಿದೆ. ಅನಂತ್ ನಾಗ್ ಅವರ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಕರ್ನಾಟಕ ಹೆಮ್ಮೆ. ಅವರು ಕೇವಲ ನಟರಲ್ಲ ಅವರು ಭಾರತೀಯ ಸಿನಿಮಾರಂಗದ ಅಭಿಜ್ಞಾ. ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು?” ಎಂದು ನಟ ಯಶ್ ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next